ಮೈಸೂರು

ಹಣದಿಂದ ತೃಪ್ತಿ ಸಿಗದು: ಅಭಿನವ ಖರೆ

Published On :

ಮೈಸೂರು: ಕೇವಲ ಹಣದಿಂದ ಮಾತ್ರವೇ ತೃಪ್ತಿ ಸಿಗಲಾರದು ಎಂದು ಎಸ್ಪಿ ಅಭಿನವ್ ಖರೆ ಹೇಳಿದರು.
ನೇಗಿಲಯೋಗಿ ವಿದ್ಯಾವರ್ಧಕ ವೃತ್ತಿ ಮಾರ್ಗದರ್ಶನ  ಪರೀಕ್ಷಾ ಪೂರ್ವ ತರಬೇತಿ ಅಕಾಡೆಮಿ ಹಾಗೂ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  
ವಿದ್ಯಾರ್ಥಿಗಳು ಮೊದಲಿಗೆ ಅವರಿಗೆ ಇರುವ ಆಸಕ್ತಿಯನ್ನು ಗುರುತಿಸಿಕೊಳ್ಳಬೇಕು. ಅಲ್ಲದೆ ವ್ಯಕ್ತಿತ್ವ ವಿಕಾಸನದ ಬಗ್ಗೆ ಕಾಳಜಿ ವಹಿಸಬೇಕು. ಯಾವುದೇ ವ್ಯಕ್ತಿಯೂ ಹಣದ ಹಿಂದೆ ಓಡಬಾರದು. ಕೇವಲ ಹಣದಿಂದ ತೃಪ್ತಿ ಸಿಗದು ಎಂಬುದನ್ನು ಅರಿಯಬೇಕು ಎಂದರು.  
ಸ್ಸರ್ಧಾತ್ಮಕ ಪರೀಕ್ಷೆ ತೆಗೆದುಕೊಂಡು ಉನ್ನತ ಹುದ್ದೆ ಅಲಂಕರಿಸುವುದರಿಂದ ಉದ್ಯೋಗ ದೊರಕಿದ ತೃಪ್ತಿಯ ಜತೆಗೆ ಸಮಾಜ ಅಭಿವೃದ್ಧಿಗೆ ಸೇವೆ ಮಾಡುವ ಅವಕಾಶ ಸಿಗಲಿದೆ. ವಿದ್ಯಾರ್ಥಿಗಳು ಪರಿಶ್ರಮದಿಂದ ಓದುವುದರ ಜತೆಗೆ ಪ್ರತಿದಿನ ಒಂದು ಗಂಟೆ ಕಾಲ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಅಭ್ಯಾಸಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.  
ಅಕಾಡೆಮಿ ಗೌರವ ಸಲಹೆಗಾರ ಡಿ. ರವಿಕುಮಾರ್ ಹಾಗೂ ಸ್ಪರ್ಧಾಕಾಂಕ್ಷಿ ಆಶಿಸ್ ರಾಯ್ ಮಾತನಾಡಿದರು.  
ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಹಾಗೂ ಮಾಜಿ ಮೇಯರ್ ಪಿ. ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಸದಾಶಿವೇಗೌಡ ಸ್ವಾಗತಿಸಿದರು. ರೂಪಪ್ರಿಯ ನಿರೂಪಿಸಿದರು. ಬಿ.ಆರ್. ನಂದೀಶ್ಕುಮಾರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.