ಮೈಸೂರು

'ಗಟ್ಟಿ ಸಾಹಿತ್ಯ ಮರು ಓದು, ವಿಮರ್ಶೆ ಅಗತ್ಯ'

Published On :

ಮೈಸೂರು: ಪ್ರಸ್ತುತ ಗಟ್ಟಿ ಸಾಹಿತ್ಯ ಓದು, ವಿಮರ್ಶೆ ಅಗತ್ಯವಾಗಿ ಆಗಬೇಕಿದೆ ಎಂದು ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಬಿ. ರವಿ ಹೇಳಿದರು.
ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಹಾಗೂ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್) ಸಂಯುಕ್ತವಾಗಿ ಗುರುವಾರ ಆಯೋಜಿಸಿದ್ದ ಕೊಡಗಿನ ಗೌರಮ್ಮನವರ ಬದುಕು- ಬರಹ ಕುರಿತು ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.
ಸಾಹಿತಿ ಕೊಡಗಿನ ಗೌರಮ್ಮ ಅವರು ಜಾತಿ ಸಮಸ್ಯೆ, ವಿಧವೆ, ವರದಕ್ಷಿಣೆ, ಮದುವೆ ಹಕ್ಕು ಸೇರಿದಂತೆ ವಿವಿಧ ವಿಚಾರಗಳನ್ನು ತಮ್ಮ ಕಥೆಗಳ ಮೂಲಕ ಹೇಳಿದ್ದಾರೆ. ಜಾಗತಿಕ ಸಾಹಿತ್ಯವನ್ನು ಓದಿಕೊಂಡಿದ್ದ ಅವರು, ಸಾಹಿತ್ಯದಲ್ಲಿ ಜನಜೀವನನ್ನು ತಂದಿದ್ದಾರೆ ಎಂದು ಅವರು ತಿಳಿಸಿದರು. ಸಾಹಿತ್ಯವನ್ನು ಬುದ್ಧಿಜೀವಿಗಳು ಓದುತ್ತಿದ್ದಾರೆ. ನಾಟಕವನ್ನು ರಂಗಾಸಕ್ತರು ಮಾತ್ರ ಓದುತ್ತಿದ್ದಾರೆ- ನೋಡುತ್ತಿದ್ದಾರೆ. ಕಾವ್ಯವನ್ನು ಕವಿಗಳು, ವಿಮರ್ಶಕರು ಓದುತ್ತಿದ್ದಾರೆ. ಸಾಹಿತ್ಯವು ಜನಸಾಮಾನ್ಯರಿಗೆ ತಲುಪುತ್ತಿಲ್ಲ. ಸಾಹಿತ್ಯದ ಬಗ್ಗೆ ಶಿಕ್ಷಣದಲ್ಲಿ ಹೆಚ್ಚಿನ ಒತ್ತು ನೀಡಿಲ್ಲ ಎಂದರು.
ಸಾಹಿತ್ಯದ ಮೂಲಕ ಜನಜೀವನವನ್ನು ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸಬೇಕು. ಗಟ್ಟಿ ಸಾಹಿತ್ಯದ ಮರು ಓದು, ವಿಮರ್ಶೆ ಆಗಬೇಕು. ಕೊಡಗಿನ ಗೌರಮ್ಮ ಅವರಂತಹ ಸಾಹಿತಿಗಳ ಕಥೆಗಳನ್ನು ವಿದ್ಯಾರ್ಥಿಗಳು ಓದಬೇಕು ಎಂದು ಅವರು ಸಲಹೆ ನೀಡಿದರು. ಮಹಾರಾಣಿ ವಿಜ್ಞಾನ ಕಾಲೇಜು ಪ್ರಾಂಶುಪಾಲೆ ಡಾ.ಜಿ.ಎಂ. ಸುಶೀಲಾ, ಎಐಎಂಎಸ್‌ಎಸ್ ಜಿಲ್ಲಾ ಕಾರ್ಯದರ್ಶಿ ಪಿ.ಎಸ್. ಸಂಧ್ಯಾ, ಸದಸ್ಯರಾದ ಪೂರ್ಣಿಮಾ ಕೋಟಾ, ಸುಮಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.