ರಾಮದೇವ್ ವಿರುದ್ಧ ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಏ. 27
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ದಲಿತರ ಮನೆಗೆ ಹೋಗುವುದು ಮೋಜು ಮಾಡಲು ಎಂದು ಹೇಳಿಕೆ ನೀಡಿರುವ ಬಾಬಾ ರಾಮದೇವ್ ವಿರುದ್ಧ ನಗರದಲ್ಲಿ ಯುವ ಕಾಂಗ್ರೆಸ್ ಹಾಗೂ ದಲಿತ ಸಂಘರ್ಷ ಸಮಿತಿಯವರು ಭಾನುವಾರ ಪ್ರತ್ಯೇಕ ಕಡೆಗಳಲ್ಲಿ ಪ್ರತಿಭಟಿಸಿದರು.
ನಗರದ ನ್ಯಾಯಾಲಯದ ಎದುರು ಗಾಂಧಿ ಪುತ್ಥಳಿ ಬಳಿ ಬಾಬಾ ರಾಮದೇವ್ ಅವರ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡುವ ಮೂಲಕ ಯುವ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬಾಬಾ ರಾಮದೇವ್ ಅವರನ್ನು ಬಂಧಿಸಿ, ದೇಶದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ಎಸ್. ರಘು, ಮುಖಂಡರಾದ ಶಿವಮಲ್ಲು, ಪಿ.ರಾಜು, ಸಂತೋಷ್ಕುಮಾರ್, ನದೀಮ್ ಅಹಮ್ಮದ್, ಮಂಜುನಾಥ್, ನಂಜುಂಡ, ಮೌಸೀಂ, ಸಂಜಯ್, ರವಿ, ಹರೀಶ್ಗೌಡ, ಅಯೂಬ್, ಮಧು, ಯೋಗಾನಂದ, ಮೋನೀತ್ಗೌಡ, ವಿನಯ್ಕುಮಾರ್, ವಿನೋದ್, ಸೂರಜ್, ರಾಜೀವ್, ಶ್ರೀನಿವಾಸ್, ವಿಶ್ವ, ಗುರುದತ್, ಮಹದೇವು ಇದ್ದರು.
ದಸಂಸ ಪ್ರತಿಭಟನೆ: ರಾಹುಲ್ ಗಾಂಧಿ ಅವರು ದಲಿತರ ಮನೆಗೆ ಹೋಗುವುದು ಪಿಕ್ನಿಕ್ ಮತ್ತು ಹನಿಮೂನ್ಗಾಗಿ ಎಂದು ಹೇಳಿಕೆ ನೀಡಿರುವ ಬಾಬಾ ರಾಮದೇವ್ ವಿರುದ್ಧ ನಗರದ ಗಾಂಧಿ ಚೌಕದಲ್ಲಿ ದಸಂಸ ಕಾರ್ಯಕರ್ತರು ಪ್ರತಿಭಟಿಸಿದರು.
ರಾಮದೇವ್ಗೆ ರಾಜಕೀಯ ಇಚ್ಛಾಶಕ್ತಿ ಇದ್ದರೆ ರಾಹುಲ್ ಗಾಂಧಿ ಅವರ ವಿರುದ್ಧ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಲಿ. ಸಂವಿಧಾನ ಅವರಿಗೂ ಅಂತಹ ಅವಕಾಶ ನೀಡಿದೆ. ಅದನ್ನು ಬಿಟ್ಟು ದಲಿತರ ಸ್ವಾಭಿಮಾನ ಕೆಣಕುವ ಕೃತ್ಯಕ್ಕೆ ಕೈ ಹಾಕಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಾಬಾ ರಾಮದೇವ್ ವಿರುದ್ಧ ಎಸ್ಸಿ, ಎಸ್ಟಿ ಕಾಯ್ದೆ, ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಬೇಕು. ಹಾಗೂ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ದಸಂಸ ಜಿಲ್ಲಾ ಸಂಘಟನಾ ಸಂಚಾಲಕರಾದ ಆಲಗೂಡು ಶಿವಕುಮಾರ್, ರತ್ನಪುರಿ ಪುಟ್ಟಸ್ವಾಮಿ, ಶಂಭುಲಿಂಗಸ್ವಾಮಿ, ಚೋರನಹಳ್ಳಿ ಶಿವಣ್ಣ, ಮುಖಂಡರಾದ ಜೆ.ಭೀಮರಾಜ್, ಡಿ.ರಮೇಶ್ ಕಲ್ಲಹಳ್ಳಿ, ಬಿ.ಡಿ. ಶಿವಬುದ್ಧಿ, ಎಸ್.ಆರ್. ರಾಜಣ್ಣ, ಸೋಮಣ್ಣ, ಅಪ್ಸರ್ ಇದ್ದರು.
ಆಗ್ರಹ: ರಾಹುಲ್ ಗಾಂಧಿ ಮತ್ತು ದಲಿತ ಮಹಿಳೆಯರ ಬಗ್ಗೆ ಬಾಬಾ ರಾಮದೇವ್ ನೀಡಿರುವ ಹೇಳಿಕೆ ಖಂಡನೀಯ. ಅವರನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಡಿಸಿಸಿ ಸದಸ್ಯೆ ಹಾಗೂ ಸಾಹುಕಾರ್ ಚೆನ್ನಯ್ಯ ಬ್ಲಾಕ್ ಪರಿಶಿಷ್ಟ ಜಾತಿ ಅಧ್ಯಕ್ಷೆ ಮಂಗಳಗೌರಿ (ಮಾಲ) ಆಗ್ರಹಿಸಿದ್ದಾರೆ.
ವಿಕೃತ ಮನಸ್ಸಿನ ಬಾಬಾ ರಾಮದೇವ್ ಅವರನ್ನು ಬಂಧಿಸಿ ದೇಶದಿಂದ ಗಡಿಪಾರು ಮಾಡಿ ಭಾರತವನ್ನು ಗೆಲ್ಲಿಸುವಂತೆ ನಂಜನಗೂಡು ತಾಲೂಕು ಕಲ್ಕುಂದ ಗ್ರಾಮದ ನಿವಾಸಿ ಕೆ.ಪಿ. ಮಹದೇವ್ ಕಲ್ಕುಂದ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

