ವಿಷ್ಣು ಟೆಕ್ಸ್ಟೈಲ್ಸ್ ಕಾರ್ಖಾನೆ ವಿರುದ್ಧ ಕಾರ್ಮಿಕರ ಧರಣಿ
ಪಿರಿಯಾಪಟ್ಟಣ: ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ 5 ಮಂದಿ ಕಾರ್ಮಿಕರನ್ನು ಕಾರ್ಖಾನೆಯಿಂದ ಅಮಾನತು ಪಡಿಸಿದ ಕಾರ್ಖಾನೆಯ ಮಾಲೀಕರ ವಿರುದ್ಧ 100ಕ್ಕೂ ಹೆಚ್ಚು ಕಾರ್ಮಿಕರು ಹಾಗೂ ಸಿಐಟಿಯು ಕಾರ್ಯಕರ್ತರು ಧರಣಿ ಪ್ರಾರಂಭಿಸಿದ್ದಾರೆ.
ತಾಲೂಕಿನ ಕಂಪಲಾಪುರ ಗ್ರಾಮದ ವಿಷ್ಣು ಟೆಕ್ಸ್ಟೈಲ್ಸ್ ಕಾರ್ಖಾನೆಯ ಮಾಲೀಕ ರಾಮಸ್ವಾಮಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮುಖಂಡ ಅನಿಲ್ಕುಮಾರ್ ಸೇರಿದಂತೆ ಶ್ರೀಕಂಠಾಚಾರಿ, ಕರಿಯಪ್ಪ, ಶಿವರಾಮ್, ರಾಜೇಶ್ ಎಂಬವರನ್ನು ಯಾವುದೇ ಮಾಹಿತಿ, ಮುಸ್ಸೂಚನೆ ನೀಡದೆ ಅಮಾನತು ಪತ್ರ ನೀಡಲಾಗಿದೆ. ಈ ಕಾರಣಕ್ಕಾಗಿ ಕಾರ್ಖಾನೆ ಕಾರ್ಮಿಕರೆಲ್ಲಾ ಒಟ್ಟಾಗಿ ಧರಣಿ ಪ್ರಾರಂಭಿಸಿದ್ದಾರೆ.
ತಮಿಳುನಾಡು ಮೂಲದ ಕಾರ್ಖಾನೆ ಮಾಲೀಕ ಅಮಾನತು ಪತ್ರದ ಆದೇಶದ ಪ್ರತಿಯನ್ನು ಸೆಕ್ಯೂರಿಟಿ ಮೂಲಕ ಗುರುವಾರ ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ತೆರಳಿದ್ದ ಕಾರ್ಮಿಕ ಮುಖಂಡ ಅನಿಲ್ ಸೇರಿದಂತೆ 5 ಮಂದಿಗೂ ಕಳುಹಿಸಿದ್ದಾರೆ. ಇದರಿಂದ ಬೇಸತ್ತ ಇತರೆ ಕಾರ್ಮಿಕರೂ ಸಹ ತಮ್ಮ ಮುಖಂಡ ಮತ್ತು ಇತರರ ಅಮಾನತು ಖಂಡಿಸಿ ಸೂಕ್ತ ಕಾರಣ ನೀಡುವಂತೆ ಒತ್ತಾಯಿಸಿ ಕಾರ್ಖಾನೆ ಮುಂಭಾಗ ಧರಣಿ ಪ್ರಾರಂಭಿಸಿದರು. ವಿಷಯ ತಿಳಿದ ಕರವೇ ತಾ. ಅಧ್ಯಕ್ಷ ಎನ್.ಎಲ್. ಗಿರೀಶ್ ತಮ್ಮ ಕಾರ್ಯಕರ್ತರೊಂದಿಗೆ ಧರಣಿ ಸ್ಥಳಕ್ಕೆ ಆಗಮಿಸಿ ಧರಣಿ ನಿರತ ಕಾರ್ಮಿಕರಿಗೆ ಬೆಂಬಲ ವ್ಯಕ್ತಪಡಿಸಿದರು.
ಈ ಬಗ್ಗೆ ಪತ್ರಕರ್ತರು ಕಾರ್ಖಾನೆಯ ಮಾಲೀಕರನ್ನು ಸಂಪರ್ಕಿಸಿದಾಗ, ಅನಿಲ್ಕುಮಾರ್ ಸೇರಿದಂತೆ ಮತ್ತಿತರರು ಕಾರ್ಖಾನೆಯಲ್ಲಿ ಕಾರ್ಮಿಕರನ್ನು ಎತ್ತಿಕಟ್ಟುವ ಕೆಲಸ ಮಾಡುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ. ಆದ ಕಾರಣ ಅವರನ್ನು ಅಮಾನತು ಪಡಿಸಲಾಗಿದೆ. ಇವರ ವಿಚಾರಣೆಯಾಗಿ ತೀರ್ಮಾನವಾಗುವವರೆಗೆ ಸಂಬಳ ನೀಡಲಾಗುವುದು. ಅಲ್ಲಿಯವರೆಗೆ ಅವರು ಕೆಲಸಕ್ಕೆ ಬರುವುದು ಬೇಡ ಎಂದು ತಿಳಿಸಿದರು.
ಕಾರ್ಖಾನೆ ಮಾಲೀಕರು ಕಾರ್ಮಿಕರಿಗೆ ಸಂಬಳದ ಇಂಕ್ರಿಮೆಂಟ್ ಮತ್ತಿತರ ಸೌಲಭ್ಯ ನೀಡಬೇಕಾಗುತ್ತದೆ ಎಂಬ ಕಾರಣ ಮತ್ತು ನಮ್ಮಲ್ಲಿನ ಒಗ್ಗಟ್ಟನ್ನು ಮುರಿಯಲು ಈ ರೀತಿಯ ಕ್ರಮ ಕೈಗೊಂಡಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ, ತಮ್ಮ ಮುಖಂಡ ಸೇರಿದಂತೆ ಇತರರನ್ನು ಕಾರ್ಖಾನೆಗೆ ತೆಗೆದುಕೊಳ್ಳುವವರೆಗೆ ಆಹೋರಾತ್ರಿ ಧರಣಿ ನಡೆಸುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

