ಮೈಸೂರು

ಇಲಾಖೆ ವತಿಯಿಂದ ಜಾನುವಾರಿಗೆ ಲಸಿಕೆ

Published On :

ಭೇರ್ಯ: ಬೇಸಿಗೆಯಲ್ಲಿ ಕಾಲುಬಾಯಿ ಜ್ವರಕ್ಕೆ ಜಾನುವಾರುಗಳು ಮೃತಪಟ್ಟಿರುವುದನ್ನು ಮನಗಂಡು, ಕೇಂದ್ರ ಸರ್ಕಾರ ವಿಶೇಷ ಯೋಜನೆಯನ್ನು ರೂಪಿಸಿ, ಪಶುಸಂಗೋಪನಾ ಇಲಾಖೆ ವತಿಯಿಂದ ತುರ್ತಾಗಿ ಕಾಲುಬಾಯಿ ಜ್ವರಕ್ಕೆ ಪಲ್ಸ್ ಪೋಲಿಯೋ ಮಾದರಿಯಲ್ಲಿ ಎಲ್ಲ ಜಾನುವಾರಿಗೆ ಕಡ್ಡಾಯವಾಗಿ ಲಸಿಕೆ ಹಾಕಲಾಗುವುದು ಎಂದು ಪಶುವೈದ್ಯ ಇಲಾಖೆಯ ತಾ. ಸಹಾಯಕ ನಿರ್ದೇಶಕ ರಮೇಶ್ ಹೇಳಿದ್ದಾರೆ.
ತಾಲೂಕಿನ ಆರು ಹೋಬಳಿಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳಲ್ಲಿ ಫೆ. 15ರಿಂದ ಮಾ. 5ರವರೆಗೆ ಬೆಳಗ್ಗೆ 6.30ರಿಂದ 10ರವರೆಗೆ ಪಶುವೈದ್ಯರ ತಂಡ ಜಾನುವಾರಿಗೆ ಸಾಮೂಹಿಕವಾಗಿ ಲಸಿಕೆ ಹಾಕಲಾಗುವುದು.
ಹೊಸ ಅಗ್ರಹಾರ ಹೋಬಳಿಯ ಈ ಕೆಳಕಂಡ ಗ್ರಾಮಗಳಲ್ಲಿ ಫೆ.15 ಅರಕೆರೆ, ಅರಕೆರೆಕೊಪ್ಪಲು, ಮಂಚನಹಳ್ಳಿ, ಬಡಕನಕೊಪ್ಪಲು. ಫೆ. 17 ಅಡಗೂರು, ಮಾರಗೌಡನಹಳ್ಳಿ, ಫೆ.18 ಗಳಿಗೆಕೆರೆ, ದೊಡ್ಡಕೊಪ್ಪಲು, ಕಾರ್ಗಳ್ಳಿಕೊಪ್ಪಲು, ಫೆ. 20- ಅರ್ಜುನಹಳ್ಳಿ, ಕಲ್ಯಾಣಪುರ, ಹೊಸಅಗ್ರಹಾರ, ಫೆ.22 ಕಂಚಿನಕೆರೆ, ಚಿಕ್ಕವಡ್ಡರಗುಡಿ, ಫೆ. 24 ಬೊಮ್ಮೇನಹಳ್ಳಿ, ದೊಡ್ಡವಡ್ಡರಗುಡಿ, ಹರಂಬಳ್ಳಿ, ಹರಂಬಳ್ಳಿಕೊಪ್ಪಲು, ಮಂಡಿಗನಹಳ್ಳಿ, ಬೋರೆಗೌಡನಕೊಪ್ಪಲು, ಫೆ. 26 ಬಟಿಗನಹಳ್ಳಿ, ಸಂಬ್ರವಳ್ಳಿ, ಭೇರ್ಯ, ಫೆ. 28 ಗೇರುದಡ, ಮುಂಜನಹಳ್ಳಿ, ಚಿಕ್ಕಭೇರ್ಯ, ಮಾ. 3 ಅರಕೆರೆ, ಗುಳುವಿನಅತ್ತಿಗುಪ್ಪೆ, ಉದಯಗಿರಿ, ಸೋಮನಹಳ್ಳಿ, ಕಾವಲ್‌ಹೊಸೂರು, ಮಾ. 5 ಸನ್ಯಾಸಿಪುರ, ಹಂಪಾಪುರ.
ಈ ದಿನಾಂಕದಲ್ಲಿ ಕಾಲುಬಾಯಿ ಜ್ವರಕ್ಕೆ ಉಚಿತವಾಗಿ ಲಸಿಕೆ ಹಾಕಲಾಗುವುದು. ರೈತರು ತಪ್ಪದೇ ತಮ್ಮ ತಮ್ಮ ಜಾನುವಾರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.