ಮೈಸೂರು

ಅರಿಶಿನ ಸಂಸ್ಕರಣಾ ತಂತ್ರಜ್ಞಾನ ಪ್ರಾತ್ಯಕ್ಷಿಕೆ

Published On :

ಮೈಸೂರು: ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯವು (ಸಿಎಫ್ಟಿಆರ್ಐ) ಚಾಮರಾಜನಗರದ ಅರಿಶಿನ ಬೆಳೆಗಾರರನ್ನು ತಲುಪುವ ಪ್ರಯತ್ನಕ್ಕೆ ಸಿಎಸ್ಐಆರ್- 800 ಎನ್ನುವ ಯೋಜನೆಯಡಿಯಲ್ಲಿ ಕೆಲವು ತಿಂಗಳ ಹಿಂದೆ ಚಾಲನೆ ನೀಡಿ ಯಂತ್ರವನ್ನು ತಲುಪಿಸುವ ಪ್ರಯತ್ನಕ್ಕೆ ನಾಂದಿ ಹಾಡಿತ್ತು. ಇದೀಗ ಈ ಸಂಸ್ಕರಣಾ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಡಲು ಮುಂದಾಗಿದೆ.
ಫೆ. 21ರ ಬೆಳಗ್ಗೆ 10.30ಕ್ಕೆ ಅರಿಶಿನ ಬೆಳೆಗಾರರಿಗೆ ಉಚಿತವಾಗಿ ಪ್ರಾತ್ಯಕ್ಷಿಕೆ ಏರ್ಪಡಿಸಿದ್ದು, ಈ ಭಾಗದ ರೈತರಿಗೆ ಅನುಕೂಲವಾಗಬಹುದಾದ ತಾಜಾ ತೆಂಗಿನ ಕಾಯಿಯಿಂದ ವರ್ಜಿನ್ ತೆಂಗಿನೆಣ್ಣೆಯನ್ನು ತಯಾರಿಸುವ ಹಾಗೂ ಅಮೈಲೇಸ್ ಕಿಣ್ವಭರಿತ ಎನರ್ಜಿ ಫುಡ್ ತಯಾರಿಕೆಯ ಪ್ರಾತ್ಯಕ್ಷಿಕೆಗಳನ್ನೂ ಆಯೋಜಿಸಲಾಗಿದೆ.
ಸಿಎಫ್ಟಿಆರ್ಐನ ವಿನೂತನ ವಿಧಾನವು ಸಮಯ ಹಾಗೂ ವೆಚ್ಚವನ್ನು ಉಳಿಸುವುದಲ್ಲದೆ ಉತ್ತಮ ಗುಣಮಟ್ಟ ಹಾಗೂ ಪ್ರಮಾಣದಲ್ಲಿ ಅರಿಶಿನದ ಪುಡಿಯನ್ನು ನೀಡಲಿದೆ. ಈ ವಿಧಾನವು ಅರಿಶಿನ ಸಂಸ್ಕರಣೆಗೆ ಅವಶ್ಯಕವಾದ ಸಮಯವನ್ನು ಒಂದು ತಿಂಗಳ ಅವಧಿಯಿಂದ ಎರಡೇ ದಿನಗಳಿಗೆ ಕುಗ್ಗಿಸಿದೆ. ಹೀಗಾಗಿ ಬಿರುಬಿಸಿಲಿನಿಂದಾಗಿ ಬಣ್ಣಗೆಡುವ ಅಥವಾ ಸೂಕ್ಷ್ಮಜೀವಿಗಳ ಸೋಂಕು ಉಂಟಾಗುವ ಸಾಧ್ಯತೆಗಳನ್ನೂ ಇದು ಕಡಿಮೆ ಮಾಡಿದೆ. ಈ ವಿಧಾನವನ್ನು ಯಾಂತ್ರೀಕರಿಸಬಹುದಾದ್ದರಿಂದ ಪಾರಂಪಾರಿಕ ವಿಧಾನಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಸಂಸ್ಕರಣೆಯನ್ನು ಕೈಗೊಳ್ಳಬಹುದಾಗಿದೆ. ಜತೆಗೆ ಭಾರತೀಯ ಪೇಟೆಂಟು ಕೂಡ ಈ ವಿಧಾನಕ್ಕೆ ದೊರಕಿದೆ.
ವಾರ್ಷಿಕ ಸುಮಾರು 9 ಸಾವಿರ ಕೋಟಿ ವಹಿವಾಟು ನಡೆಯುವ ಅರಿಶಿನ ಉದ್ಯಮದ ಮೇಲೆ ಈ ವಿಧಾನದ ಪ್ರಭಾವ ಲಾಭದಾಯಕವಾಗಬಹುದಾದ್ದರಿಂದ ಇದರ ಲಾಭವನ್ನು ರೈತರಿಗೆ ತಲುಪಿಸಲು ಸಿಎಫ್ಟಿಆರ್ಐ ನಿರ್ಧರಿಸಲಾಗಿದೆ. ಭಾಗವಹಿಸಲಿಚ್ಛಿಸುವವರು ದೂ. 0821- 25159910, 98866 40328 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.