ಹೆಚ್ಚುತ್ತಿರುವ ಹುಸಿ ಸಂಸ್ಕೃತಿ ವಿಜೃಂಭಣೆ: ಸಿಪಿಕೆ
ಮೈಸೂರು: ಇಂದು ಹುಸಿ ಸಂಸ್ಕೃತಿ ಹೆಚ್ಚಾಗಿ ವಿಜೃಂಭಿಸುತ್ತಿದೆ ಎಂದು ನಾಡಿನ ಪ್ರಸಿದ್ಧ ಸಾಹಿತಿ ಡಾ.ಸಿಪಿಕೆ ಹೇಳಿದರು.
ಮೈಸೂರು ಎಂಜಿನಿಯರಗಳ ಸಂಸ್ಥೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಇಂಚರ ಸಾಂಸ್ಕೃತಿಕ ಪ್ರತಿಷ್ಠಾನ ಉದ್ಘಾಟನೆ ಹಾಗೂ ಅಭಿನಂದನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಕಡೆ ಸಮಾಜದ ಆಸಕ್ತಿ ಕುಗ್ಗುತ್ತಿದ್ದು, ಕೆಲವೊಮ್ಮೆ ಆಸಕ್ತಿ ಹಾಗೂ ಶ್ರದ್ಧೆ ಕಂಡುಬಂದರೂ, ಅದು ಕೇವಲ ತೋರಿಕೆಗೆ ಮಾತ್ರ ಸೀಮಿತ ಎನ್ನುವಂತಾಗಿದೆ. ಸುಕೃತಿ ಸಂಸ್ಕೃತಿಗಿಂತ ವಿಕೃತಿ. ಸಂಸ್ಕೃತಿ ಹೆಚ್ಚಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಹುಸಿ ಸಂಸ್ಕೃತಿ ವಿಜೃಂಭಣೆ ಕಾಣಬಹುದು ಎಂದರು.
ಸಮಾಜದ ಚಿತ್ತ ಆರ್ಥಿಕ ಗಳಿಕೆಯತ್ತ ಸಾಗಿದೆ. ವಿತ್ತ (ಹಣ) ಮುಖ್ಯವಲ್ಲ. ವ್ಯಕ್ತಿಯ ವೃತ್ತ (ಚಾರಿತ್ರ್ಯ) ಮುಖ್ಯ. ಶೀಲ, ನಡತೆ ಹಾಗೂ ಚಾರಿತ್ರ್ಯಕ್ಕೆ ಅಭಾವ ಉಂಟಾಗಿದೆ. ಮನುಷ್ಯನ ಪರಿಪೂರ್ಣತೆಯ ಅನ್ವೇಷಣೆಯೇ ಸಂಸ್ಕೃತಿಯ ಲಕ್ಷಣ. ಆದರೆ ಇಂದು ಎಲ್ಲೆಡೆ ಅಮೃತಕ್ಕೆ ಬದಲಾಗಿ ವಿಷ ವರ್ತುಲ ನಿರ್ಮಾಣವಾಗುತ್ತಿರುವುದು ಆತಂಕದ ಸಂಗತಿ ಎಂದರು.
ಸನ್ಮಾನ: ಈ ಸಂದರ್ಭದಲ್ಲಿ ಹಾಂಕಾಂಗ್ನಲ್ಲಿ ನಡೆಯಲಿರುವ 3ನೇ ವಿಶ್ವ ಕನ್ನಡ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಹಾಗೂ ವಿದ್ವಾಂಸ ಡಾ.ಮಳಲಿ ವಸಂತಕುಮಾರ್ ಹಾಗೂ ಮಂಡ್ಯ ಜಿಲ್ಲೆಯ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪ್ರೊ.ಕೆ. ಭೈರವಮೂರ್ತಿ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ವಿದ್ವಾಂಸ ಡಾ.ಕೆ. ಅನಂತರಾಮು ಸನ್ಮಾನಿತರನ್ನು ಅಭಿನಂದಿಸಿದರು. ಮೇಲುಕೋಟೆ ನಂಬಿಮಠದ ಇಳೈ ಆಳ್ವಾರ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಲೇಖಕಿ ನಾಗಲಕ್ಷ್ಮೀ ಹರಿಹರೇಶ್ವರ, ಎಂಜಿನಿಯರಗಳ ಸಂಸ್ಥೆಯ ಅಧ್ಯಕ್ಷ ಡಾ.ಟಿ. ಅನಂತ ಪದ್ಮನಾಭ ಮುಖ್ಯ ಅತಿಥಿಗಳಾಗಿದ್ದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಚಂದ್ರಶೇಖರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಡಾ. ವೈ.ಡಿ. ರಾಜಣ್ಣ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

