ಮೈಸೂರು

ಮಾವು, ಮೆಣಸಿನಕಾಯಿ ಬೆಳೆಗಾರರಿಗೆ ಸಲಹೆ

Published On :

ಮೈಸೂರು: ಮಾವು ಮತ್ತು ಮೆಣಸಿನಕಾಯಿಗೆ ಹೂ ಬಿಡುವ ಹಂತದಲ್ಲಿ ಜಿಗಿಹುಳು ರೋಗ ಬಾಧೆ ಕಾಣಿಸಿಕೊಳ್ಳಬಹುದು ಎಂದು ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರ ತಿಳಿಸಿದೆ. ಮಾವಿನಲ್ಲಿ ಹೂ ಬಿಡುವ ಮುನ್ನ ಹಾಗೂ ಕಾಯಿ ಕಚ್ಚಿದ ಕೂಡಲೆ ಜಿಗಿಹುಳು ಮತ್ತು ಬೂದಿ ರೋಗದ ನಿಯಂತ್ರಣಕ್ಕಾಗಿ ಗಿಡಗಳಿಗೆ 1.5 ಮಿ.ಲೀ. ರೋಗರ್ ಜೊತೆಗೆ 3 ಗ್ರಾಂ. ನೀರಿನಲ್ಲಿ ಕರಗುವ ಗಂಧಕವನ್ನು ಬೆರಸಿ ಸಿಂಪಡಿಸಬೇಕು. ಮೆಣಸಿನಕಾಯಿಗೆ ಹೂ ಬಿಡುವಾಗ ಎಲೆ ಮುದುಡು ರೋಗ ಕಂಡುಬರುತ್ತದೆ. ಮೊದಲಿಗೆ ರೋಗ ಬಂದ ಗಿಡಗಳನ್ನು ಕಿತ್ತು ನಾಶಪಡಿಸಬೇಕು. ನಂತರ 0.6 ಮಿ.ಲೀ. ಇಮಿಡೋಕ್ಸೊಪ್ರಿಡ್ ಔಷಧಿಯನ್ನು ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು. ಬತ್ತ ಬೆಳೆಯುವ ಪ್ರದೇಶದಲ್ಲಿ ಸಾಮಾನ್ಯವಾಗಿ ಸತುವಿನ ಕೊರತೆ ಬಹಳಷ್ಟು ಮಣ್ಣುಗಳಲ್ಲಿ ಕಂಡು ಬರುವುದರಿಂದ ಸತುವಿನ ಸಲ್ಫೇಟನ್ನು ಬತ್ತದ ಬೇಸಾಯದಲ್ಲಿ ಉಪಯೋಗಿಸುವುದು ಸೂಕ್ತ. ಎಕರೆಗೆ 8 ಕೆ.ಜಿ. ಸತುವಿನ ಸಲ್ಫೇಟನ್ನು ರಸಗೊಬ್ಬರದ ಜೊತೆ ಮಿಶ್ರಣ ಮಾಡದೆ ಮಣ್ಣಿನಲ್ಲಿ ಸೇರಿಸಬೇಕು. ಹೆಚ್ಚಿನ ಮಾಹಿತಿಗೆ ಡಾ.ಸಿ. ಗೋವಿಂದರಾಜು ಮತ್ತು ಎನ್. ನರೇಂದ್ರಬಾಬು ಅವರ ಮೊ. 8095227713 ಅಥವಾ 9343532154 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.