ಅರ್ಥಪೂರ್ಣ ಬಸವ ಜಯಂತಿ ಆಚರಣೆಗೆ ನಿರ್ಧಾರ
ಮೈಸೂರು: ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು, ಪ್ರತಿಯೊಬ್ಬರ ಸಲಹೆ ಸಹಕಾರ ಅತ್ಯಗತ್ಯ ಎಂದು ಬಸವ ಬಳಗಗಳ ಒಕ್ಕೂಟ ಮತ್ತು 2014ರ ಬಸವ ಜಯಂತಿ ಅಧ್ಯಕ್ಷ ಕೆ.ನಾಗರಾಜ್ ಕರೆ ನೀಡಿದರು.
ಶ್ರೀ ನಟರಾಜ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದಲೂ ಜಿಲ್ಲಾ ವೀರಶೈವ ಮಹಾಸಭಾ, ಮೈಸೂರು ಬಸವ ಬಳಗಗಳ ಒಕ್ಕೂಟದ ಆಶ್ರಯದಲ್ಲಿ ನಡೆದುಕೊಂಡು ಬರುತ್ತಿರುವ ಜಯಂತಿಯನ್ನು ಈ ಬಾರಿ ವಿಶೇಷವಾಗಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಸಲು ಸರ್ವಸಿದ್ಧತೆ ಮಾಡಲಾಗಿದ್ದು, 12 ಉಪಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು. ಮೇ 2 ರಂದು ಬೆಳಗ್ಗೆ ಡಾ.ಶಿವರಾತ್ರಿ ರಾಜೇಂದ್ರ ವೃತ್ತದಲ್ಲಿರುವ ಬಸವ ಪುತ್ಥಳಿಗೆ ಹರಗುರುಚರುಮೂರ್ತಿಗಳು ಮತ್ತು ಬಸವ ತತ್ವಾಭಿಮಾನಿಗಳ ಸಮ್ಮುಖದಲ್ಲಿ ಸಾಂಕೇತಿಕವಾಗಿ ಮಾಲಾರ್ಪಣೆ ಮಾಡಲಾಗುವುದು. ಜೂ.7 ಮತ್ತು 8 ರಂದು ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಸಭಾಮಂಟಪದಲ್ಲಿ ಬಸವ ಜಯಂತಿ ಸಮಾರಂಭ ನಡೆಯಲಿದೆ. 7ರ ಬೆಳಗ್ಗೆ ಬಸವ ಜಯಂತಿ ಮೆರವಣಿಗೆಯು ಬಸವ ಪುತ್ಥಳಿಯಿಂದ ಪ್ರಾರಂಭವಾಗಿ ಪ್ರಮುಖ ರಸ್ತೆಯ ಮುಖಾಂತರ ಸುತ್ತೂರು ಮಠಕ್ಕೆ ತಲುಪುವುದು ಎಂದು ಹೇಳಿದರು. ಹೊಸಮಠಾಧ್ಯಕ್ಷ ಚಿದಾನಂದ ಸ್ವಾಮೀಜಿ, ಕುದೇರು ಮಠಾಧ್ಯಕ್ಷ ಗುರುಶಾಂತ ಸ್ವಾಮೀಜಿ, ನೀಲಕಂಠ ಮಠಾಧ್ಯಕ್ಷರು, ದಂಕೆರೆ ಮಠಾಧ್ಯಕ್ಷರು ಇದ್ದರು. ಜಿಲ್ಲಾ ವೀರಶೈವ ಮಹಾಸಭಾಧ್ಯಕ್ಷ ಎಚ್.ವಿ. ಬಸವರಾಜು, ವೀರಶೈವ ಮುಖಂಡರಾದ ಕೆ.ಎನ್. ಪುಟ್ಟಬುದ್ದಿ, ಪುಟ್ಟರಾಜಪ್ಪ, ಎಲ್.ವಿ. ಲೋಕೇಶ್ಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

