ಮೈಸೂರು

ವಕೀಲ ವೃತ್ತಿ ಸುಧಾರಣೆ ಕಂಡಿದೆ'

Published On :

ಮೈಸೂರು: ವಕೀಲ ವೃತ್ತಿಯು ಸಾಕಷ್ಟು ಸುಧಾರಣೆ ಕಂಡಿದ್ದು, ಯುವ ವಕೀಲರು ಅತ್ಯಂತ ಉತ್ಸಾಹದಿಂದ ಕೆಲಸ ಮಾಡುವಂಥ ವಾತಾವರಣವಿದೆ ಎಂದು ಹೈಕೋರ್ಟ್ ನ್ಯಾಯಾಧೀಶ ಎನ್. ಕುಮಾರ್ ಹೇಳಿದರು.
ಜೆಎಸ್‌ಎಸ್ ಕಾನೂನು ಕಾಲೇಜು ಮತ್ತು ಸುರಾನಾ ಅಂತಾರಾಷ್ಟ್ರೀಯ ಅಟಾರ್ನಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಪೋರೇಟ್ ಕಾನೂನು ಕುರಿತ 4ನೇ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾನೂನು ಪದವಿ ಮುಗಿಸಿದ ಬಳಿಕ ಕನಿಷ್ಠ ಪಕ್ಷ ಎರಡು ವರ್ಷವಾದರೂ ನ್ಯಾಯಾಲಯಕ್ಕೆ ಬಂದು ಪ್ರಾಕ್ಟೀಸ್ ಮಾಡಿ. ಆಗ ಪ್ರಾಯೋಗಿಕ ಜ್ಞಾನ ಪಡೆದುಕೊಳ್ಳುವುದರ ಜತೆಗೆ ವ್ಯಾಜ್ಯಗಳು ಹೇಗೆ ಹುಟ್ಟುತ್ತವೆ, ಸಮಸ್ಯೆಗಳ ಕಗ್ಗಂಟನ್ನು ಹೇಗೆ ಬಿಡಿಸುವುದು ಇತ್ಯಾದಿ ವಿಚಾರಗಳು ಗೊತ್ತಾಗುತ್ತವೆ ಎಂದರು.
ಆದಾಯ ತೆರಿಗೆ ಇಲಾಖೆಯ ನಿರ್ದೇಶಕ ಪ್ರವೀಣ್ ಕಿಶೋರ್‌ಕುಮಾರ್ ಮಾತನಾಡಿ, ಸಮಾಜವನ್ನು ಬದಲಾಯಿಸುವ ಶಕ್ತಿ ಇರುವುದು ಕಾನೂನಿಗೆ ಮಾತ್ರ. ಧರಣಿ, ಪ್ರತಿಭಟನೆಗಳು ಕೇವಲ ನೆಪ ಮಾತ್ರಕ್ಕಿವೆ. ಆದ್ದರಿಂದ ಕಾನೂನಿನ ಮಹತ್ವವನ್ನು ಅರಿತು ಯುವ ವಕೀಲರು ಕರ್ತವ್ಯ ನಿರ್ವಹಿಸಬೇಕು ಎಂದರು.
ಕರ್ನಾಟಕ ರಾಜ್ಯ ಕಾನೂನು ವಿವಿ ಕುಲಪತಿ ಪ್ರೊ. ಟಿ.ಆರ್. ಸುಬ್ರಹ್ಮಣ್ಯ, ಪ್ರಾಂಶುಪಾಲ ಪ್ರೊ.ಕೆ.ಎಸ್. ಸುರೇಶ್, ಪ್ರೊ. ನಾಗೇಂದ್ರಮೂರ್ತಿ, ಪ್ರೀತಂ ಸುರಾನಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.