ಮೈಸೂರು

ಸಂತೋಷ, ಸೌಹಾರ್ದತೆಯೆ ನಮ್ಮ ಆಸ್ತಿ

Published On :

ಕ.ಪ್ರ.ವಾರ್ತೆ ಮೈಸೂರು ಏ. 20
ಜಾಗತೀಕರಣದ ಇಂದಿನ ದಿನಗಳಲ್ಲಿ ಸಮಾಜದಲ್ಲಿ ಶಾಂತಿ ನಿರ್ಮಿಸಿ, ಸಂತೋಷ ಮತ್ತು ಸೌಹಾರ್ದತೆ ಹಂಚಿಕೊಳ್ಳುವುದೆ ದೊಡ್ಡ ಆಸ್ತಿಯಾಗಿ ಉಳಿದಿದೆ ಎಂದು ಸರ್ವೊಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಅಭಿಪ್ರಾಯಪಟ್ಟರು.
ಬಡಗನಾಡು ಬಳಗವು ರಾಮಕೃಷ್ಣನಗರದ ಬಡಗನಾಡು ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಂಸ್ಥೆಯ ರಜತ ಮಹೋತ್ಸವ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಶೈಕ್ಷಣಿಕ ವ್ಯವಸ್ಥೆ ಕುಸಿಯುತ್ತಿದೆ. ಬಡವರು ಅಥವಾ ಸಾಮಾನ್ಯ ಜನರು ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಕೊಡಿಸಲಾಗದ ಸ್ಥಿತಿಯಲ್ಲಿದ್ದಾರೆ. ವಿಶ್ವವಿದ್ಯಾಲಯಗಳು ಹೆಚ್ಚಿದಂತೆ ಸಂಶೋಧನೆ ಹೆಚ್ಚಬೇಕು. ಆದರೆ ಅದಕ್ಕೆ ತದ್ವಿರುದ್ಧವಾಗಿದೆ. ಕೇವಲ ಶಿಕ್ಷಣ ನೀಡಿದರೆ ಸಾಲದು ಉದ್ಯೋಗಾವಕಾಶ ನೀಡುವ ಶಿಕ್ಷಣ ಬೇಕು. ಈ ನಿಟ್ಟಿನಲ್ಲಿ ಬಡಗನಾಡು ಬಳಗದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ದಿನೆ ದಿನೆ ಜನಸಂಖ್ಯೆ ಹೆಚ್ಚುತ್ತಿದೆ. ಒಂದು ಕಾಲಘಟ್ಟಕ್ಕೆ ಭಾರತ ಅರಾಜಕತೆಗೆ ತಲುಪುತ್ತದೆ ಎಂದು ಹೇಳುತ್ತಿದ್ದ ಮಾತು ಈಗ ನಿಜ ಎನಿಸುತ್ತದೆ. ಅಂತಹ ಸ್ಥಿತಿಯಲ್ಲಿದ್ದೇವೆ. ಬಹಳ ಮಂದಿ ನಮ್ಮ ಸಮಾಜದ ನ್ಯಾಯಾಲಯ ವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಈ ಜಾಗತೀಕರಣದ ಅಂತಿಮ ಹಂತ ತಲುಪಲು ಇನ್ನೂ ಎಷ್ಟೋ ಮೆಟ್ಟಿಲುಗಳನ್ನು ನಾವು ಏರಬೇಕು. ಅಲ್ಲಿಯವರೆಗೆ ಏನೇನಾಗುತ್ತದೆಯೋ ಗೊತ್ತಿಲ್ಲ. ಆದ್ದರಿಂದ ಸಮಾಜದಲ್ಲಿ ಶಾಂತಿ ನಿರ್ಮಾಣ, ಸಂತೋಷ ಮತ್ತು ಸೌಹಾರ್ದತೆಯ ಹಂಚಿಕೆಯೇ ಮುಖ್ಯ ಆಸ್ತಿ ಎಂದು ತಿಳಿಯಬೇಕು ಎಂದರು.
ತ್ರಿಮತಸ್ಥ ಬ್ರಾಹ್ಮಣ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಬಳಗದ ಅಧ್ಯಕ್ಷ ಡಾ.ವೈ. ನಾರಾಯಣರಾವ್, ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಬಿ.ಎನ್. ಪ್ರಭಾಕರ್, ಖಜಾಂಚಿ ಶಶಿಧರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.