ಮೈಸೂರು

ಮತ್ತೆ ವಿಮಾನ ಸೇವೆ ವಾರದಲ್ಲಿ 3ದಿನ ಸಂಚಾರ

Published On :

ಮೈಸೂರು: ಮೈಸೂರಿನಿಂದ ಬೆಂಗಳೂರಿಗೆ ಮಂಗಳವಾರ ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲಿ ನಿರಂತರ ವಿಮಾನಯಾನ ಸೇವೆಗೆ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶನಿವಾರ ಚಾಲನೆ ದೊರೆಯಿತು.
ವಾರದಲ್ಲಿ ಮೂರು ದಿನ ಮಾತ್ರ ಇದ್ದ ವಿಮಾನ ಸೇವೆಯನ್ನು ಈಗ ಆರು ದಿನಗಳಿಗೆ ವಿಸ್ತರಿಸಲಾಗಿದೆ. ಈಗ ಸ್ಪೈಸ್‌ಜೆಟ್ ಕಂಪನಿ 78 ಆಸನ ವ್ಯವಸ್ಥೆಇರುವ ಲಘು ವಿಮಾನವನ್ನು ಈ ಸೇವೆ ಕಲ್ಪಿಸಿದೆ.
ಈ ವೇಳೆ ಸಂಸದ ಎಚ್. ವಿಶ್ವನಾಥ್ ಮಾತನಾಡಿ, ಇನ್ಫೋಸಿಸ್, ವಿಪ್ರೋ ಮುಂತಾದ ಕಂಪನಿಗಳ ಕೋರಿಕೆ ಹಿನ್ನೆಲೆಯಲ್ಲಿ ನಿರಂತರ ವಿಮಾನಯಾನ ಸೇವೆಗೆ ವಿಮಾನಯಾನ ಸಚಿವ ಅಜಿತ್ ಸಿಂಗ್ ಅವಕಾಶ ಕಲ್ಪಿಸಿದ್ದಾರೆ. ಆಗ ಸ್ಪೈಸ್ ಜೆಟ್ ಮಾತ್ರ ಈ ಸೇವೆ ಕಲ್ಪಿಸುತ್ತಿದ್ದೆ. ಖಾಸಗಿ ವಿಮಾನಯಾನ ಸಂಸ್ಥೆಗಳೊಂದಿಗೆ ಮುಖ್ಯಮಂತ್ರಿಗಳು ಈಗಾಗಲೆ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ವಿಮಾನ ಹಾರಾಟದ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ ಎಂದರು.
2ನೇ ಹಂತ ವಿಸ್ತರಣೆ: ವಿಮಾನ ನಿಲ್ದಾಣದ 2ನೇ ಹಂತ ವಿಸ್ತರಣೆಗೆ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ಇದಕ್ಕಾಗಿ ಸರ್ಕಾರ ರು. 174 ಕೋಟಿ ನೀಡಿದೆ. ಈ ವಿಸ್ತರಣಾ ಪ್ರಕ್ರಿಯೆಗೆ ಚಾಲನೆ ದೊರೆತರೆ ರಾಷ್ಟ್ರೀಯ ಹೆದ್ದಾರಿ- 212 ಮಾರ್ಗ ಬದಲಿಸಲು ಲೋಕೋಪಯೋಗಿ ಇಲಾಖೆ ಸಚಿವರು ಒಪ್ಪಿದ್ದಾರೆ. ಆದ್ದರಿಂದ ಹೆದ್ದಾರಿ ಕಾಮಗಾರಿಯಿಂದ ವಿಮಾನ ನಿಲ್ದಾಣ ವಿಸ್ತರಣೆಗೆ  ತೊಂದರೆ ಆಗದು ಎಂದು ವಿಶ್ವನಾಥ್ ಸ್ಪಷ್ಟಪಡಿಸಿದರು. ಬಳಿಕ ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ವಿತರಿಸಿದರು. ಈ ವಿಮಾನ ಪ್ರತಿದಿನ(ಮಂಗಳವಾರ ಹೊರತುಪಡಿಸಿ) ಮಧ್ಯಾಹ್ನ 1,30ಕ್ಕೆ ಚೆನ್ನೈನಿಂದ ಹೊರಟು ಬೆಂಗಳೂರು ತಲುಪುವುದು. ಅಲ್ಲಿಯಿಂದ ಮೈಸೂರಿಗೆ 2.30ಕ್ಕೆ ಬರಲಿದೆ. ಮತ್ತೆ ಮೈಸೂರಿನಿಂದ 4.30ಕ್ಕೆ ಹೊರಟ ವಿಮಾನ ಬೆಂಗಳೂರು ಮೂಲಕ ಚೆನ್ನೈ ತಲುಪಲಿದೆ. ನಿಗದಿತವಾಗಿ ವಿಮಾನಯಾನ ಸೇವೆಯಿಂದ ಮೈಸೂರಿನಿಂದ ಬೆಂಗಳೂರಿಗೆ ನೇರ ಸಂಪರ್ಕ ಕಲ್ಪಿಸಿದಂತಾಗಿದೆ. ಪ್ರತಿನಿತ್ಯ ಮೈಸೂರಿಗೆ ಸರಾಸರಿ 100 ಮಂದಿ ಪ್ರಯಾಣಿಕರು ಬರುತ್ತಿದ್ದಾರೆ. ವಾರಂತ್ಯ, ದಸರಾ ಮತ್ತು ಕ್ರಿಸ್‌ಮಸ್ ಹಬ್ಬದ ವೇಳೆ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.