ನಗರದಲ್ಲಿ ನಾಲ್ಕು ಕಡೆ ಫ್ಲೈ ಓವರ್
ಮೈಸೂರು: ನಗರದ ಹೊರ ವರ್ತುಲ ರಸ್ತೆಯ ಜಂಕ್ಷನ್ಗಳ ಬಳಿ ವಾಹನ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಫ್ಲೈ ಓವರ್ ನಿರ್ಮಿಸಲು ಉದ್ದೇಶಿಸಿದೆ.
ಹೊರ ವರ್ತುಲ ರಸ್ತೆಯನ್ನು ದ್ವಿಪಥದಿಂದ ಚತುಷ್ಪಥ ರಸ್ತೆಯನ್ನಾಗಿ ಪರಿವರ್ತಿಸಿದ ಬಳಿಕ ಆ ಭಾಗದಲ್ಲಿ ಜನವಸತಿ ಬಡಾವಣೆಗಳು, ಕೈಗಾರಿಕೆಗಳು ಮತ್ತು ವಾಣಿಜ್ಯ ಮಳಿಗೆಗಳು ತಲೆ ಎತ್ತಿವೆ. ಇದರಿಂದಾಗಿ ಬೆಂಗಳೂರು- ಮೈಸೂರು ರಸ್ತೆಯ ಜಂಕ್ಷನ್, ಮೈಸೂರು- ಕೆಆರ್ಎಸ್ ರಸ್ತೆ ಜಂಕ್ಷನ್, ಮೈಸೂರು- ಹುಣಸೂರು ರಸ್ತೆ ಜಂಕ್ಷನ್ ಮತ್ತು ಮೈಸೂರು- ನಂಜನಗೂಡು ರಸ್ತೆ ಜಂಕ್ಷನ್ ಬಳಿ ಫ್ಲೈ ಓವರ್ ನಿರ್ಮಿಸಲು ಎಂಡಿಎ ಮುಂದಾಗಿದೆ.
ನರ್ಮ್ ಯೋಜನೆಯಡಿ ಈ ಯೋಜನೆ ರೂಪಿಸಿದ್ದು, ಕೇಂದ್ರ ಸರ್ಕಾರ ಶುಕ್ರವಾರ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. ಅದರಂತೆ ಶೇ. 80ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ನೀಡುತ್ತದೆ. ಉಳಿಕೆ ಶೇ. 10 ರಷ್ಟನ್ನು ರಾಜ್ಯ ಸರ್ಕಾರ ಮತ್ತು ಶೇ. 10 ರಷ್ಟನ್ನು ಎಂಡಿಎ ಭರಿಸಬೇಕು.
ಮೈಸೂರು- ಬೆಂಗಳೂರು ಜಂಕ್ಷನ್ ಬಳಿ ರು. 14.62 ಕೋಟಿ, ಮೈಸೂರು- ಕೆಆರ್ಎಸ್ ಜಂಕ್ಷನ್ ರು. 9.82 ಕೋಟಿ, ಮೈಸೂರು- ಹುಣಸೂರು ಜಂಕ್ಷನ್ನಲ್ಲಿ ರು. 15.18 ಕೋಟಿ, ಮೈಸೂರು- ನಂಜನಗೂಡು(ಜೆಎಸ್ಎಸ್ ಕಾಲೇಜು) ಜಂಕ್ಷನ್ ಬಳಿ ರು. 26.98 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಎಂಡಿಎ ಆಯುಕ್ತ ಎಸ್. ಪಾಲಯ್ಯ ತಿಳಿಸಿದ್ದಾರೆ.
ಏರ್ಮೆನ್ ವೈ ಗ್ರೂಪ್ ಹುದ್ದೆ ನೇಮಕಕ್ಕೆ ಅರ್ಜಿ
ಮೈಸೂರು: ಭಾರತೀಯ ವಾಯು ದಳದಲ್ಲಿ ಏರ್ಮೆನ್ ವೈ ಗ್ರೂಪ್ (ತಾಂತ್ರಿಕ) ಹುದ್ದೆಗಳ ನೇಮಕಾತಿಯನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪಿಯುಸಿಯಲ್ಲಿ ಭೌತಶಾಸ್ತ್ರ ಹಾಗೂ ಗಣಿತ ವಿಷಯಗಳಲ್ಲಿ ಸರಾಸರಿ ಶೇ. 50 ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು. ಹಾಗೂ ಇಂಗ್ಲೀಷ್ನಲ್ಲಿ ಶೇ. 50 ಅಂಕ ಪಡೆದಿರಬೇಕು ಅಥವಾ ಮೂರು ವರ್ಷದ ತಾಂತ್ರಿಕ ಡಿಪ್ಲೋಮಾ ಎಂಜಿನಿಯರಿಂಗ್ನಲ್ಲಿ ಸರಾಸರಿ ಶೇ. 50 ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು. ಅರ್ಜಿದಾರರು 1994ರ ಫೆ. 1 ರಿಂದ 1997 ನ.30ರೊಳಗೆ ಜನಿಸಿದ್ದು, 152.5 ಸೆ.ಮಿ. ಎತ್ತರ ಇರಬೇಕು.
ವೆಬ್ ವಿಳಾಸ www.ind ianairforce.nic.in ನಲ್ಲಿ ಅರ್ಜಿ ಪಡೆದು ಸಲ್ಲಿಸಬೇಕು. ಅರ್ಜಿಯನ್ನು ಸಾಮಾನ್ಯ ಅಂಚೆ ಮೂಲಕ ನವದೆಹಲಿಯ ಏರ್ಮನ್ ಕೇಂದ್ರ ಕಚೇರಿಗೆ ಫೆ. 17 ರೊಳಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಹಾಗೂ ಉಚಿತ ಅರ್ಜಿಗಾಗಿ ಉಪಮುಖ್ಯಸ್ಥರು, ವಿಶ್ವವಿದ್ಯಾನಿಲಯ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಮಾನಸಗಂಗೋತ್ರಿ, ಮೈಸೂರು. ದೂ. 0821- 2516844 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

