ತಂತ್ರಜ್ಞಾನಗಳ ದುರ್ಬಳಕೆ ಸಲ್ಲ: ವಿದ್ಯಾರ್ಥಿಗಳಿಗೆ ಪುಟ್ಟು ಕಿವಿಮಾತು
ಮೈಸೂರು: ವಿದ್ಯಾರ್ಥಿಗಳಿಂದ ಮೊಬೈಲ್ ಮತ್ತು ಟಿವಿ ತಂತ್ರಜ್ಞಾನದ ದುರ್ಬಳಕೆ ತಡೆಯಬೇಕು ಎಂದು ಡಿಡಿಪಿಯು ಕೆ.ಎಂ. ಪುಟ್ಟು ಅಭಿಪ್ರಾಯಪಟ್ಟರು.
ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನವು ಭಾನುವಾರ ಜೆಎಸ್ಎಸ್ ಆಸ್ಪತ್ರೆ ಆವರಣದ ರಾಜೇಂದ್ರ ಭವನದಲ್ಲಿ ಆಯೋಜಿಸಿದ್ದ ಬಾಲಶ್ರೀ, ಯುವಶ್ರೀ ಮತ್ತು ಸಾಧನಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ವಿದ್ಯಾಭ್ಯಾಸಕ್ಕೆ ಪೂರಕವಾಗಿ ತಂತ್ರಜ್ಞಾನ ಸಾಕಷ್ಟು ಬೆಳೆದಿದೆ. ಆದರೆ ದೂರದರ್ಶನ ಮತ್ತು ಮೊಬೈಲ್ಗಳು ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಪೋಷಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಮಹಾನ್ ಸಾಧಕರ ಜೀವನ ಚರಿತ್ರೆ ಓದುವಂತೆ ಮಕ್ಕಳನ್ನು ಪ್ರೇರೇಪಿಸಬೇಕು ಎಂದು ಕಿವಿಮಾತು ಹೇಳಿದರು.
ಜಿ. ದೀಪ್ತಿ, ಸಿ. ವಾಯುಸಿಂಗ್, ಪಿ.ಎನ್. ನಿಹಾಲ್, ಎಂ.ಎಸ್. ಸತ್ಯದತ್, ಭೂಮಿಕ ಪಿ. ಭಟ್, ಸಮನ್ವಿ ಎಸ್. ಸ್ವಾಮಿ, ಎಸ್. ಸಂಧ್ಯಾ, ಸನಾ ರಾಮ್ಗೋಪಾಲ್, ನಿಶ್ಚಿತ ಎಚ್. ಅಯ್ಯರ್, ವಿ. ಕೀರ್ತನ ವರ್ಷಿಣಿ, ಕೆ.ಎಸ್. ನಿಧಿ, ಎಸ್. ಸಿಂಚನ ಮತ್ತು ಎನ್. ಧನುಷ್ಗೆ ಬಾಲಶ್ರೀ ಪ್ರಶಸ್ತಿ ನೀಡಲಾಯಿತು. ಎಸ್. ನಾಗಚೇತನ್, ಎಸ್. ದೀಪ್ತಿ, ಎಸ್. ನೇಹಾ, ಜಿ. ಸೃಷ್ಠಿ, ಆರ್. ಶ್ರೀಷಾ, ಟಿ. ಸುಮುಖಿ ಮತ್ತು ಪ್ರಹ್ಲಾದ್ ಪಿ. ಭಟ್ಗೆ ಯುವಶ್ರೀ ಪ್ರಶಸ್ತಿ ಹಾಗೂ ಎನ್. ರಾಹುಲ್ಗೆ ಸಾಧನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮೈಸೂರು ಸಾಹಿತ್ಯ ವೇದಿಕೆ ಅಧ್ಯಕ್ಷೆ ಸಿ. ತೇಜೋವತಿ, ನಾದ ವಿದ್ಯಾಲಯ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಡ್ಯಾನ್ಸ್ನ ನಿರ್ದೇಶಕ ವಿದುಷಿ ಮಿತ್ರಾ ನವೀನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರತಿಷ್ಠಾನ ಅಧ್ಯಕ್ಷ ಎಂ.ಬಿ. ಸಂತೋಷ್, ಪ್ರಧಾನ ಕಾರ್ಯದರ್ಶಿ ರೇಖಾ ಸಂತೋಷ್, ಲೇಖಕ ಬಿ. ದಿಲೀಪ್ ಸಾಳಂಬೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

