ತಾಂಡವಪುರ: ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ
ತಾಂಡವಪುರ: ನಂಜನಗೂಡು ತಾಲೂಕಿನ ತಾಂಡವಪುರದಲ್ಲಿ ಫೆ.11 ರಂದು ಜರುಗುವ ಮಾರಮ್ಮನ ಜಾತ್ರೆ ಅಂಗವಾಗಿ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿಯನ್ನು ಸಂಸದ ಆರ್. ಧ್ರುವನಾರಾಯಣ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ವಿಶ್ವದಲ್ಲಿ ಸುಮಾರು 200ಕ್ಕೂ ಹೆಚ್ಚು ದೇಶಗಳಿದ್ದು, ಕ್ರೀಡೆಗಳಿಗೆ ಕೇವಲ 10 ರಿಂದ 11 ದೇಶಗಳು ಮಾತ್ರ ಭಾಗವಹಿಸುತ್ತಿವೆ. ಇನ್ನುಳಿದ ದೇಶಗಳಲ್ಲಿ ಕ್ರೀಡೆಗೆ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಭಾರತದಲ್ಲಿ ಕ್ರಿಕೆಟ್ ಅನ್ನು ಧರ್ಮವನ್ನಾಗಿ ಸ್ವೀಕರಿಸಲಾಗಿದೆ. ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಸ್ನೇಹ ಬಾಂಧವ್ಯ ಬೆಸೆಯುವಂತಹ ಕ್ರೀಡಾ ಚಟುವಟಿಕೆಯಲ್ಲಿ ಯುವಕರು ಹೆಚ್ಚಾಗಿ ಪಾಲ್ಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ನಂತರ ಗ್ರಾಮಸ್ಥರು, ನಂಜನಗೂಡು- ಮೈಸೂರು ಹೆದ್ದಾರಿಯ ವಿಸ್ತರಣೆಗೆ ಸರ್ವೆ ಆಗಿದ್ದು, ಇದರಿಂದ ಈ ಭಾಗದ ವಾಸದ ಮನೆಗಳು ನೆಲಸಮವಾಗುತ್ತಿವೆ. ಹಲವಾರು ಕುಟುಂಬಗಳು ಮನೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಆದ್ದರಿಂದ ರಸ್ತೆಯ ಎರಡೂ ಬದಿಯಲ್ಲೂ ಸಮನಾಗಿ ಸರ್ವೆ ಮಾಡಿಸಿ ರಸ್ತೆ ಕಾಮಗಾರಿ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಂಸದರು, ಇದು ಈಗ ಮಾಡಿರುವ ಸರ್ವೆ ಅಲ್ಲ. ಹಲವಾರು ವರ್ಷಗಳ ಹಿಂದೆ ನಡೆದಿರುವಂತಹದ್ದು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
ತಾಪಂ ಸದಸ್ಯರಾದ ಶ್ರೀಕಂಠು, ಹೆಜ್ಜಿಗೆ ಗೋವಿಂದರಾಜನ್, ಎಪಿಎಂಸಿ ಅಧ್ಯಕ್ಷ ಗುರುಸ್ವಾಮಿ, ಗ್ರಾಪಂ ಅಧ್ಯಕ್ಷ ಪಿ.ಗಿರೀಶ್, ಕಾಂಗ್ರೆಸ್ ಮುಖಂಡ ಟಿ.ಕೆ. ಮಾಲೇಗೌಡ, ಗ್ರಾಪಂ ಸದಸ್ಯರಾದ ಪ್ರಭುಸ್ವಾಮಿ, ರಮೇಶ್, ಶ್ರೀಕಂಠ ಮೂರ್ತಿ, ಮಲ್ಲಪ್ಪ, ರೈತ ಸಂಘದ ಮುಖಂಡ ಟಿ.ಆರ್. ವಿದ್ಯಾಸಾಗರ್, ಕಾರ್ಮಿಕ ಮುಖಂಡ ಟಿ.ಜೆ. ಮಹದೇವು, ದಲಿತ ಮುಖಂಡ ಕೆಂಪಣ್ಣ, ಪುಟ್ಟಯ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

