ಕನಿಷ್ಠ ಕೂಲಿ ಜಾರಿಗೆ ಆಗ್ರಹಿಸಿ ಧರಣಿ
ಕ.ಪ್ರ.ವಾರ್ತೆ ಮೈಸೂರು ಫೆ. 17
ಕನಿಷ್ಠ 10,000 ಕೂಲಿ ಜಾರಿಗೊಳಿಸುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದವರು (ಸಿಐಟಿಯು) ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟಿಸಿದರು.
ಬೆಲೆ ಏರಿಕೆ, ಕೆಲಸ ಮತ್ತು ಸಮಯಕ್ಕೆ ತಕ್ಕಂತೆ ಗೌರವಧನ ಹೆಚ್ಚಿಸಬೇಕು. ಅಂಗನವಾಡಿ ಕೇಂದ್ರಗಳ ಖಾಸಗೀಕರಣ ಕೈಬಿಡಬೇಕು. ಐಟಿಸಿ ಸಿಗಾರ್ ಪ್ರಥಮ್ ಸಂಸ್ಥೆಗೆ ಶಾಲಾಪೂರ್ವ ಶಿಕ್ಷಣ ನಡೆಸಲು, ಬಾಲವಾಡಿ ತೆರೆಯಲು ನೀಡಿರುವ ಒಪ್ಪಿಗೆಯನ್ನು ವಾಪಸ್ ಪಡೆಯಬೇಕು ಎಂದು ಅವರು ಒತ್ತಾಯಿಸಿದರು.
ಈಗ ಜಾರಿಯಲ್ಲಿರುವ ಎನ್ಪಿಎಸ್ ಪಿಂಚಣಿ ಯೋಜನೆಯಲ್ಲಿ ನೌಕರರಿಂದ ಶೇ.10 ಹಾಗೂ ಸರ್ಕಾರದಿಂದ ಶೇ.10 ಹಣ ಹೆಚ್ಚಿಸಿ ಹಣ ತೊಡಗಿಸಬೇಕು. ಈಗಾಗಲೇ ನಿವೃತ್ತಿ ಹೊಂದಿರುವವರಿಗೆ ಕ್ರಮವಾಗಿ 1 ಲಕ್ಷ ಹಾಗೂ 50 ಸಾವಿರ ಪರಿಹಾರ ನೀಡಬೇಕು. ನಿವೃತ್ತಿ ಹೊಂದಿದವರ ಕುಟುಂಬದವರಿಗೆ ಕೆಲಸ ನೀಡಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯದ 12 ಜಿಲ್ಲೆಗಳಲ್ಲಿ ಖಾಸಗೀಕರಣದ ಅಪಾಯಕಾರಿ ಶಿಫಾರಸುಗಳನ್ನು ವಾಪಸ್ ಪಡೆಯಬೇಕು. ಆ ಎಲ್ಲ ಕೆಲಸಗಳನ್ನು ಈಗಿರುವ ಅಂಗನವಾಡಿ ನೌಕರರಿಗೆ ನೀಡಿ ಕಾಯಂಗೊಳಿಸಬೇಕು. ವಿವಿಧ ಇಲಾಖಾ ನೇಮಕಾತಿಯಲ್ಲಿ ಅಂಗನವಾಡಿ ನೌಕರರಿಗೆ ಆದ್ಯತೆ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ವಿವಿಧ ಭತ್ಯೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಈಗಿರುವ ಆರೋಗ್ಯ ವಿಮೆಯಲ್ಲಿನ ಗರ್ಭಕೋಶದ ಚಿಕಿತ್ಸಾ ವೆಚ್ಚವನ್ನು ತಕ್ಷಣ ಜಾರಿಗೊಳಿಸಬೇಕು. ಈ ಸೌಲಭ್ಯ ಎಲ್ಲ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಆಸ್ಪತ್ರೆಗಳಲ್ಲಿ ದೊರೆಯಬೇಕು. ಮಿನಿ ಅಂಗನವಾಡಿ ಕೇಂದ್ರವನ್ನು ಸಾಧಾರಣ ಕೇಂದ್ರಗಳಾಗಿ ಮಾರ್ಪಡಿಸಬೇಕು. ಅಲ್ಲಿಯವರೆಗೂ ಕಾರ್ಯಕರ್ತೆಗೆ ಗೌರವಧನ ನೀಡಬೇಕು ಎಂದು ಅವರು ಆಗ್ರಹಿಸಿದರು.
ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಕೆ.ಪಿ. ಕಾವೇರಮ್ಮ, ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಸುನಂದಾ, ಪದಾಧಿಕಾರಿಗಳಾದ ಜಿ. ಶಕುಂತಲಾ, ರಾಜೇಶ್ವರಿ, ಮಂಗಳಗೌರಮ್ಮ, ಹಸೀನಾ ಬಾನು, ಪುಷ್ಪಲತಾ, ತೇಜೋಮಣಿ, ರಾಜಮಣಿ, ಸಿಐಟಿಯು ಜಿಲ್ಲಾಧ್ಯಕ್ಷ ಬಾಲಾಜಿರಾವ್, ಮುಖಂಡರಾದ ಸೋಮಶಂಕರ್, ಬಲರಾಂ, ಅನ್ನಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

