ಮೈಸೂರು

'ಮೌಲ್ಯಯುತ ಶಿಕ್ಷಣಕ್ಕಾಗಿ ಕ್ರಾಂತಿ ಅಗತ್ಯ'

Published On :

ಮೈಸೂರು: ವಿದ್ಯಾರ್ಥಿಗಳಲ್ಲಿ ಉತ್ತಮ ಚಾರಿತ್ರ್ಯ ಬೆಳೆಸಬಲ್ಲ ಮೌಲ್ಯಯುತ ಶಿಕ್ಷಣಕ್ಕಾಗಿ ಕ್ರಾಂತಿ ಆಗಬೇಕಿದೆ ಎಂದು ರಾಜ್ಯಸಭಾ ಸದಸ್ಯ ಡಾ. ಎಂ.ರಾಮಾ ಜೋಯಿಸ್ ಹೇಳಿದರು.
ದಟ್ಟಗಳ್ಳಿಯ ಸಾ.ರಾ. ಕನ್‌ವೆನ್ಷನ್ ಹಾಲ್‌ನಲ್ಲಿ ಭಾನುವಾರ ಕೌಟಿಲ್ಯ ವಿದ್ಯಾಸಂಸ್ಥೆ ಏರ್ಪಡಿಸಿದ್ದ ಅಜ್ಜನೊಂದಿಗೆ ಹೆಜ್ಜೆ- ಅಜ್ಜಿಯೊಂದಿಗೆ ಗೆಜ್ಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಮನುಷ್ಯನ ನಿರ್ಮಾಣ ಮಾಡಬೇಕೇ ಹೊರತು ನಿರ್ನಾಮ ಮಾಡಬಾರದು. ನಮ್ಮಲ್ಲಿ ಸ್ವಾಭಿಮಾನ, ಸಚ್ಚಾರಿತ್ರ್ಯ, ಸತ್ಯ, ಧರ್ಮ, ಅಹಿಂಸೆ, ಪ್ರಾಮಾಣಿಕತೆಯನ್ನು ಬೆಳೆಯಬೇಕಿದ್ದರೆ ಇಂದು ನೀಡುವ ಶಿಕ್ಷಣ ಮೌಲ್ಯಯುತವಾಗಿರಬೇಕು. ಆದರೆ ನಾವು ಇನ್ನೂ ಲಾರ್ಡ್ ಮೆಕಾಲೆ ಹೇಳಿದ ಶಿಕ್ಷಣ ಪದ್ಧತಿಯಲ್ಲೇ ಇದ್ದೇವೆ ಎಂದರು.
ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದೆ. ದುರದೃಷ್ಟವಶಾತ್ ವಿದ್ಯಾವಂತರೇ 2ಜಿ, 3ಜಿ, ಕಲ್ಲಿದ್ದಲು, ಅಗಸ್ಟಾ ಹಗರಣಗಳಲ್ಲಿ ಸಿಲುಕಿದ್ದಾರೆ. ಇಂತಹ ಶಿಕ್ಷಣ ಪದ್ಧತಿ ಬೇಕಿಲ್ಲ ಎಂದರು.
ಮೈಸೂರಿನ ಪ್ರಾಚ್ಯವಸ್ತು ಸಂಶೋಧನಾ ಸಂಸ್ಥೆಯಲ್ಲಿದ್ದ ಡಾ. ಶಾಮಶಾಸ್ತ್ರೀಗಳು ಒಮ್ಮೆ ಮದರಾಸಿಗೆ ಹೋಗಿದ್ದಾಗ ಕೌಟಿಲ್ಯನ ಅರ್ಥಶಾಸ್ತ್ರದ ಪ್ರತಿಯನ್ನು ಸಂಗ್ರಹಿಸಿ ತಂದು ಇಡಿ ವಿಶ್ವಕ್ಕೆ ಸಾರಿದರು. ಈಗ ವಿಶ್ವದ ಎಲ್ಲ ವಿಶ್ವವಿದ್ಯಾನಿಲಯದಲ್ಲಿಯೂ ಕೌಟಿಲ್ಯನ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ನ್ಯಾಯಾಧೀಶರಾದ ಜಯಶ್ರೀ, ಬಿ.ನಂದಕುಮಾರ್, ಆರ್.ಎಸ್.ಶಾನುಬೋಗ್, ರೀಟಾ ಶಾನುಬೋಗ್, ಶ್ರೀಪತಿ ಅಧಿಕಾರಿ, ಡಾ. ಬಂಗಾರು, ಅನೂಪ್, ಸತೀಶ್ ರಾಜು ಮತ್ತು ನರಸಿಂಹಮೂರ್ತಿ ಅವರಿಗೆ ಯಶಸ್ವಿ ಸಾಧಕ ಪ್ರಶಸ್ತಿ  ನೀಡಲಾಯಿತು. ಕಾಂಗ್ರೆಸ್ ಮುಖಂಡ ಸುಂದರ್ ದಾಸ್ ಮತ್ತು ಪತ್ರಕರ್ತ ಶ್ಯಾಂ ಸುಂದರ್ ವಟ್ಟಂ ಅವರಿಗೆ ಸಾರ್ಥಕ ಸೇವಾ ಪ್ರಶಸ್ತಿ, ಸಂಸ್ಥೆಯ ಮಾರ್ಗದರ್ಶಕರಾದ ಡಾ. ವೆಂಕಟೇಶ್‌ಮೂರ್ತಿ, ನರೇಂದ್ರ, ಡಾ. ವಿದ್ಯಾಸಾಗರ್, ಡಾ. ರಜಿನಿ ಮತ್ತು ಅಂಜನ ಶಶಿಕಿರಣ್ ಮತ್ತು ಹಿತೈಶಿಗಳಾದ ಲೋಕೇಶ್, ಮುರುಗೇಶ್ ಮತ್ತು ಮಂಜುನಾಥ್ ಅವರನ್ನು ಅಭಿನಂದಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.