ಸಮಾಜ ಬದಲಾವಣೆಗೆ ವಿಜ್ಞಾನದ ಪಾತ್ರ ಮುಖ್ಯ'
ಕಿತ್ತೂರು: ಮೂಢನಂಬಿಕೆಗಳ ನಡುವೆ ಕಳೆದು ಹೋಗುತ್ತಿರುವ ಸಮಾಜವನ್ನು ಬದಲಾವಣೆಗೊಳಿಸುವಲ್ಲಿ ವಿಜ್ಞಾನದ ಪಾತ್ರ ಬಹಳ ಪ್ರಮುಖವಾದದ್ದು ಎಂದು ಉಪ ಪ್ರಾಂಶುಪಾಲ ಜಿ.ಜೆ. ಅಶೋಕ್ ಅಭಿಪ್ರಾಯಪಟ್ಟರು. ತಿಮ್ಮಾಜಮ್ಮ ಮತ್ತು ಕರಿಯಪ್ಪ ಪದವಿ ಪೂರ್ವ ಕಾಲೇಜು ಮತ್ತು ಅಗಸ್ತ್ಯ ಫೌಂಡೇಶನ್ ವತಿಯಿಂದ ಗ್ರಾಮದಲ್ಲಿ ನಡೆದ ವಿಜ್ಞಾನ ಮೇಳದಲ್ಲಿ ಅವರು ಮಾತನಾಡಿದರು. ವಿಜ್ಞಾನ ಮೇಳವು ಶಿಕ್ಷಣದ ಜೊತೆಗೆ ಗುಣಾತ್ಮಕ ಕಲಿಕೆಗೆ ಪೂರಕವಾಗಿದ್ದು, ಇಂದಿನ ಆಧುನಿಕ ಜೀವನಕ್ಕೆ ವಿಜ್ಞಾನದ ಕಲಿಕೆ ಬಹಳ ಅಗತ್ಯವಾದ ವಿಷಯವಾಗಿದೆ. ರಚನಾತ್ಮಕ ಕಲಿಕೆ ಮತ್ತು ಪೂರಕ ಫಲಿತಾಂಶಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಸತತ ಪರಿಶ್ರಮಪಡುವಂತೆ ಅವರು ಕಿವಿಮಾತು ಹೇಳಿದರು. ತಾಪಂ ಸದಸ್ಯೆ ಸಾಕಮ್ಮ ಚಿಕ್ಕೇಗೌಡ ಉದ್ಘಾಟಿಸಿದರು. ಪ್ರತಿಭಾವಂತ ವಿದ್ಯಾರ್ಥಿನಿ ರೂಪಾ, ಶಿಕ್ಷಕ ರಾಜೇಗೌಡರನ್ನು ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

