5ಕ್ಕೆ ಒಕ್ಕಲಿಗರ ಸಂಘದ ನಿರ್ದೇಶಕರ ಚುನಾವಣೆ
ಮೈಸೂರು: ರಾಜ್ಯ ಒಕ್ಕಲಿಗರ ಸಂಘದ ಮೈಸೂರು ಜಿಲ್ಲಾ ಕ್ಷೇತ್ರಕ್ಕೆ ಜ.5 ರಂದು ಚುನಾವಣೆ ನಡೆಯಲಿದೆ ಎಂದು ಸಹಕಾರ ಸಂಘಗಳ ಉಪನಿಬಂಧಕ ಹಾಗೂ ಚುನಾವಣಾಧಿಕಾರಿ ಎಚ್.ಸಿ. ಜೋಷಿ ಹೇಳಿದರು.
ಮೈಸೂರು, ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯ ಈ ಚುನಾವಣೆಯಲ್ಲಿ 3 ಮಂದಿ ನಿರ್ದೇಶಕರ ಆಯ್ಕೆ ನಡೆಯಲಿದ್ದು, ಇಬ್ಬರು ಮಹಿಳೆಯರು ಸೇರಿದಂತೆ 17 ಮಂದಿ ಕಣದಲ್ಲಿದ್ದಾರೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೈಸೂರು, ನಂಜನಗೂಡು, ಎಚ್.ಡಿ ಕೋಟೆ ತಾಲೂಕುಗಳಲ್ಲಿನ ಮತಕ್ಷೇತ್ರಗಳಲ್ಲಿ 8739 ಮಂದಿ ಮತದಾರರಿದ್ದು, ಮಹಾರಾಣಿ ಪದವಿ ಕಾಲೇಜಿನಲ್ಲಿ ಮತದಾನ ನಡೆಯಲಿದೆ. ಕೆ.ಆರ್ ನಗರ ತಾಲೂಕಿನಲ್ಲಿ 584 ಮಂದಿ ಮತದಾರರಿದ್ದು ಇದರ ಮತದಾನ ಕೆ.ಆರ್ ನಗರದ ಒಕ್ಕಲಿಗರ ಸಂಘದ ಆವರಣದಲ್ಲಿ, ಹುಣಸೂರು ಮತ್ತು ಪಿರಿಯಾಪಟ್ಟಣ ತಾಲೂಕಿನಲ್ಲಿ 1132 ಮಂದಿ ಮತದಾರರಿದ್ದು ಇದರ ಮತದಾನವು ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಟಿ.ನರಸೀಪುರ ತಾಲೂಕಿನಲ್ಲಿ 2325 ಮಂದಿ ಮತದಾರರಿದ್ದು ಪಟ್ಟಣದ ಗ್ರಾಮ ವಿದ್ಯೋದಯ ಸಂಘದ ಆವರಣದಲ್ಲಿ, ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ತಾಲೂಕುಗಳಲ್ಲಿ 531 ಮಂದಿ ಮತದಾರರಿದ್ದು ಇದರ ಮತದಾನ ಚಾಮರಾಜನಗರ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆವರಣದಲ್ಲಿ ನಡೆಯಲಿದೆ ಎಂದರು.
ಒಟ್ಟು 5 ಮತಕ್ಷೇತ್ರಗಳಲ್ಲಿ 26 ಮತಕಟ್ಟೆಗಳಿದ್ದು, ಇಬ್ಬರು ವೀಕ್ಷಕರು, 6 ಮಂದಿ ಸಹಾಯಕ ಚುನಾವಣಾಧಿಕಾರಿಗಳು, 107 ಮಂದಿ ಮತಗಟ್ಟೆ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದು, ಪ್ರತಿ ಕ್ಷೇತ್ರಕ್ಕೆ 73 ಮಂದಿ ಪೊಲೀಸರು ಹಾಗೂ 1 ಬೆಟಾಲಿಯನ್ ರಿಸರ್ವ್ ಪೊಲೀಸ್ ತಂಡ ಭದ್ರತೆ ಒದಗಿಸಲಿದೆ ಎಂದು ಅವರು ತಿಳಿಸಿದರು.ಪ್ರತಿ ಅಭ್ಯರ್ಥಿ ಒಂದು ಮತಕ್ಷೇತ್ರಕ್ಕೆ ಒಬ್ಬರಂತೆ 5 ಚುನಾವಣಾ ಏಜೆಂಟರನ್ನು ನೇಮಕ ಮಾಡಲು ಅವಕಾಶವಿದೆ. ಮತ ಎಣಿಕೆಗೆ ಪ್ರತಿ ಟೇಬಲ್ಗೆ ಒಬ್ಬರಂತೆ 15 ಟೇಬಲ್ಗೆ 15 ಮಂದಿ ಏಜೆಂಟರನ್ನು ನೇಮಕ ಮಾಡಿಕೊಳ್ಳಬಹುದು ಎಂದರು.
ಜ.6 ರಂದು ಬೆಳಗ್ಗೆ 8ಕ್ಕೆ ಮೈಸೂರು ಮಹಾರಾಣಿ ಕಲಾ ಕಾಲೇಜಿನಲ್ಲಿ ಬೆಳಗ್ಗೆ 8 ರಿಂದ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಈಗಾಗಲೇ ಮತದಾನ ಹಾಗೂ ಮತ ಏಣಿಕೆ ಸಂಬಂಧ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತರಬೇತಿ ನೀಡಿ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಹಾಯಕ ಚುನಾವಣಾಧಿಕಾರಿ ಎನ್.ಕೆ. ಗೋಪಾಲಯ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

