ಮೈಸೂರು

ನಂಜನಗೂಡಿನಲ್ಲಿ ಸಿದ್ದರಾಮೇಶ್ವರ ಜಯಂತಿ

Published On :

ನಂಜನಗೂಡು: ಶಿವಯೋಗಿ ಸಿದ್ದರಾಮೇಶ್ವರರು 12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ವಚನ ತತ್ವ ಸಿದ್ಧಾಂತ, ಸಮಾನತೆ ಹಾಗೂ ಗ್ರಾಮಗಳ ಅಭಿವೃದ್ಧಿ ಮಾಡುವ ಮೂಲಕ ಸಮಾಜ ಸುಧಾರಣೆಗೆ ಸಾಕ್ಷಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಯುವಕರು ಸಿದ್ದರಾಮೇಶ್ವರರ ಆದರ್ಶ ರೂಢಿಸಿಕೊಳ್ಳಬೇಕೆಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಪಿ.ಕೆ. ರಾಜಶೇಖರ್ ಕರೆ ನೀಡಿದರು.
ಪಟ್ಟಣದ ಗಿರಿಜಾ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ  ಭಾಷಣಕಾರರಾಗಿ ಮಾತನಾಡಿದ ಅವರು, ಈ ಸಮುದಾಯ ಶ್ರಮಜೀವಿಗಳಾಗಿದ್ದು, ಕಠಿಣ ಕೆಲಸ ಮಾಡುವಂತಹ  ಸಮಾಜದವರಿಗೆ ಸರ್ಕಾರಿ ಕಾಮಗಾರಿಗಳಿಗೆ ಟೆಂಡರ್ ನಿಯಮಾವಳಿ ರೂಪಿಸಿರುವುದರಿಂದ ಆರ್ಥಿಕ ಹಿನ್ನಡೆಯಾಗಿದೆ ಎಂದು ವಿಷಾದಿಸಿದರು. ಬೋವಿ ಸಮಾಜದ ಮುಖಂಡ ಎಂ.ಜಿ. ರಾಮಕೃಷ್ಣಪ್ಪ ಮಾತನಾಡಿದರು.
ಹೊರಹಾಕಿದರು: ಸಿದ್ದರಾಮೇಶ್ವರರ ಇತಿಹಾಸ ಹೇಳುತ್ತಾ ಪಿ.ಕೆ. ರಾಜಶೇಖರ್ ಏಕವಚನದಲ್ಲಿ ಸಿದ್ದರಾಮ ಎಂದು ಭಾಷಣ ಮುಗಿಯುವವರೆಗೂ ಸಂಭೋದಿಸುತ್ತಿದ್ದನ್ನು ಮನಗಂಡ ಕೆಲವರು, ಸಿದ್ದರಾಮೇಶ್ವರ ದೇವರು, ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲ. ಈ ಅವಮಾನ ಮಾಡಿದ್ದಕ್ಕೆ ಕ್ಷಮೆಯಾಚಿಸಬೇಕು. ಇಲ್ಲವಾದರೆ ಸಭೆ ಬಹಿಷ್ಕರಿಸುವುದಾಗಿ ರಾಜಶೇಖರ್ ಎಚ್ಚರಿಕೆ ನೀಡಿದರು. ಕೆಲವರು ಕಾರ್ಯಕ್ರಮದ ಸ್ಥಳದಿಂದ ಹೊರನಡೆದರು.
ಸಿದ್ದರಾಮೇಶ್ವರರು ಬಸವಣ್ಣನವರ ತತ್ವ, ಸಿದ್ಧಾಂತ ರೂಢಿಸಿಕೊಂಡು 12ನೇ ಶತಮಾನದಲ್ಲಿ ಸಿದ್ದರಾಮೇಶ್ವರರಾದರು, ಅಲ್ಲಿಯವರೆವಿಗೂ ಅವರು ಸಿದ್ದರಾಮೇಶ ಎಂದೆ ಇತಿಹಾಸ ಪುಸ್ತಕಗಳಲ್ಲಿ ಉಲ್ಲೇಖವಾಗಿದೆ ಎಂದು ವಾದಿಸಿ ಸಭೆಯಿಂದಲೇ ಹೊರನಡೆದರು. ವೇದಿಕೆಯಲ್ಲಿ ಡಾ. ಕೃಷ್ಣಂರಾಜು, ತಹಸೀಲ್ದಾರ್ ಚೌಡಯ್ಯ, ಪುರುಷೋತ್ತಮ್, ರಾಮಕೃಷ್ಣಪ್ಪ, ಸಮಾಜ ಕಲ್ಯಾಣಾಧಿಕಾರಿ ಎಂ. ಶ್ರೀನಿವಾಸ್, ಗ್ರಾಪಂ ಅಧ್ಯಕ್ಷ ರಾಜ, ಜಗದೀಶ, ಮಹದೇವಪ್ಪ, ನಾಗರಾಜು,  ನಗರಪಾಲಿಕೆ ಮಾಜಿ ಸದಸ್ಯ ಪಿ. ಗೋಪಾಲ, ನಾಗರಾಜು, ಪುರಸಭಾ ಸದಸ್ಯ ದೊಡ್ಡ ಮಾದಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.