ಮೈಸೂರು

ನಗರದ 6 ಕಡೆ ನಮೋ ಚಹದೊಂದಿಗೆ ಚರ್ಚೆ

Published On :

ಮೈಸೂರು: ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಬುಧವಾರ ಹಮ್ಮಿಕೊಂಡಿದ್ದ ಚಹಾದೊಂದಿಗೆ ಚರ್ಚೆ ಕಾರ್ಯಕ್ರಮ ಮೈಸೂರಿನಲ್ಲಿ ನಡೆಯಿತು.
ಉತ್ತಮ ಆಡಳಿತ ಕುರಿತು ನಡೆದ ಚರ್ಚೆಯಲ್ಲಿ ಮೈಸೂರಿನ ನಾಗರಿಕರು ಸಹ ಪಾಲ್ಗೊಂಡಿದ್ದರು. ನಗರದ ಇಬ್ಬರು ಮೊಬೈಲ್ ಕರೆ ಹಾಗೂ ಎಸ್‌ಎಂಎಸ್‌ನಿಂದ ಮೋದಿ ಅವರ ಜತೆ ಸಂವಾದಲ್ಲಿ ಪಾಲ್ಗೊಂಡಿದ್ದರು.
ಅಗ್ರಹಾರ ವೃತ್ತದಲ್ಲಿರುವ ಶ್ರೀರಾಮದೇವ್ ಟೀ ಸ್ಟಾಲ್‌ನಿಂದ ಹರೀಶ್ ಅವರು ನರೇಂದ್ರ ಮೋದಿ ಅವರಿಗೆ ಪ್ರಶ್ನೆ ಕೇಳಿದರು. ಈ ಪ್ರಶ್ನೆ ರೆಕಾರ್ಡ್ ಆದ ಬಳಿಕ ಅಲಹಾಬಾದ್‌ನಲ್ಲಿ ಕುಳಿತ ನರೇಂದ್ರ ಮೋದಿ ಅವರು ಹರೀಶ್ ಪ್ರಶ್ನೆಗೆ ಉತ್ತರಿಸಿದರು.
ಇನ್ನೂ ದೇವರಾಜ ಅರಸು ರಸ್ತೆಯಲ್ಲಿನ ಶಂಕರ್ ಟೀ ಸ್ಟಾಲ್‌ನಲ್ಲಿ ಟೀ ಕುಡಿಯಲು ಬಂದಿದ್ದ ಗುರು ಎಂಬವರು ನರೇಂದ್ರ ಮೋದಿ ಅವರಿಗೆ ಸಂದೇಶ ಕಳುಹಿಸಿದ್ದು, ಇದಕ್ಕೆ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ.
ಇದೇ ರೀತಿ ನಗರದ ಸಯ್ಯಾಜಿರಾವ್ ರಸ್ತೆಯ ಮಾತಾಜಿ ಟೀ ಸ್ಟಾಲ್, ಇಟ್ಟಿಗೆಗೂಡಿನ ರಾಘವೇಂದ್ರ ಟೀ ಸ್ಟಾಲ್, ಅಗ್ರಹಾರ 101 ಗಣಪತಿ ದೇವಸ್ಥಾನ ಬಳಿಯ ರಾಮದೇವ್ ಟೀ ಸ್ಟಾಲ್ ಮತ್ತು ಚಾಮರಾಜ ಜೋಡಿ ರಸ್ತೆಯಲ್ಲಿರುವ ಜಾಯ್ ಹೌಸ್ ಟೀ ಸ್ಟಾಲ್‌ಗಳಲ್ಲಿ ಚಹಾದೊಂದಿಗೆ ಚರ್ಚೆ ಕಾರ್ಯಕ್ರಮ ನಡೆಯಿತು. ಈ ಚರ್ಚೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.