ಮೈಸೂರು

ನಾಳೆ ವಿಶ್ವಕರ್ಮ ಕ್ಯಾಲೆಂಡರ್ ಬಿಡುಗಡೆ

Published On :

ಮೈಸೂರು: ಮೈಸೂರು ಜಿಲ್ಲಾ ವಿಶ್ವಕರ್ಮ ಯುವ ಜಾಗೃತಿ ವೇದಿಕೆಯು ಕ್ಯಾಲೆಂಡರ್ ಬಿಡುಗಡೆ ಮತ್ತು ವೇದಿಕೆ ಸದಸ್ಯರಿಗೆ ಅಪಘಾತ ವಿಮಾ ಬಾಂಡ್ ವಿತರಣಾ ಕಾರ್ಯಕ್ರಮವನ್ನು ಫೆ.4ರ ಬೆಳಗ್ಗೆ 10ಕ್ಕೆ ರಾಮಾನುಜ ರಸ್ತೆಯ ವೀರಶೈವ ಅನಾಥಾಲಯದಲ್ಲಿ ಹಮ್ಮಿಕೊಂಡಿದೆ. ಅರೇಮಾದನಹಳ್ಳಿ ವಿಶ್ವಕರ್ಮ ಪೀಠದ ಶ್ರೀ ಶಿವಸುಜ್ಞಾನಮೂರ್ತಿ ಸ್ವಾಮೀಜಿ ಕಾರ್ಯಕ್ರಮ ಸಾನ್ನಿಧ್ಯ ವಹಿಸಲಿದ್ದು, ಶಾಸಕ ಎಂ.ಕೆ. ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸುವರು. ವೇದಿಕೆ ಗೌರವಾಧ್ಯಕ್ಷ ಎನ್. ನಂದಕುಮಾರ್ ಅಧ್ಯಕ್ಷತೆ ವಹಿಸುವರು. ಶಾಸಕ ಜಿ.ಟಿ. ದೇವೇಗೌಡ ಕ್ಯಾಲೆಂಡರ್ ಬಿಡುಗಡೆಗೊಳಿಸುವರು. ವಿಧಾನ ಪರಿಷತ್ ಸದಸ್ಯ ಸಿದ್ದರಾಜು ವಿಮಾ ಬಾಂಡ್ ವಿತರಿಸಲಿದ್ದು, ಜಿ.ರಘು ಆಚಾರ್ ಅವರನ್ನು ಸನ್ಮಾನಿಸುವುದಾಗಿ ವೇದಿಕೆ ಅಧ್ಯಕ್ಷ ಕೆ.ಕೆಂಡಗಣ್ಣ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಗಾಯಿತ್ರಿ ಚಿತ್ರಮಂದಿರದ ಮಾಲೀಕ ಎಂ.ಟಿ. ರಾಮಚಂದ್ರ, ವಿಶ್ವಕರ್ಮ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಟಿ. ನಾಗರಾಜು, ಪಾಲಿಕೆ ಸದಸ್ಯ ರಮೇಶ್, ಸಿ. ಹುಚ್ಚಪ್ಪಚಾರ್, ಕಾಂಗ್ರೆಸ್ ಮುಖಂಡ ಚಂದ್ರು ಮುಂತಾದವರು ಮುಖ್ಯ ಅತಿಥಿಯಾಗಿ ಆಗಮಿಸುವುದಾಗಿ ಹೇಳಿದರು.ಗೋಷ್ಠಿಯಲ್ಲಿ ಟಿ.ಎಸ್. ಲೋಕೇಶ್, ಸಿದ್ದೇಶ್, ಆರ್. ನಾಗೇಶ್, ಟಿ.ಎ.  ಸಿದ್ದರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.