ಮೈಸೂರು

ಶಾಸನಬದ್ಧ ಅಧಿಕಾರಕ್ಕೆ ಕಾಯಬೇಕಿಲ್ಲ

Published On :

ಕ.ಪ್ರ.ವಾರ್ತೆ ್ಣ ಮೈಸೂರು ್ಣ ಏ. 24
ರಾಜಕೀಯದಲ್ಲಿ ಮಹಿಳೆಯರಿಗೆ ನೀಡಬೇಕಾದ ಶಾಸನಬದ್ಧ ಅಧಿಕಾರಕ್ಕೆ ಕಾಯುವ ಅಗತ್ಯವಿಲ್ಲ ಎಂದು ಸಮಾಜ ಸೇವಕ ಕೆ.ರಘುರಾಂ ಅಭಿಪ್ರಾಯಪಟ್ಟರು.
ಕುವೆಂಪುನಗರದ ವೀಣೆ ಶೇಷಣ್ಣ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ಮಹಿಳಾ ವೇದಿಕೆ ನೂತನ ಸಂಘಟನೆ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಅನೇಕ ವರ್ಷಗಳಿಂದ ರಾಜಕೀಯದಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವ ಬಗ್ಗೆ ಕೇವಲ ಚರ್ಚೆಗಳು ಮಾತ್ರ ನಡೆದಿವೇ ಹೊರತು, ಅದು ಅನುಷ್ಠಾನವಾಗಿಲ್ಲ. ಜನಸಂಖ್ಯೆಯಲ್ಲಿ ಶೇ.50 ರಷ್ಟು ಇರುವ ಮಹಿಳೆಯರಿಗೆ ಸಹಜವಾಗಿ ಶೇ.50 ಮೀಸಲಾತಿ ದೊರಕಬೇಕು. ಇಂತಹ ಶಾಸನಬದ್ಧ ಅಧಿಕಾರಕ್ಕೆ ಕಾಯದೆ, ರಾಜಕೀಯ ಪಕ್ಷಗಳು ಶೇ.50 ರಷ್ಟು ಟಿಕೆಟ್‌ಗಳನ್ನು ಮಹಿಳೆಯರಿಗೆ ಕೊಡಲು ಮುಂದಾದರೆ, ವಿಧಾನಸಭೆ ಹಾಗೂ ಸಂಸತ್ತಿಗೆ ಅವರು ಆರಿಸಿ ಬರಲು ಸಾಧ್ಯವಾಗಲಿದೆ ಎಂದರು.
ಮಹಿಳೆಯರಿಗೆ ಸಂಯಮ ಹಾಗೂ ಸಹನೆ ಇರುವುದರಿಂದ ಆಕೆ ಸಮಾಜವನ್ನು ನಿಭಾಯಿಸುವ ಶಕ್ತಿ ಹಾಗೂ ಸಾಮರ್ಥ್ಯವನ್ನು ಹೆಚ್ಚಾಗಿ ಹೊಂದಿದ್ದಾಳೆ ಎಂದ ಅವರು, ಮಾತೆಯರ ಸ್ಥಾನ ಮಹತ್ವವಾದುದು. ಮನೆಯಲ್ಲಿ ತಾಯಿಯ ಪ್ರೋತ್ಸಾಹ ಇಲ್ಲದೆ ಶಿಕ್ಷಣವಾಗಲಿ, ಕಲೆಯಾಗಲಿ ಅಥವಾ ಯಾವುದೇ ಸಾಧನೆಯಾಗಲಿ ಸಾಧ್ಯವಿಲ್ಲ ಎಂದು ತಿಳಿಸಿದರು.
ಸಂಸ್ಕಾರ ಮೂಡಿಸುವ ಕೆಲಸವಾಗಲಿ: ಇಂದಿನ ವೇಗದ ಬದುಕಿನಲ್ಲಿ ಸಂಸ್ಕೃತಿ ಹಾಗೂ ಕಲೆಗಳನ್ನು ಮರೆಯಲಾಗುತ್ತಿದ್ದು, ಮಕ್ಕಳಿಗೆ ವಿಶೇಷವಾಗಿ ಸಂಸ್ಕಾರ ಮೂಡಿಸುವ ಕೆಲಸ ಹೆಚ್ಚಾಗಿ ನಡೆಯಬೇಕು. ಹೆಣ್ಣುಮಕ್ಕಳಿಗೂ ಬೇಸಿಗೆ ತರಬೇತಿ ಶಿಬಿರ ಆಯೋಜಿಸುವಲ್ಲಿ ಮಹಿಳಾ ಸಂಘಟನೆಗಳು ಮುಂದಾಗಬೇಕು ಎಂದು ಸಲಹೆ ನೀಡಿದರು.
ಯೋಗನರಸಿಂಹಸ್ವಾವು ದೇವಸ್ಥಾನದ ಸಂಸ್ಥಾಪಕ ಡಾ.ಭಾಷ್ಯಂ ಸ್ವಾಮಿ ವೇದಿಕೆ ಫಲಕವನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಕರಕುಶಲ ಕಲಾವಿದೆ ಮಣಿ ಶೇಖರ್, ಮಾತನಾಡುವ ಣ್ಚಂಬೆ ಕಲಾವಿದೆ ಸುಮಾ ರಾಜಕುಮಾರ್, ಸೌಂದರ್ಯ ತಜ್ಞೆ ಉಮಾ ಜಾದವ್, ಲಲಿತ ಕಲೆ ಕಲಾವಿದೆ ಯದುಗಿರಿ ಗೋಪಾಲನ್ ಹಾಗೂ ಸಮಾಜ ಸೇವಕಿ ಶಶಿಕಲಾ ಜಯಕುಮಾರ್ ಅವರನ್ನು ಸನ್ಮಾನಿಸಲಾಯಿತು. ಚಿತ್ರನಟಿ ಸುಧಾ ನರಸಿಂಹರಾಜು, ರಂಗನಟಿ ಸರೋಜಾ ರಮೇಶ್, ನಿರೂಪಕ ವಿಕ್ರಂ ಮುಖ್ಯ ಅತಿಥಿಯಾಗಿದ್ದರು. ವೇದಿಕೆ ಅಧ್ಯಕ್ಷೆ ಸುಮನಾ ರಘುನಂದನ್ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.