ಜೆಎಸ್‌ಎಸ್ ಹೃದಯ ಶ್ವಾಸಕೋಶ ಶಸ್ತ್ರಚಿಕಿತ್ಸಾ ವಿಭಾಗ ಲೋಕಾರ್ಪಣೆ
ಮೈಸೂರು: ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಹೃದಯ ಮತ್ತು ಶ್ವಾಸಕೋಶ ಶಸ್ತ್ರಚಿಕಿತ್ಸಾ (ಮ್ಯಾಡುಲರ್ ಸೀಮ್‌ಲೆಸ್ ಸ್ಟೈನ್‌ಲೆಸ್ ಸ್ಟೀಲ್ ಆಪರೇಷನ್ ಥಿಯೇಟರ್) ವಿಭಾಗವನ್ನು ಫೋರ್ಟಿಸ್ ಆಸ್ಪತ್ರೆ ಅಧ್ಯಕ್ಷ, ಖ್ಯಾತ ಹೃದಯ ಶಸ್ತ್ರಚಿಕಿತ್ಸೆ ತಜ್ಞ ಡಾ. ವಿವೇಕ್ ಜವಳಿ ಭಾನುವಾರ ಉದ್ಘಾಟಿಸಿದರು.
ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದ 80 ವರ್ಷದ ವ್ಯಕ್ತಿಗೆ ಹೃದ್ರೋಗ ಶಸ್ತ್ರಚಿಕಿತ್ಸೆ ನೆರವೇರಿಸುವ ಮೂಲಕ ಈ ವಿಭಾಗವನ್ನು ಉದ್ಘಾಟಿಸಿದ್ದು ವಿಶೇಷ. ನಂತರ ಮಾತನಾಡಿದ ಡಾ. ವಿವೇಕ್ ಜವಳಿ, ರಿಬ್ಬನ್ ಕತ್ತರಿಸಿ ಆಪರೇಷನ್ ಥಿಯೇಟರ್ ಉದ್ಘಾಟಿಸುವ ಬದಲು, ವ್ಯಕ್ತಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ನೆರವೇರಿಸುವ ಮೂಲಕ ಉದ್ಘಾಟಿಸಿರುವುದು ಸಂತೋಷಕರ. ಈ ಸೇವೆ ಸಿಕ್ಕಿರುವುದು ಮೈಸೂರು ಮತ್ತು ಸುತ್ತಮುತ್ತಲಿನ ಜಿಲ್ಲೆಯ ಜನರ ಅದೃಷ್ಟ ಎಂದರು. ಜೆಎಸ್‌ಎಸ್ ಆಸ್ಪತ್ರೆಯ ನಿರ್ದೇಶಕ ಡಾ.ಆರ್.ಕೆ. ಚತುರ್ವೇದಿ ಮಾತನಾಡಿ, ಈ ವಿಭಾಗವನ್ನು ಜರ್ಮನಿ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ. 40 ಇಂಚಿನ ಎಲ್‌ಸಿಡಿ ಪರದೆ, ಕ್ಯಾಮರಾ, ಎಕ್ಸ್‌ರೇ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಅಳವಡಿಸಲಾಗಿದೆ ಎಂದರು.
ಪ್ರಾಂಶುಪಾಲ ಡಾ. ಬಸವಣಗೌಡಪ್ಪ ಮಾತನಾಡಿ, ಜೆಎಸ್‌ಎಸ್ ಹೃದಯಕ್ಷೇಮ ತಂಡವು ಈವರೆಗೂ 30 ಸಾವಿರಕ್ಕೂ ಹೆಚ್ಚಿನ ಹೃದಯ ಸಂಬಂಧ ಕಾಯಿಲೆ ತಪಾಸಣೆ ಮಾಡಿದೆ. ಸುಮಾರು 10 ಸಾವಿರ ಹೃದ್ರೋಗ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ಸುಮಾರು 500 ಹೃದಯ ಸಂಬಂಧ ಕಾಯಿಲೆಗಳನ್ನು ಸಂಪೂರ್ಣವಾಗಿ ಗುಣಪಡಿಸಿದ್ದಾರೆ ಎಂದು ತಿಳಿಸಿದರು. ಕಾರ್ಯದರ್ಶಿ ಬಿ.ಎನ್. ಬೆಟ್‌ಕೆರೂರ್, ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಮಹೇಶ್, ಜೆಎಸ್‌ಎಸ್ ಹೃದಯಕ್ಷೇಮದ ಮುಖ್ಯಸ್ಥ ಡಾ. ನಾಗರಾಜ್ ದೇಸಾಯಿ, ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ಅರುಣ್ ಶ್ರೀನಿವಾಸ್, ಹೃದಯ ಮತ್ತು ಶ್ವಾಸಕೋಶ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಶ್ಯಾಮಪ್ರಸಾದ್ ಶೆಟ್ಟಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

