ಮೈಸೂರು

'ಸಂಶೋಧನಾ ಮಾಹಿತಿ ಸಮಾಜಕ್ಕೆ ತಲುಪಲಿ: ಡಾ. ಗಾಯತ್ರಿ

Published On :

ಮೈಸೂರು: ಸಂಶೋಧನಾ ಮಾಹಿತಿಗಳು ಸಮಾಜಕ್ಕೆ ತಲುಪಬೇಕು ಎಂದು ಎಸ್‌ಡಿಎಂಐಎಂಡಿ ಉಪನಿರ್ದೇಶಕಿ ಡಾ. ಎಚ್. ಗಾಯತ್ರಿ ಹೇಳಿದರು.
ಚಾಮುಂಡಿ ತಪ್ಪಲಿನಲ್ಲಿರುವ ಎಸ್‌ಡಿಎಂಐಎಂಡಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಸಂಶೋಧನಾ ಚಟುವಟಿಕೆಗಳಲ್ಲಿ ಸಂಪನ್ಮೂಲ ಮತ್ತು ಸಾಧನಗಳ ಉಪಯುಕ್ತತೆ ಎಂಬ ವಿಷಯ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಲಭ್ಯವಿರುವ ಸಂಪನ್ಮೂಲ ಹಾಗೂ ಸಾಧನಗಳನ್ನು ಸಮರ್ಥವಾಗಿ ಬಳಸಿಕೊಂಡು ಸಂಶೋಧನೆ ನಡೆಸುವ ಅಗತ್ಯವಿದೆ. ಇದರ ಮಾಹಿತಿ ಮತ್ತು ಸಂಶೋಧನಾ ಚಟುವಟಿಕೆಗಳು ಸಮಾಜಕ್ಕೆ ತಲುಪುವುದು ಅವಶ್ಯಕ. ಇಂತಹ ಕಾರ್ಯಾಗಾರವು ಗುಣಮಟ್ಟದ ಸಂಶೋಧನೆಗೆ ಸಹಕಾರಿಯಾಗಲಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಡಾ.ಎಂ.ವಿ. ಸುನಿಲ್, ಸಾಫ್ಟ್‌ವೇರ್ ಮೂಲಕ ಅಂಕಿ ಅಂಶಗಳ ವಿಶ್ಲೇಷಣೆ, ಪುಸ್ತಕಗಳ ಬರವಣಿಗೆ, ಭಾಷಾ ಪ್ರಭುತ್ವ, ಬರವಣಿಗೆ ಕೌಶಲ ಹಾಗೂ ಸಾಹಿತ್ಯ ವಿಮರ್ಶೆ ಮುಂತಾದ ವಿಷಯಗಳ ಕುರಿತು ಮಾಹಿತಿ ನೀಡಿದರು.
ಪ್ರಾಧ್ಯಾಪಕ ಡಾ. ಜಗದೀಶ್ ಮಾತನಾಡಿ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕ್ಷೇತ್ರದಲ್ಲಿ ಯಾವ ರೀತಿ ಸಂಶೋಧನಾ ಕಾರ್ಯ ನಡೆಸಬೇಕು? ಅದರಿಂದ ಯಾವ ರೀತಿ ಪ್ರಯೋಜನವಾಗಲಿದೆ ಹಾಗೂ ಸಂಶೋಧನೆಗೂ ಮುನ್ನ ಕೈಗೊಳ್ಳಬೇಕಾದ ವಿಧಾನಗಳನ್ನು ವಿವರಿಸಿದರು.
ಕಾರ್ಯಾಗಾರದಲ್ಲಿ ಕರ್ನಾಟಕ ಹಾಗೂ ನೆರೆಯ ರಾಜ್ಯಗಳ ಸುಮಾರು 60 ಮಂದಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.