ಸಾಧನೆಗೆ ಕಠಿಣ ಶ್ರಮ ಅಗತ್ಯ: ಚೇತನ್
ಸುತ್ತೂರು: ಯಾವುದೇ ಕೆಲಸ ಸಿದ್ಧಿಸಬೇಕಾದರೆ ಅದಕ್ಕೆ ಕಠಿಣ ಪರಿಶ್ರಮ ಅವಶ್ಯಕ. ಏಕೆಂದರೆ ಯಶಸ್ಸು ಎಂಬುದು ಪುಕ್ಸಟ್ಟೆ ಪುನುಗಲ್ಲ ಎಂದು ಮೈಸೂರಿನ ವ್ಯಕ್ತಿತ್ವ ವಿಕಸನ ತರಬೇತುದಾರ ಆರ್.ಎ. ಚೇತನ್ರಾಮ್ ಹೇಳಿದರು.
ಜೆಎಸ್ಎಸ್ ಪ್ರೌಢಶಾಲೆಯ ಸುವರ್ಣ ಮಹೋತ್ಸವ ವರ್ಷಾಚರಣೆ ಅಂಗವಾಗಿ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪರೀಕ್ಷಾ ಭಯ ನಿವಾರಣೆ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಸ್ಪಷ್ಟ ಗುರಿ ಇರಬೇಕು. ಅದು ದೊಡ್ಡದಾಗಿರಬೇಕು. ಆ ಗುರಿ ತಲುಪಲು ನಿರಂತರ ಪ್ರಯತ್ನ ಮಾಡಬೇಕು. ಈ ದಿಸೆಯಲ್ಲಿ ಕೆಲವು ತ್ಯಾಗ ಮಾಡಲು ವಿದ್ಯಾರ್ಥಿಗಳು ಸಿದ್ಧರಿರಬೇಕು ಎಂದರು.
ಪರೀಕ್ಷೆಯಲ್ಲಿ ಸುಮ್ಮನೆ ಬರೆಯುವುದಕ್ಕಿಂತ ಮೌಲ್ಯಮಾಪಕರು ಒಪ್ಪುವ ಉತ್ತರಗಳನ್ನು ಬರೆಯಬೇಕು. ಅಂಥ ಉತ್ತರಗಳು ಪಠ್ಯಪುಸ್ತಕಗಳಲ್ಲಿರುವುದರಿಂದ ವಿದ್ಯಾರ್ಥಿಗಳು ಚಾಚೂ ತಪ್ಪದೆ ಪಠ್ಯಪುಸ್ತಕಗಳನ್ನು ಓದಬೇಕು. ನಿಗದಿಯಾದ ಸಮಯದೊಳಗೆ, ನಿರ್ದಿಷ್ಟ ಅಂಕಗಳಿಗೆ ಉತ್ತರ ಪತ್ರಿಕೆಯಲ್ಲಿರುವ ಸ್ಥಳಾವಕಾಶವನ್ನು ನೋಡಿಕೊಂಡು ಉತ್ತರಿಸುವ ಜಾಣ್ಮೆ ವಿದ್ಯಾರ್ಥಿಗಳಿಗಿದ್ದಾಗ ಮಾತ್ರ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಾಯ ಜಿ. ಶಿವಮಲ್ಲು, ಪ್ರಭಾರ ಮುಖ್ಯೋಪಾಧ್ಯಾಯಿನಿ ಕೆ.ಜಿ. ಇಂದಿರಮ್ಮ, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಬಿ.ಎಂ. ಸಿದ್ದಪ್ಪ ಇದ್ದರು.
ಕಬಿನಿ ನಿರಾಶ್ರಿತರ ಪ್ರತಿಭಟನೆ ಮುಂದುವರಿಕೆ
ಎಚ್.ಡಿ.ಕೋಟೆ: ಕಬಿನಿ ಜಲಾಶಯ ನಿರ್ಮಾಣದ ವೇಳೆಯಲ್ಲಿ ಕಬಿನಿ ಮುಳುಗಡೆಯಿಂದ ತಮ್ಮ ಜಮೀನು ಕಳೆದುಕೊಂಡ ನಿರಾಶ್ರಿತರು ಪಟ್ಟಣದ ತಾಲೂಕು ಕಚೇರಿ ಎದುರು ಕಂದಾಯ ಇಲಾಖೆಯ ವಿರುದ್ಧ ಆರಂಭಿಸಿರುವ ಪ್ರತಿಭಟನೆ ಮಂಗಳವಾರ 2ನೇ ದಿನಕ್ಕೆ ಕಾಲಿಟ್ಟಿದೆ.
ಕಂದಾಯ ಇಲಾಖೆಯ ಈ ಬೇಜವಾಬ್ದಾರಿಯಿಂದ ಸುಮಾರು 200 ಕುಟುಂಬಗಳು ಬೀದಿ ಪಾಲಾಗಿರುತ್ತಾರೆ. ಈ ನಡುವೆ ನಿರಾಶ್ರಿತರ ಪೈಕಿ 154 ಮಂದಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದಾಗ ಅವರು ನಿರಂತರವಾಗಿ 48 ದಿನ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಆದರೂ ತಾಲೂಕು, ಜಿಲ್ಲಾಡಳಿತ ಭೂಮಿ ಹಂಚಿಕೆಯಲ್ಲಿ ತಾರತಮ್ಯ ಮಾಡುವುದರ ಜೊತೆಗೆ ವಿಳಂಬ ನೀತಿ ಅನುಸರಿಸಿದ್ದಾರೆ ಎಂದು ನಿರಾಶ್ರಿತರು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

