ಮೈಸೂರು

ಹೆಗ್ಗೂರು ಮತ್ತಿತಾಳೇಶ್ವರ ರಥೋತ್ಸವ

Published On :

ಬನ್ನೂರು: ಪುರಾಣ ಪ್ರಸಿದ್ಧ ಹೆಗ್ಗೂರು ಶ್ರೀ ಮತ್ತಿತಾಳೇಶ್ವರಸ್ವಾಮಿ ರಥೋತ್ಸವವು ಚಾಂದ್ರಸೌರ ಮಹಾಶಿವರಾತ್ರಿ ಅಂಗವಾಗಿ ಗುರುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ರಥೋತ್ಸವ ದೇಗುಲದ ಮುಂಭಾಗದಿಂದ ತಮಟೆ, ಮಂಗಳವಾದ್ಯ ನಾದದೊಂದಿಗೆ ಆರಂಭಗೊಂಡು ದೇವಸ್ಥಾನದ ಸುತ್ತ ಎಳೆಯಲಾಯಿತು. ರಥೋತ್ಸವದಲ್ಲಿ ಮೈಸೂರು, ಬನ್ನೂರು, ಮಂಡ್ಯ, ಮಳವಳ್ಳಿಗಳಿಂದ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು ಭಕ್ತಿ ಭಾವದಿಂದ ದೇವರಿಗೆ ಜೈಕಾರ ಹಾಕುತ್ತಾ  ರಥವನ್ನು ಎಳೆದರು. ನೂತನ ದಂಪತಿಗಳು, ಮಹಿಳೆಯರು, ಮಕ್ಕಳು ಸೇರಿದಂತೆ ಯುವಕರು ರಥೋತ್ಸವಕ್ಕೆ ಹಣ್ಣು ಧವನ ಎಸೆದು ತಮ್ಮ ಇಷ್ಟಾರ್ಥಕ್ಕಾಗಿ ಪ್ರಾರ್ಥಿಸಿದರು. ರಥೋತ್ಸವ ಮಧ್ಯಾಹ್ನ 12 ರಿಂದ 108ರೊಳಗೆ ಸಲ್ಲುವ ಶುಭ ವೃಷಭ ಲಗ್ನದಲ್ಲಿ ದೇವಾಲಯದ ಪ್ರಧಾನ ಅರ್ಚಕ ಮಹದೇವಸ್ವಾಮಿ ಮತ್ತು ಆಗಮಿಕರಾದ ಕನ್ನಹಳ್ಳಿ ಮಹೇಶ್ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಬೆಳಿಗ್ಗೆ ರಥದ ಮೇಲೆ ಶ್ರೀ ಮತ್ತಿತಾಳೇಶ್ವರಸ್ವಾಮಿ ಪ್ರತಿಷ್‌ಠಾಪಿಸಿ ರಥಕ್ಕೆ ಪೂಜೆ ಸಲ್ಲಿಸಿದ ನಂತರ, ಭಕ್ತಾದಿಗಳು ರಥವನ್ನು ದೇವಾಲಯದಿಂದ  ದೇವಾಲಯದ ಸುತ್ತ ಸಾಗಿ ಸ್ವಸ್ಥಾನಕ್ಕೆ ತಲುಪಿತು.ಮತ್ತಿತಾಳೇಶ್ವರಸ್ವಾಮಿ ಪ್ರಸಾದ ಸೇವಾ ಸಮಿತಿಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.