ಹುಣಸೂರು: ಹಿಂದೂ-ಮುಸ್ಲಿಂ ಭಾವೈಕ್ಯತೆಯ ರತ್ನಪುರಿ ಉತ್ಸವ
ಹುಣಸೂರು: ತಾಲೂಕಿನ ಹಿಂದೂ - ಮುಸ್ಲಿಂರ ಭಾವೈಕ್ಯ ಬೆಸೆಯುವ ಜಾತ್ರೆಯೆಂದೆ ಪ್ರಸಿದ್ಧಿಯಾದ ರತ್ನಪುರಿಯ ಆಂಜನೇಯ ಸ್ವಾಮಿಯ ಕೊಂಡೋತ್ಸವ, ಮೆರವಣಿಗೆ ಮತ್ತು ಕುಸ್ತಿ ಪಂದ್ಯಾವಳಿ ಭಾನುವಾರ ಜರುಗಿತು.
ರಾತ್ರಿ ಹಜರತ್ ಗಂಧೋತ್ಸವ, ಜಮಾಲಮ್ಮನ ಉರುಸ್ ನಡೆಯಲಿದೆ. 50ನೇ ವರ್ಷದ ಜಾತ್ರಾ ಮಹೋತ್ಸವ ಇದಾಗಿದ್ದು ಹಿಂದೂ- ಮುಸ್ಲಿಮರ ಸಹಭಾಗಿತ್ವದಲ್ಲಿ ಆಂಜನೇಯಸ್ವಾಮಿಯ ಮಹಾಭಿಷೇಕ ಮತ್ತು ಹಜರತ್ ಬೀಬಿ ಮಾ ಸಾಹೇಬರ ಗಂಧೋತ್ಸವ ಮೆರವಣಿಗೆ ನಡೆಯುವ ಜೊತೆಗೆ ಕಳೆ ಕಟ್ಟುತ್ತಿದ್ದ ಭಾರೀ ದನಗಳ ಪ್ರದರ್ಶನ ಮತ್ತು ಮಾರಾಟ ಜಾತ್ರೆಯನ್ನು ಕಾಲುಬಾಯಿ ಜ್ವರ ಇರುವುದರಿಂದ ಜಿಲ್ಲಾಡಳಿತ ಈ ಬಾರಿ ದನಗಳ ಜಾತ್ರೆ ಮಾಡದಂತೆ ಸೂಚನೆ ನೀಡಿತ್ತು. ಆಂಜನೇಯಸ್ವಾಮಿಗೆ ಹೋಮ, ಹವನ ಮತ್ತು ಪಲ್ಲಕ್ಕಿ ಉತ್ಸವ ಆದರೆ ಉತ್ಸವ ಮೂರ್ತಿಯನ್ನು ಹೊತ್ತ ದೇವರ ಉತ್ಸವದಲ್ಲಿ ಚಂಡೆ ಮೇಳ, ಮಲ್ಲಕಂಬ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಧರ್ಮಾಪುರ ಗ್ರಾಮಸ್ಥರಿಂದ ಆಂಜನೇಯಸ್ವಾಮಿಗೆ ಕೊಂಡೋತ್ಸವ ನಡೆಯಿತು. ಧರ್ಮಾಪುರ, ನಂಜಾಪುರ, ಗೌರೀಪುರ, ಕುಡಿನೀರು ಮುದ್ದನಹಳ್ಳಿ, ತರೀಕಲ್, ಕೊಯಮತ್ತೂರು ಕಾಲೋನಿ, ವಿನೋಬ ಕಾಲೋನಿ, ಸಣ್ಣೆಗೌಡರ ಕಾಲೋನಿ, ಹೊನ್ನಿಕುಪ್ಪೆ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಆಗಮಿಸಿದ್ದರು. ಇದೇ ವೇಳೆ ರಾಜ್ಯ ಮಟ್ಟದ ಪುರುಷರ ಮತ್ತು ಮಹಿಳೆಯರ 25 ಜೊತೆ ಕುಸ್ತಿ ಪಂದ್ಯಾವಳಿ ನೆರವೇರಿತು. ಶಾಸಕರಾದ ಎಚ್.ಪಿ. ಮಂಜುನಾಥ್, ಜಿ.ಟಿ. ದೇವೇಗೌಡ, ಸಿ.ಎಚ್. ವಿಜಯಶಂಕರ್, ಮಾಜಿ ಶಾಸಕ ವಿ. ಪಾಪಣ್ಣ ಹಾಗೂ ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಡಿ. ಹರೀಶ್ಗೌಡ, ಮುಖಂಡ ಪಿ. ಸತೀಶ್, ಸಮಿತಿ ಗೌರವಾದ್ಯಕ್ಷ ಸತ್ಯನಾರಾಯಣರಾವ್ ಖರಾಡೆ, ಪದಾಧಿಕಾರಿಗಳಾದ ನಂದೀಶ, ಕೋಡಿಕೃಷ್ಣ, ರಾಜ, ಅಶೋಕ, ಜಗದೀಶ್, ನಾಗರಾಜು, ಗೋವಿಂದೇಗೌಡ, ವಿಠಲರಾವ್ ಖರಾಡೆ, ಬಾಬು, ದಯನಂದ್, ರವಿ, ಸ್ವಾಮಿ, ಪ್ರಸನ್ನ, ಗಿರಿಧರ ರಾವ್ ಸಿಂಧೆ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

