ಇಂದು ಮಹಿಳೆಯರಿಂದ ಯಕ್ಷಗಾನ ಪ್ರದರ್ಶನ
ಮೈಸೂರು: ಚಿತ್ಪಾವನ ಬ್ರಾಹ್ಮಣ ಸಂಘ ಫೆ. 8 ಸಂಜೆ 5ಕ್ಕೆ ಕೃಷ್ಣಮೂರ್ತಿಪುರಂ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಚಿತ್ಪಾವನ ಮಹಿಳಾ ತಂಡದಿಂದ ನರಕಾಸುರ ಮೋಕ್ಷ ಎಂಬ ಯಕ್ಷಗಾನ ಕಾರ್ಯಕ್ರಮ ಆಯೋಜಿಸಿದೆ.
ಯಕ್ಷಗಾನ ಕಾರ್ಯಕ್ರಮಕ್ಕೆ ಕರ್ನಾಟಕ ಪೊಲೀಸ್ ಅಕಾಡೆಮಿ ಉಪನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ ಚಾಲನೆ ನೀಡುವರು. ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧವಾಗಿರುವ ಯಕ್ಷಗಾನ ರಂಗಕ್ಕೆ ಈಗ ಮಹಿಳೆಯರೂ ಪಾದಾರ್ಪಣೆ ಮಾಡಿದ್ದಾರೆ. ರಾಜ್ಯದಲ್ಲಿರುವ ಅಪರೂಪದ ಮಹಿಳಾ ಯಕ್ಷಗಾನ ಮಂಡಳಿಗಳಲ್ಲಿ ಬೆಂಗಳೂರಿನ ಮಹಿಳಾ ಯಕ್ಷಗಾನ ಮಂಡಳಿಯೂ ಒಂದು.
ಯಕ್ಷಗಾನ ವೀರರಸ ಪ್ರಧಾನ ಕಲೆಯಾಗಿರುವುದರಿಂದ ಮಹಿಳೆಯರಿಗೆ ಪ್ರಸ್ತುತಪಡಿಸಲು ಕಷ್ಟ ಸಾಧ್ಯವಾದರೂ ಮಹಿಳೆಯರು ಅಸಾಧ್ಯವಾದುದನ್ನು ಮಾಡಿ ತೋರಿಸಿದ್ದಾರೆ. ಈ ತಂಡದಲ್ಲಿ ಹಿಮ್ಮೇಳನದಲ್ಲಿ ಮಾತ್ರ ಪುರುಷರು. ಬೇರೆ ಬೇರೆ ವೃತ್ತಿಯಲ್ಲಿರುವವರು ಹಾಗೂ ಗೃಹಿಣಿಯರು ಒಟ್ಟು 10 ಮಹಿಳೆಯರು ಸೇರಿ ಕಟ್ಟಿಕೊಂಡ ಹವ್ಯಾಸಿ ತಂಡವಾದರೂ ಇದುವರೆಗೆ ವವಿಧ ಕಥಾ ಭಾಗಗಳ 20 ಪ್ರದರ್ಶನ ನೀಡಿದ್ದಾರೆ. ಇದೀಗ 21ನೇ ಪ್ರದರ್ಶನ ನೀಡಲಿದ್ದಾರೆ.
2009ರಲ್ಲಷ್ಟೇ ತಾಳಮದ್ದಳೆ ಮೂಲಕ ಪಾದಾರ್ಪಣೆ ಮಾಡಿದ್ದ ಈ ಯಕ್ಷಗಾನ ತಂಡ ಕೇವಲ 4 ವರ್ಷದಲ್ಲಿ ಮೈಸೂರು ದಸರಾ, ದೆಹಲಿ ಕರ್ನಾಟಕ ಸಂಘ, ಸಿಡ್ನಿ ಕರ್ನಾಟಕ ಸಂಘ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದೆ.
ನರಕಾಸುರ ಮೋಕ್ಷ: ಕಾಡಿನಲ್ಲಿ ರಾಕ್ಷಸ ವಂಶದ ಕರುಣಾಳುಗಳು ತಮಗೆ ಸಿಕ್ಕಿದ ಮಗುವನ್ನು ಸಾಕಿ ಸಲಹಿ ಬೆಳೆಸಿದ ಮಗುವೇ ಪ್ರಾಗ್ಜೋತಿಷಾಪುರದ ರಾಜ ನರಕಾಸುರ. ಆತ ರಾಜನಾದರು ಬಹಳ ಕ್ರೂರಿ. ಸಾವಿರಾರು ಮಹಿಳೆಯರನ್ನು ಬಂಧಿಸಿಟ್ಟು ಹಿಂಸಿಸುತ್ತಿದ್ದ, ಜನರನ್ನು ಪಶುಗಳಂತೆ ಕಾಣುತ್ತಿದ್ದ. ಈ ಅಸುರನ ಮೋಕ್ಷಕ್ಕೆ ಕಾರಣರಾದವರು ಯಾರು ಎಂಬುದನ್ನು ಪ್ರಸಂಗ ವೀಕ್ಷಿಸಿ ತಿಳಿದುಕೊಳ್ಳಬಹುದಾಗಿದೆ.
ಪಾತ್ರ ಪರಿಚಯ: ತಾರಕ- ಶೈಲಜಾ ಜೋಶಿ, ನರಕಾಸುರ- ಪೂನಂ ಗೋಖಲೆ, ಮುರಾಸುರ- ನಯನಾ ಭಿಡೆ, ದೇವೇಂದ್ರ- ವರ್ಷಾ ಖಾಡಿಲ್ಕರ್, ಶ್ರೀಕೃಷ್ಣ- ಅನುಪಮಾ ಮರಾಠೆ, ಸತ್ಯಭಾಮ- ಶುಭಾ ವಿ. ಗೋರೆ, ರುಕ್ಮಿಣಿ, ನಾರದ- ಸುಮಾ ಪಟವರ್ಧನ್, ಪೂರಕ ಪಾತ್ರ- ಪ್ರಜ್ಞಾ ಮರಾಠೆ, ಬಾಲ ಕಲಾವಿದ- ಸಾಗರ್ ಡೋಂಗ್ರೆ, ಸಹನಾ ಡೋಂಗ್ರೆ, ಹಿಮ್ಮೇಳನ- ಮಹದೇವ ಶೆಂಡ್ಯೆ, ಚೆಂಡೆ ವಾದನ- ಚಂದ್ರಶೇಖರ ಶೆಂಡ್ಯೆ, ಮೃದಂಗ- ಪ್ರಕಾಶ ಗೋಗಟೆ, ಶ್ರೀಪಾದ ದಾಮ್ಲೆ, ಭಾಗವತ- ರವೀಶ ಶೆಂಡ್ಯೆ, ಭಾಗವತಿಕೆ- ದಿವಾಕರ್ ಪಟವರ್ಧನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

