ಸುದ್ದಿ ಸಂಕ್ಷೇಪ
ಪಾಣತ್ತಲೆಗೆ ಛಾಯಾಗ್ರಹಣ ಪ್ರಶಸ್ತಿ
ಮೈಸೂರು: ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ಛಾಯಾಗ್ರಾಹಕ ನಾಗೇಶ್ ಪಾಣತ್ತಲೆ ಅವರಿಗೆ ಸ್ಯಾಮ್ ಸರ್ಕ್ಯೂಟ್ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಿಂಟ್ ಸರ್ಕ್ಯೂಟ್ನಲ್ಲಿ 3 ಚಿನ್ನದ ಪದಕಗಳು ಲಭಿಸಿವೆ. ಆರು ವಿಭಾಗದಲ್ಲಿ ನಡೆದ ಸ್ಪರ್ಧೆಗಳಲ್ಲಿ ನಾಗೇಶ್ ಅವರ ಮೈಸೂರಿಗೆ ಲಗ್ಗೆ ಮಾಡಿದ್ದ ಆನೆ ಚಿತ್ರಕ್ಕೆ 2 ಚಿನ್ನದ ಪದಕ ಹಾಗೂ 4 ಪ್ರಶಸ್ತಿ ಪತ್ರ, ಚಿರತೆ ದಾಳಿ ಚಿತ್ರಕ್ಕೆ 3 ವಿಭಾಗದಲ್ಲಿ ಅತ್ಯುತ್ತಮ ಛಾಯಾಚಿತ್ರವೆಂದು ಪರಿಗಣಿಸಿ ಪ್ರಶಸ್ತಿ ಲಭಿಸಿದೆ.
ಬತ್ತ, ಮಾವು ಬೆಳೆಗಾರರಿಗೆ ಸಲಹೆ
ಮೈಸೂರು: ಜಿಲ್ಲೆಯಲ್ಲಿನ ಬತ್ತ ಮತ್ತು ಮಾವು ಬೆಳೆಗಾರರಿಗೆ ನಾಗನಹಳ್ಳಿ ಸಮಗ್ರ ಕೃಷಿ ಹವಾಮಾನ ವಿಭಾಗದ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಬತ್ತ ಕಟಾವಿನ ಹಂತದಲ್ಲಿದ್ದಾಗ ಕಟಾವಿನ ಒಂದು ವಾರ ಮುಂಚೆ ಬಿಸಿಗಾಲುವೆ ತೆಗೆದು ನೀರು ಬಸಿಯಬೇಕು. ಮಾವು ಹೂ ಬಿಡುವ ವೇಳೆ ಜಿಗಿಹುಳು ಮತ್ತು ಬೂದಿರೋಗ ಕೀಟ ಬಾಧಿಸಲಿದೆ. ಈ ಹಿನ್ನೆಲೆಯಲ್ಲಿ ಮಾವಿನಲ್ಲಿ ಹೂ ಬಿಡುವುದಕ್ಕೆ ಮುಂಚೆ ಹಾಗೂ ಕಾಯಿ ಕಚ್ಚಿದ ಕೂಡಲೆ ಜಿಗಿಹುಳು ಮತ್ತು ಬೂದಿ ರೋಗದ ನಿಯಂತ್ರಣಕ್ಕೆ ಗಿಡಗಳಿಗೆ 1.5 ಮಿ.ಲೀ. ರೋಗರ್ ಜೊತೆಗೆ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕವನ್ನು ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗೆ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಸಿ.ಗೋವಿಂದರಾಜು ಅಥವಾ ಸಹ ಸಂಶೋಧಕ ಎನ್. ನರೇಂದ್ರ ಬಾಬು ಅವರ ದೂ.0821- 2591267 ಸಂಪರ್ಕಿಸಬಹುದು.
ಅನಂತಮೂರ್ತಿ ಬಾಲಿಶ ಹೇಳಿಕೆ
ಮೈಸೂರು: ದಾವಣಗೆರೆ ವಿವಿಗೆ ಕುಲಪತಿ ನೇಮಕ ವಿಚಾರದಲ್ಲಿ ಪ್ರೊ.ಯು.ಆರ್. ಅನಂತಮೂರ್ತಿ ಅವರು ಪದೇ ಪದೇ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ ಎಂದು ವಿಶ್ರಾಂತ ಪ್ರಾಧ್ಯಾಪಕ ಎಸ್. ಸುಬ್ಬಪ್ಪ ಟೀಕಿಸಿದ್ದಾರೆ. ಪ್ರೊ.ಯು.ಆರ್. ಅನಂತಮೂರ್ತಿ ಅವರು ಆಯ್ಕೆ ಪಟ್ಟಿ ಕಳುಹಿಸಿದ ಮೇಲೂ ಪದೇ ಪದೇ ಹೇಳಿಕೆ ನೀಡಿ ನಿಯಮಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರೆ. ಇದು ಅವರ ಘನತೆಗೆ ತಕ್ಕುದ್ದಲ್ಲ. ಒಬ್ಬ ಕೇಂದ್ರಾಡಳಿತ ವಿಶ್ವವಿದ್ಯಾಲಯದ ಕುಲಪತಿಯಾಗಿ ಕನಿಷ್ಠ ನಿಯಮಗಳನ್ನು ತಿಳಿದುಕೊಳ್ಳದೆ ಸರ್ಕಾರ ನನ್ನ ಅಧೀನದಲ್ಲಿದೆ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ. ಇನ್ನು ಮುಂದಾದರೂ ತಮ್ಮ ತಪ್ಪನ್ನು ತಿದ್ದುಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

