ಮೈಸೂರು

ಪಾರಂಪರಿಕತೆಗೆ ತಂತ್ರಜ್ಞಾನ ಸ್ಪರ್ಶ

Published On :

ಮೈಸೂರು: ಕರ್ನಾಟಕ ಪ್ರಾಚ್ಯವಸ್ತು ಸಂಗ್ರಹ ಮತ್ತು ನಿರ್ದೇಶನಾಲಯವು ಹೊಸ ತಂತ್ರಜ್ಞಾನಗಳಿಗೆ ತನ್ನನ್ನು ತಾನು ಒಡ್ಡಿಕೊಳ್ಳುತ್ತಿದ್ದು, ಅದರ ಮೊದಲ ಪ್ರಯತ್ನವಾಗಿ ಫೇಸ್ಬುಕ್ ಮತ್ತು ಟ್ವೀಟರ್ ಖಾತೆ ತೆರೆದಿದೆ.
ಪ್ರಾಚ್ಯವಸ್ತು ಸಂಗ್ರಹ ಮತ್ತು ನಿರ್ದೇಶನಾಲಯದ ವ್ಯಾಪ್ತಿಗೆ ಒಳಪಡುವ ದೇವಾಲಯಗಳು, ಕಟ್ಟಡಗಳು, ಮಹಲುಗಳ ರಕ್ಷಣೆಗೆ ತೆಗೆದುಕೊಂಡ ಕ್ರಮಗಳು, ಹೊಸ ಹೊಸ ಯೋಜನೆಗಳು ಮತ್ತು ಸಂರಕ್ಷಣೆ ನಿಟ್ಟಿನಲ್ಲಿ ಇಲಾಖೆ ಕೈಗೊಂಡ ಕಾಮಗಾರಿ ಬಗ್ಗೆ ಇದರಲ್ಲಿ ಮಾಹಿತಿ ಲಭ್ಯವಾಗಲಿದೆ.
ಈಗಾಗಲೇ ಈ ಫೇಸ್ಬುಕ್ಗೆ ವಿದೇಶಿಯರು ಸೇರಿದಂತೆ ನೂರಾರು ಮಂದಿ ಸ್ನೇಹ ಬಯಸಿದ್ದಾರೆ. ಇಲಾಖೆ ಅಧಿಕಾರಿಗಳು ಸ್ಮಾರಕಗಳ ಸಂರಕ್ಷಣೆಯ ಹಿನ್ನೆಲೆಯಲ್ಲಿ ಕೈಗೊಂಡ ಕಾರ್ಯ ಯೋಜನೆಗಳು, ಪ್ರಗತಿ ಪರಿಶೀಲನೆ ಮುಂತಾದ ಹಲವು ಮಾಹಿತಿಯು ಛಾಯಾಚಿತ್ರಗಳ ಸಮೇತ ಇದರಲ್ಲಿ ದೊರಕಲಿದೆ.
ಮಾಧ್ಯಮಗಳಲ್ಲಿ ಪ್ರಕಟವಾಗುವ ರಾಜ್ಯದ ವಿವಿಧ ಸ್ಮಾರಕಗಳ ಸುದ್ದಿಗಳು, ಲೇಖನಗಳನ್ನೂ ಈ ಫೇಸ್ಬುಕ್ನಲ್ಲಿ ಕಾಲಕಾಲಕ್ಕೆ ಸೇರ್ಪಡೆಗೊಳಿಸಲಾಗುತ್ತದೆ. ಲೇಖನಗಳನ್ನು ಸೇರ್ಪಡೆಗೊಳಿಸುವುದು ತಡವಾದರೆ ಕೂಡಲೇ ಸಾರ್ವಜನಿಕರು ಅಥವಾ ಇಲಾಖೆ ಫೇಸ್ಬುಕ್ನ ಸ್ನೇಹಬಯಸಿದವರು ಕಾಮೆಂಟ್ ಕಳುಹಿಸುವ ಮಟ್ಟಕ್ಕೆ ಈ ಫೇಸ್ಬುಕ್ ಹೆಸರಾಗಿದೆ. ಅನೇಕ ಸ್ಮಾರಕಗಳ ಸಂರಕ್ಷಣೆ ಕುರಿತು ಸಾರ್ವಜನಿಕರೆ ಇಲಾಖೆಗೆ ಅಗತ್ಯ ಮಾಹಿತಿನೀಡುತ್ತಾರೆ.
ಇಲಾಖೆ ಜಾಲತಾಣಕ್ಕೆ ಲಿಂಕ್: ಇದರೊಂದಿಗೆ ಆರಂಭಿಸಿರುವ ಟ್ವೀಟರ್ ಖಾತೆ ಮೂಲಕವೂ ಸಾರ್ವಜನಿಕರು ತಮ್ಮ ಕಾಮೆಂಟ್ಸ್ ಕಳುಹಿಸಬಹುದು. ಫೇಸ್ಬುಕ್ ಮೂಲಕವೇ ಇಲಾಖೆಯ ಜಾಲತಾಣಕ್ಕೂ ಭೇಟಿ ನೀಡುವ (ಲಿಂಕ್) ವ್ಯವಸ್ಥೆ ಮಾಡಲಾಗಿದೆ. ಇಲಾಖೆಯ ಜಾಲತಾಣಗಳಲ್ಲಿ ಪಾರಂಪರಿಕ ಇಲಾಖೆಯ ಇತಿಹಾಸ, ಇಲಾಖೆಗೆ ಸೇರಿದ ಸ್ಮಾರಕಗಳ ಪಟ್ಟಿ, ಛಾಯಾಚಿತ್ರಗಳು, ದಸರಾ ಛಾಯಾಚಿತ್ರಗಳು, ಇತ್ತೀಚಿನ ಉತ್ಕನನದ ವೇಳೆ ದೊರೆತ ಚಿನ್ನದ ನಾಣ್ಯದ ಮಾಹಿತಿ, ಇಲಾಖೆ ಆಯೋಜಿಸಿದ ಛಾಯಾಚಿತ್ರ ಪ್ರದರ್ಶನ, ಪಾರಂಪರಿಕ ನಡಿಗೆ ಮುಂತಾದ ಕಾರ್ಯಕ್ರಮಗಳ ಬಗ್ಗೆಯೂ ಮಾಹಿತಿ ದೊರೆಯಲಿದೆ ಎಂದು ಇಲಾಖೆ ಆಯುಕ್ತ ಡಾ.ಸಿ.ಜೆ. ಬೆಟಸೂರ್ಮಠ್ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಈ ಜಾಲತಾಣದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿಯೂ ಮಾಹಿತಿ ದೊರೆಯಲಿದೆ. ಅಲ್ಲದೆ ಇಲಾಖೆಯ ಮುಂದಿನ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಕಾಲಕಾಲಕ್ಕೆ ಪ್ರಕಟಿಸಲಾಗುತ್ತದೆ. ಆಸಕ್ತರು ವೆಬ್ ವಿಳಾಸ karnatakaarchaeology.gov.in ಮತ್ತು ಫೇಸ್ಬುಕ್ ವಿಳಾಸ facebook. com@kararchaeologyಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ತಾವೂ ಕಾಮೆಂಟ್ಸ್ಗಳನ್ನು ಕಳುಹಿಸಬಹುದು.

ಡಿ.ಎನ್. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.