ಮೈಸೂರು

ಪುಸ್ತಕ ಆಯ್ಕೆಯಲ್ಲಿ ಭ್ರಷ್ಟಾಚಾರ ಆರೋಪ

Published On :

ಮೈಸೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಲ್ಲಿ ತಮ್ಮ 40ಕ್ಕೂ ಹೆಚ್ಚು ಕೃತಿಗಳು ಆಯ್ಕೆಯಾಗುವಂತೆ ನೋಡಿಕೊಂಡಿರುವ ಮೈಸೂರಿನ ಪ್ರಕಾಶನವೊಂದನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿ ವಿಜ್ಞಾನ ಸಾಹಿತ್ಯ ಪ್ರಕಾಶನದ ಜಿ.ನಾಗೇಂದ್ರನ್ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ದೂರು ನೀಡಿದ್ದಾರೆ.
ಪುಸ್ತಕ ಆಯ್ಕೆ ಸಮಿತಿಯ ಮೌಲ್ಯ ಮಾಪನದ ಕೊರತೆಯಿಂದ ಶಾಲಾ ಮಕ್ಕಳ ಮನೋವಿಕಾಸಕ್ಕೆ ಪೂರಕವಲ್ಲದ ಪುಸ್ತಕಗಳ ಆಯ್ಕೆ ನಡೆದಿದೆ. ಒಂದೇ ಶೀರ್ಷಿಕೆಯ ಪುಸ್ತಕಗಳನ್ನು ಬೆಂಗಳೂರು ಮತ್ತು ಮೈಸೂರು ವಿಳಾಸ ತೋರಿಸಿ ಎರಡೆರಡು ಕಡೆ ಆಯ್ಕೆ ಆಗುವಂತೆ ಮಾಡಲಾಗಿದೆ. ಸಾಹಿತ್ಯದ ಅಭಿರುಚಿಯೆ ಇಲ್ಲದವರು ಬೇರೆಯವರ ಪುಸ್ತಕಕ್ಕೆ ತಮ್ಮ ಹೆಸರು ಹಾಕಿಕೊಂಡು ಲೇಖಕರ ವೃಂದಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬೇನಾಮಿ ಪ್ರಕಾಶಕರಿಂದ ಪ್ರಕಟಿಸಲ್ಪಟ್ಟ ಪುಸ್ತಕಗಳನ್ನು, ಪುಸ್ತಕ ಆಯ್ಕೆ ಸಮಿತಿಯು ಪರಿಗಣಿಸಿದೆ. ಈ ಅವ್ಯವಹಾರದ ಹಿಂದೆ ಸಮಿತಿ ಅಧ್ಯಕ್ಷರ ಪಾತ್ರವೂ ಇದೆ. ನನ್ನ ಕೆಲ ಕೃತಿಗಳ ಹೆಸರು ಬದಲಿಸಿರುವುದು ಪತ್ತೆ ಆಗಿದೆ. ನನ್ನ ದೂರವಾಣಿ ಸಂಖ್ಯೆ ಮತ್ತು ಕಳೆದು ಹೋದ ಪಾನ್ ಕಾರ್ಡ್‌ನ್ನು ಸಹ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಅವರು ದೂರಿದ್ದಾರೆ.
ಆಯ್ಕೆಯಾದ ಒಟ್ಟು 849 ಕೃತಿಗಳಲ್ಲಿ ವಿದ್ವತ್ ಪೂರ್ಣ ವೈಜ್ಞಾನಿಕ ಕೃತಿಗಳು ಅತಿ ವಿರಳವಾಗಿವೆ. ಆದರೆ 5 ವಿಜ್ಞಾನದ ವಿಶ್ವಕೋಶಗಳನ್ನು ಕಾರಣ ನೀಡದೆ ತಿರಸ್ಕರಿಸಲಾಗಿದೆ. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ತನಿಖೆ ನಡೆಸಿ: ಈ ಪ್ರಕರಣದ ತನಿಖೆ ನಡೆಸಿ, ಅರ್ಹರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಪುಸ್ತಕ ಪ್ರಾಧಿಕಾರ ಹಾಗೂ ರಾಜ್ಯ ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿಯ ಮಾಜಿ ಸದಸ್ಯ ಡಿ.ಎನ್.ಲೋಕಪ್ಪ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.