ಸುದ್ದಿ ಸಂಕ್ಷೇಪ
ಕೆನರಾ ಬ್ಯಾಂಕ್ ಸರಗೂರು ಶಾಖೆ ನಾಳೆ ಉದ್ಘಾಟನೆ
ಮೈಸೂರು: ಎಚ್.ಡಿ. ಕೋಟೆ ತಾ. ಸರಗೂರು ಎಚ್.ಬಿ. ಮುಖ್ಯರಸ್ತೆಯಲ್ಲಿ ಕೆನರಾ ಬ್ಯಾಂಕ್ ನೂತನ ಶಾಖೆ, ಆನ್ಸೈಟ್ ಎಟಿಎಂ ಉದ್ಘಾಟನಾ ಸಮಾರಂಭವನ್ನು ಫೆ.25ರಂದು ಏರ್ಪಡಿಸಿದೆ. ಕೆನರಾ ಬ್ಯಾಂಕ್ನ ಅಧ್ಯಕ್ಷ ಆರ್.ಕೆ. ದುಬೆ ಅವರು ಅಂದು ಬೆಳಗ್ಗೆ 11.45ಕ್ಕೆ ಎಚ್.ಬಿ. ಮುಖ್ಯರಸ್ತೆಯ ಶಾಖೆಯನ್ನು ಹಾಗೂ ಮಧ್ಯಾಹ್ನ 1ಕ್ಕೆ ವಿವೇಕಾನಂದ ಮೆಮೋರಿಯಲ್ ಆಸ್ಪತ್ರೆಯ ಶಾಖೆಯನ್ನು ಉದ್ಘಾಟಿಸುವರು. ಉಪ ಮಹಾಪ್ರಬಂಧಕ ಡಾ. ಎಸ್.ಟಿ. ರಾಮಚಂದ್ರ, ಸರಗೂರು ಶಾಖೆ ಪ್ರಬಂಧಕ ಪಿ. ಮುರಳೀಧರ ಜಿ. ಭಟ್ ಅತಿಥಿಗಳಾಗಿ ಭಾಗವಹಿಸುವರು.
ಪಿಎಚ್.ಡಿ ಪದವಿ
ಮೈಸೂರು: ಡಾ. ಎಂ ನಂಜಯ್ಯ ಹೊಂಗನೂರು ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ ಎಂ.ಆರ್. ಶಶಿಕಲಾ ಅವರ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ ಅವರಿಗೆ ಜಾನಪದ ವಿಷಯದಲ್ಲಿ ಪಿಎಚ್.ಡಿ ನೀಡಿದೆ. ಟಿ. ನರಸೀಪುರ ತಾಲೂಕಿನ ಹಬ್ಬ ಹಾಗೂ ಜಾತ್ರೆಗಳು ಕುರಿತು ಅವರ ಸಂಶೋಧನೆ ನಡೆಸಿದ್ದಾರೆ.
ಬಾಲ್ಯವಿವಾಹಕ್ಕೆ ಬ್ರೇಕ್
ಎಚ್.ಡಿ.ಕೋಟೆ: ಉಭಯ ಕುಟುಂಬಗಳ ನಡುವೆ ಒಪ್ಪಂದವೇರ್ಪಟ್ಟು ನಡೆಯುತ್ತಿದ್ದ ಬಾಲ್ಯವಿವಾಹವನ್ನು ಅಧಿಕಾರಿಗಳು ತಡೆದಿರುವ ಘಟನೆ ತಾಲೂಕಿನ ಮುರುಗನಹಳ್ಳಿಯಲ್ಲಿ ಭಾನುವಾರ ನಡೆದಿದೆ. ಹುಣಸೂರು ಪಟ್ಟಣ ಮೋಚಿ ಬೀದಿಯ ನಿವಾಸಿ ಸೀತಮ್ಮ- ಬಾಬುಗೌಡರ ಪುತ್ರ ಸುಬ್ರಹ್ಮಣ್ಯ ಹಾಗೂ ಎಚ್.ಡಿ. ಕೋಟೆ ತಾಲೂಕು ಮುರುಗನಹಳ್ಳಿಯ ನಿವಾಸಿ ಪುಟ್ಟಮ್ಮ- ಚೆಲುವರಾಜು ಅವರ ಪುತ್ರಿ ರಮ್ಯಾ(16) ವಿವಾಹ ಏರ್ಪಡಿಸಲಾಗಿತ್ತು. ಖಚಿತ ಮಾಹಿತಿ ಪಡೆದ ಮಕ್ಕಳ ಸಹಾಯವಾಣಿಯ ಸಿಬ್ಬಂದಿ ಹಾಗೂ ಸಿಪಿಡಿಒ ರಾಮಕೃಷ್ಣ ಅವರು ಸ್ಥಳಕ್ಕೆ ಧಾವಿಸಿ ಮದುವೆಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉಭಯ ಕುಟುಂಬಗಳಿಂದಲೂ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗಿದೆ.
ನಟನದ ಹೊಸ ನಾಟಕ ಕಂಸಾಯಣ
ಮೈಸೂರು: ಒಂದೂವರೆ ದಶಕಗಳಿಂದ ರಂಗಭೂಮಿಯಲ್ಲಿ ಹೊಸ ಪ್ರಯೋಗಗಳಿಗೆ ಹೆಸರುವಾಸಿಯಾಗಿರುವ ನಟ ಮಂಡ್ಯ ರಮೇಶ್ ಸಾರಥ್ಯದ ನಟನ ಸಂಸ್ಥೆಯು ಇದೀಗ ಕಂಸಾಯಣ ಎಂಬ ಹೊಸ ನಾಟಕ ಪ್ರದರ್ಶಿಸಲು ಸಜ್ಜಾಗಿದೆ. ಫೆ.27ರ ಮಹಾಶಿವರಾತ್ರಿಯಂದು ಸಂಜೆ 7ಕ್ಕೆ ಕುವೆಂಪುನಗರದ ಗಾನಭಾರತಿಯಲ್ಲಿ ನಾಟಕ ಶಾಲೆಯ ವಿದ್ಯಾರ್ಥಿಗಳು ಈ ನಾಟಕ ಅಭಿನಯಿಸುವರು ಮೊ. 94804 68327 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

