ಮೈಸೂರು

ಹುತ್ತೂರಮ್ಮನ ಜಾತ್ರಾ ಮಹೋತ್ಸವ ಆಚರಣೆ

Published On :

ಮೈಸೂರು: ನಗರದ ಲಲಿತಮಹಲ್ ಹಸಿರು ಚಪ್ಪರ ಉದ್ಯಾನದಲ್ಲಿ ಭಾನುವಾರ ಶ್ರೀ ಪಂಚಶನೈಶ್ಚರಸ್ವಾಮಿ ಆರಾಧನಾ ಮಹೋತ್ಸವ ಹಾಗೂ ಮಲೆಯಾಳದ ಹುತ್ತೂರಮ್ಮನವರ 25ನೇ ವರ್ಷದ ಜಾತ್ರೆ ಬಹು ವಿಜೃಂಬಣೆಯಿಂದ ನೆರವೇರಿತು.
ಸಿದ್ದಾರ್ಥನಗರದ ಮಲೆಯಾಳದಮ್ಮನ ದೇವಸ್ಥಾನದಿಂದ ಲಲಿತಮಹಲ್ ರಸ್ತೆಯ ಕಮಾನು ಗೇಟ್ ಪಕ್ಕದ ಹಸಿರು ಚಪ್ಪರದವರೆಗೂ ಶ್ರೀ ಪಂಚಶನೈಶ್ಚರಸ್ವಾಮಿ ಮತ್ತು ಚಾಮುಂಡೇಶ್ವರಿ ದೇವಿಯ ರಥ ಸಾಗಿತು. ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳು ಕುಣಿತ, ಪೂಜಾ ಕುಣಿತ, ನಗಾರಿ, ಬೊಂಬೆ ಕುಣಿತ ಸೇರಿದಂತೆ ಅನೇಕ ಜಾನಪದ ಕಲಾತಂಡಗಳು ಭಾಗವಹಿಸಿದ್ದವು.
ಸಾವಿರಾರು ಮಹಿಳೆಯರು ಮತ್ತು ಬಾಲಕಿಯರು ತಂಬಿಟ್ಟು ತುಂಬಿದ ತಟ್ಟೆ, ಕಳಸ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆಯು ಸಿದ್ಧಾರ್ಥನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಐವತ್ತಕ್ಕೂ ಹೆಚ್ಚು ಮಂದಿ ಪೂಜಾ ಕುಣಿತ ಕಲಾವಿದರು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ನಡು ಚಪ್ಪರಕ್ಕೆ ಸೇವಂತಿಗೆ ಹೂವಿನ ಅಲಂಕಾರ ಮಾಡಲಾಗಿತ್ತು.
ಜಾತ್ರಾ ಮಹೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಬೇಬಿ ಮಠದ ಶ್ರೀ ತ್ರಿನೇತ್ರ ಮಹಾಂತ ಸ್ವಾಮೀಜಿ, ಸಾಲೂರು ಮಠದ ಶ್ರೀ ಪಟ್ಟದ ಗುರುಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ, ಅರಮನೆ ಜಪದಕಟ್ಟೆ ಮಠದ ಡಾ.ಮುಮ್ಮಡಿ ಶಿವಾಚಾರ್ಯಸ್ವಾಮೀಜಿ, ಶ್ರೀ ಸಾಯಿ ಸೇವಾ ಶಕ್ತಿ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರರಾವ್ ಬಾಬಾ, ಪಾಲಿಕೆ ಸದಸ್ಯೆ ವನಿತಾ ಪ್ರಸನ್ನ, ಮುಖಂಡ ಪಾಲಹಳ್ಳಿ ರಾಮಕೃಷ್ಣ, ಎಂ. ರಜಿನಿ ಇದ್ದರು.
ಮೈಸೂರು ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಮಂದಿ ಭಕ್ತರು ಆಗಮಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.