ಮೈಸೂರು

ಸಮರ್ಪಕವಾಗಿ ಕುಡಿಯುವ ನೀರು ಪೂರೈಸಿ

Published On :

ಟಿ. ನರಸೀಪುರ: ತಾಲೂಕಿನ ಜನತೆಗೆ ಪರಿಶುದ್ಧವಾದ ಕುಡಿಯುವ ನೀರಿನ ಸೌಲಭ್ಯ ಸಮರ್ಪಕವಾಗಿ ಸಿಗಬೇಕು ಎಂದು ಸ್ಪೂರ್ತಿ ಕಲಾ ಮತ್ತು ಸಂರಕ್ಷಣಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಂ. ನಂಜುಂಡಸ್ವಾಮಿ ಹೇಳಿದರು.
ಪಟ್ಟಣದ ಕಬಿನಿ ಸರ್ಕಾರಿ ಅತಿಥಿಗೃಹದಲ್ಲಿ ನಡೆದ ಸ್ಪೂರ್ತಿ ಕಲಾ ಮತ್ತು ಸಂರಕ್ಷಣಾ ಟ್ರಸ್ಟ್ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪುರಾತನ ಧಾರ್ಮಿಕತೆ ಬಿಂಬಿಸುವ ಶ್ರೀ ಗುಂಜಾ ನರಸಿಂಹ ಸ್ವಾಮಿ ನೆಲೆಸಿರುವ ನರಸೀಪುರದಲ್ಲಿ ಗ್ರಾಮೀಣರ ಸಾಂಸ್ಕೃತಿಕ ಕಲೆಗಳ ಸಂಗಮ ಕ್ಷೇತ್ರವಾಗಬೇಕು. ಜನಸಮುದಾಯಕ್ಕೆ ಪ್ರತಿನಿತ್ಯ ಪರಿಶುದ್ಧವಾದ ಕುಡಿಯುವ ನೀರು ಲಭ್ಯವಾಗಬೇಕು ಎಂದು ತಿಳಿಸಿದರು. ಮುಖಂಡ ಶಿವರಾಜು ಮಾತನಾಡಿದರು.
ಸ್ಪೂರ್ತಿ ಕಲಾ ಮತ್ತು ಸಂರಕ್ಷಣಾ ಟ್ರಸ್ಟ್ನ ಪದಾಧಿಕಾರಿಗಳಾಗಿ ಬಿ.ಎಂ. ನಿಜಗುಣಾರಾಧ್ಯ (ಅಧ್ಯಕ್ಷರು), ಕೆ.ಪಿ. ಕಾಂತರಾಜು (ಉಪಾಧ್ಯಕ್ಷರು), ಎಂ.ನಂಜುಂಡಸ್ವಾಮಿ (ಪ್ರಧಾನ ಕಾರ್ಯದರ್ಶಿ), ವಾಸು (ಖಜಾಂಚಿ), ಮಹದೇವಸ್ವಾಮಿ (ಸಂಘಟನಾ ಕಾ.), ಮಹದೇವಸ್ವಾಮಿ (ಮಾರ್ಗದರ್ಶಕರು), ಎಂ. ರಾಜು, ನಟೇಶ್, ನಂಜುಂಡಯ್ಯ (ಸಲಹೆಗಾರರು), ನಂಜುಂಡಯ್ಯ (ಸಂಚಾಲಕರು), ನಾಗರಾಜಮೂರ್ತಿ, ಮಂಜುನಾಥ ಹಾಗೂ ಜಿ. ಮಂಜುನಾಥ (ನಿರ್ದೇಶಕರು) ಆಯ್ಕೆಯಾಗಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.