ಮೈಸೂರು

ಮನಸ್ಸು ಕೆಟ್ಟರೆ ಸಮಾಜವೂ ಕೆಡುತ್ತದೆ

Published On :

ಮೈಸೂರು: ಮನಸ್ಸು ಕೆಟ್ಟಾಗ ಮಾತ್ರ ಮಾನಸಿಕ ಮತ್ತು ಸಾಮಾಜಿಕ ಸ್ವಾಸ್ಥ್ಯ ಕೆಡುತ್ತದೆ ಎಂದು ಶ್ರೀ ರವಿಶಂಕರ್ ಗುರೂಜಿ ಹೇಳಿದರು.
ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಮಂಗಳವಾರ ದಿ ಆರ್ಟ್ ಆಫ್ ಲೀವಿಂಗ್ ಸಂಸ್ಥೆ ಆಯೋಜಿಸಿದ್ದ ಸ್ವಸ್ಥ ಮನಸ್ಸು- ಸಾಮಾಜಿಕ ಸ್ವಾಸ್ಥ್ಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಮನಸ್ಸು ಕೆಟ್ಟರೆ ಸಾಮಾಜಿಕ ಸ್ವಾಸ್ಥ್ಯವೂ ಕೆಡುತ್ತದೆ. ಪ್ರತಿ ಕ್ಷಣ ನಮ್ಮ ಮೆದುಳಿಗೆ ನಾಲ್ಕು ಕೋಟಿ ಮಾಹಿತಿ ಬರುತ್ತದೆ. ನಮ್ಮ ಮನಸ್ಸಿನಲ್ಲಿ ಉಳಿಯುವುದು ಕೇವಲ 40 ಮಾತ್ರ. ನಮಗೆ ಚೆನ್ನಾಗಿ ಜ್ಞಾಪಕ ಉಳಿಯುವುದು ನಾಲ್ಕು ಮಾತ್ರ ಎಂದರು.
ಮನಸ್ಸಿಗೆ ಪ್ರಚನ್ನ ಶಕ್ತಿ ದೊರಕಬೇಕು. ಆದರೆ ನಮ್ಮಲ್ಲಿ ಅನೇಕರ ಮನಸ್ಸು ಕುಡಿತಕ್ಕೆ ಬಲಿಯಾಗಿದೆ. ಕುಡಿತಕ್ಕೆ ಒಳಗಾದಾಗ ಮಾತ್ರ ಅತ್ಯಾಚಾರಗಳು ನಡೆಯುತ್ತವೆ. ದೇಶದಲ್ಲಿ ನಡೆದ ಬಹುಪಾಲು ಅತ್ಯಾಚಾರಗಳು ಮತ್ತಿನಲ್ಲಿ ಇರುವಾಗಲೆ ನಡೆದಿವೆ ಎಂದ ಅವರು, ದೇಶ ಧಾರ್ಮಿಕವಾಗಿ ಉತ್ತುಂಗದಲ್ಲಿದ್ದಾಗ ಆರ್ಥಿಕವಾಗಿಯೂ ಸಬಲರಾಗಿದ್ದೆವು ಎಂಬುದಕ್ಕೆ ಈ ಹಿಂದಿನ ಉದಾಹರಣೆ ಇದೆ ಎಂದು ಹೇಳಿದರು.
ಬಯಲು ರಂಗಮಂದಿರದಲ್ಲಿ ನೆರೆದಿದ್ದ ಸಾವಿರಾರು ಮಂದಿಯ ನಡುವೆ ನಿರ್ಮಿಸಿದ್ದ ನೆಲಹಾಸಿನ ಮೇಲೆ ಬಂದ ರವಿಶಂಕರ್ ಗುರೂಜಿ ಅವರನ್ನು ಎದ್ದುನಿಂತು ಕರತಾಡನದ ಮೂಲಕ ಸ್ವಾಗತಿಸಿದರು. ವೇದಿಕೆಯ ಮೇಲೆ ಬಾಣ ಬಿರುಸುಗಳ ಮಳೆಗರೆಯಲಾಯಿತು. ಭಕ್ತರ ಸಂಕಷ್ಟಗಳು, ಜಿಜ್ಞಾಸೆಗಳನ್ನು ತಿಳಿಸುವಂತೆ ಪ್ರತಿಯೊಬ್ಬರಿಗೂ ಪತ್ರ ನೀಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.