ಮೈಸೂರು

ಒಕ್ಕಲಿಗರ ಸಂಘಕ್ಕೆ ಬಿರುಸಿನ ಮತದಾನ

Published On :

ಮೈಸೂರು: ರಾಜ್ಯ ಒಕ್ಕಲಿಗರ ಸಂಘಕ್ಕೆ ಮೈಸೂರು, ಚಾಮರಾಜನಗರ ಜಿಲ್ಲಾ ಕ್ಷೇತ್ರದಿಂದ ನಿರ್ದೇಶಕರನ್ನು ಆಯ್ಕೆ ಮಾಡಲು ಭಾನುವಾರ ನಡೆದ ಚುನಾವಣೆಯಲ್ಲಿ ಬಿರುಸಿನ ಮತದಾನ ನಡೆಯಿತು.
ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬೆಳಗ್ಗೆಯಿಂದಲೇ ಆರಂಭವಾದ ಮತದಾನದಲ್ಲಿ ಸದಸ್ಯರು ಉತ್ಸಾಹದಿಂದ ಭಾಗವಹಿಸಿ ಮತದಾನ ಮಾಡಿದರು. ಆಯಾಯ ಅಭ್ಯರ್ಥಿಗಳು ತಮ್ಮ ಚಿಹ್ನೆಯ ವಸ್ತುಗಳನ್ನು ಪ್ರದರ್ಶಿಸುವ ಮೂಲಕ ಪ್ರಚಾರದಲ್ಲಿ ತೊಡಗಿದ್ದರು. ಪುರುಷರಂತೆ ಮಹಿಳಾ ಕಾರ್ಯಕರ್ತರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರದಲ್ಲಿ ಭಾಗವಹಿಸಿದ್ದು ಕಂಡು ಬಂತು.  
ಮೈಸೂರು ನಗರ ಮತ್ತು ತಾಲೂಕು, ನಂಜನಗೂಡು ಹಾಗೂ ಎಚ್.ಡಿ. ಕೋಟೆ ತಾಲೂಕುಗಳ ಮತದಾರರಿಗೆ 17 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಮೂರು ತಾಲೂಕುಗಳ ವ್ಯಾಪ್ತಿಯಲ್ಲಿ 8739 ಮಂದಿ ಮತದಾರರಿದ್ದು, ಅವರಲ್ಲಿ 7161 ಮಂದಿ ಮತ ಚಲಾಯಿಸಿದರು. ಜಿಲ್ಲೆಯಲ್ಲಿ ಒಟ್ಟು 13311 ಮಂದಿ ಮತದಾರರಿದ್ದು ಇವರಲ್ಲಿ 11359 ಮಂದಿ ಮತ ಚಲಾಯಿಸಿದರು.
ಶಾಸಕರಾದ ಜಿ.ಟಿ. ದೇವೇಗೌಡ, ಸಂದೇಶ್‌ನಾಗರಾಜ್, ಮರಿತಿಬ್ಬೇಗೌಡ, ವಾಸು, ಮಾಜಿ ಮೇಯರ್ ಸಂದೇಶ್‌ಸ್ವಾಮಿ,  ಮೋದಾಣಿ, ಎಂಡಿಎ ಮಾಜಿ ಅಧ್ಯಕ್ಷ ಎಲ್. ನಾಗೇಂದ್ರ, ನಗರ ಪಾಲಿಕೆ ಸದಸ್ಯ ಆರ್. ಲಿಂಗಪ್ಪ, ಕೆ.ಟಿ. ಚೆಲುವೇಗೌಡ, ಜೆಡಿಎಸ್ ನಗರಾಧ್ಯಕ್ಷ ರಾಜಣ್ಣ, ಎಸ್‌ಬಿಎಂ ಮಂಜು ಮುಂತಾದವರು ಮತ ಚಲಾಯಿಸಿದ ಪ್ರಮುಖರು.           
ಇಂದು ಮತ ಏಣಿಕೆ: ಮತಗಳ ಎಣಿಕೆ ಕಾರ್ಯ ಜ. 6 ರಂದು ಮೈಸೂರು ಮಹಾರಾಣಿ ಕಲಾ ಕಾಲೇಜಿನಲ್ಲಿ ಬೆಳಗ್ಗೆ 9.30  ರಿಂದ ನಡೆಯಲಿದ್ದು, ಇದಕ್ಕಾಗಿ 15 ಟೇಬಲ್‌ಗಳಲ್ಲಿ ಎಣಿಕೆಗೆ ಸಿದ್ದತೆ ನಡೆದಿದೆ ಎಂದು ಸಹಕಾರ ಸಂಘಗಳ ಉಪನಿಬಂಧಕ ಹಾಗೂ ಚುನಾವಣಾಧಿಕಾರಿ ಎಚ್.ಸಿ. ಜೋಷಿ ತಿಳಿಸಿದರು.  
ಸಹಾಯಕ ಚುನಾವಣಾಧಿಕಾರಿ ಎನ್.ಕೆ. ಗೋಪಾಲಯ್ಯ ಇದ್ದರು. ಶಾಂತಿಯುತ ಚುನಾವಣೆಗಾಗಿ ಪೊಲೀಸರು ಸೂಕ್ತ ಭದ್ರತೆ ವಹಿಸಿದ್ದರು.
ಮತದಾನದ ವಿವರ: ಮೈಸೂರು ನಗರ ಮತ್ತು ತಾಲೂಕು, ನಂಜನಗೂಡು ಹಾಗೂ ಎಚ್.ಡಿ. ಕೋಟೆ ತಾಲೂಕುಗಳ ವ್ಯಾಪ್ತಿಯಲ್ಲಿ 8739 ಮಂದಿ ಮತದಾರರಿದ್ದು, ಅವರಲ್ಲಿ 7161 ಮಂದಿ ಮತದಾನ, ಕೆ.ಆರ್ ನಗರ ತಾಲೂಕಿನಲ್ಲಿ 584 ಮಂದಿಗೆ 524 ಮಂದಿ ಮತದಾನ,
ಹುಣಸೂರು ಮತ್ತು ಪಿರಿಯಾಪಟ್ಟಣ ತಾಲೂಕಿನಲ್ಲಿ 1132 ಮಂದಿಗೆ 1038 ಮಂದಿ ಮತದಾನ, ಟಿ. ನರಸೀಪುರ ತಾಲೂಕಿನಲ್ಲಿ 2325 ಮಂದಿ ಮತದಾರರಿಗೆ 2138 ಮಂದಿ ಮತದಾನ,  ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ತಾಲೂಕುಗಳಲ್ಲಿ 531 ಮಂದಿ ಮತದಾರರಿದ್ದು, ಅವರಲ್ಲಿ 498 ಮಂದಿ ಮತದಾನ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.