ಕರಕುಶಲ ಮೂಲಕ ಜೀವನ ನೀಡುತ್ತಿರುವ ವನಿತೆಯರು
ಮೈಸೂರು: ಬೈಬಲ್ನಲ್ಲಿ ಏಸು ಹೇಳಿರುವಂತೆ ನಾನು ಕೈಕೆಲಸವನ್ನು ಸ್ಥಾಪಿಸುತ್ತೇನೆ ಎಂಬ ವಾಕ್ಯವನ್ನು ಪರಿಪಾಲಿಸುವ ಸಲುವಾಗಿ ಇಬ್ಬರು ಉದ್ಯೋಗದಾತೆಯರು ಆಸಕ್ತರಿಗೆ ಕೆಲಸ ನೀಡಲು ಸಿದ್ಧರಿದ್ದಾರೆ.
ಹೌದು. ಇಂತಹ ನಿರ್ಧಾರ ತಳೆದಿರುವ ಸುಚಿತ್ರ ಹಾಗೂ ಶ್ರೀವಿದ್ಯಾ ಎಂಬವರು ಈವರೆಗೆ ಹಲವು ಮಂದಿಗೆ ಕರಕುಶಲ ಕಲೆಯನ್ನು ಕಲಿಸಿ, ಅದನ್ನೇ ಉದ್ಯೋಗವನ್ನಾಗಿ ಮಾಡಿಕೊಂಡು ಜೀವನೋಪಾಯಕ್ಕೆ ಬಳಸಿಕೊಳ್ಳುವಂತೆ ತಿಳಿ ಹೇಳುತ್ತಿದ್ದಾರೆ. ಈ ಬಗ್ಗೆ ಮತ್ತಷ್ಟು ಅರಿವು ಮೂಡಿಸುವ ಸಲುವಾಗಿ ರಂಗಾಯಣದಲ್ಲಿ ನಡೆಯುತ್ತಿರುವ ಬಹುರೂಪಿಯ ರಾಷ್ಟ್ರೀಯ ನಾಟಕೋತ್ಸವದಲ್ಲಿ ಮಳಿಗೆಯೊಂದನ್ನು ಸ್ಥಾಪಿಸಿದ್ದಾರೆ.
ಮಾರ್ನಿಂಗ್ ಸ್ಟಾರ್ ಕ್ರಿಯೇಷನ್ ಟ್ರಸ್ಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿಕೊಂಡು ಇದರಡಿ ನಿರುದ್ಯೋಗ ಯುವಕ- ಯುವತಿಯರಿಗೆ ಔದ್ಯೋಗಿಕ ತರಬೇತಿ ನೀಡುತ್ತಿದ್ದಾರೆ. ಆಸಕ್ತಿಯನ್ನಷ್ಟೇ ಮಾನದಂಡವನ್ನಾಗಿ ಸ್ವೀಕರಿಸಿ ಅವರಿಗೆ ಉಚಿತ ತರಬೇತಿ ನೀಡಿ ಕಲಾ ನೈಪುಣ್ಯತೆ ಬೆಳೆಸಿಕೊಳ್ಳಲು ಕಾರಣಕರ್ತರಾಗಿದ್ದಾರೆ. ತಮ್ಮ ಮೊದಲ ಪ್ರಯತ್ನವಾಗಿ ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ಇವರು ಮೂವರು ಮಹಿಳಾ ಕೈದಿಗಳಿಗೆ ವಾರಕ್ಕೊಮ್ಮೆ ತೆರಳಿ ಕರಕುಶಲ ತರಬೇತಿ ನೀಡಿದರು. ಈ ಮೂವರಲ್ಲಿ ಒಬ್ಬರು ಜಾಮೀನು ಪಡೆದು ಬಿಡುಗಡೆಯಾಗಿದ್ದು, ಇಂದಿಗೂ ಕರಕುಶಲತೆ ಮುಂದುವರಿಸುತ್ತಿದ್ದಾರೆ ಎನ್ನುತ್ತಾರೆ ಸುಚಿತ್ರಾ, ಶ್ರೀವಿದ್ಯಾ ಅವರು.
ಏನೇನು ಹೇಳಿಕೊಡುತ್ತಾರೆ?: ಪುರುಷರು ಬಳಸುವ ವಾಲೆಟ್, ಡೇರಿ ಕವಚ, ಫೈಲ್ ಕವಚ, ಹ್ಯಾಂಡ್ಬ್ಯಾಗ್, ಮೊಬೈಲ್ ಕವಚ ತಯಾರಿಸುವುದನ್ನು ಹೇಳಿಕೊಡುತ್ತಾರೆ. ಕಚ್ಚಾ ಪದಾರ್ಥಗಳನ್ನು ಒದಗಿಸುವ ಇವರು, ಸಿದ್ಧ ವಸ್ತುಗಳನ್ನು ತಾವೇ ಪಡೆದು ಮಾರಾಟ ಮಾಡಿ ಬಂದ ಹಣವನ್ನು ಮಾಲೀಕರಿಗೆ ತಲುಪಿಸುತ್ತಾರೆ. ಅಲ್ಲದೇ ಅವರೇ ಸ್ವತಃ ಮಾರಾಟ ಮಾಡಲು ಇಚ್ಛಿಸಿದಲ್ಲಿ ಅದಕ್ಕೆ ಮಾರ್ಗದರ್ಶನ ನೀಡುತ್ತಾರೆ. ಆಸಕ್ತರು ಮೊ. 99903 70891 ಸಂಪರ್ಕಿಸಬಹುದು.
-ಜೆ. ಮಹದೇವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

