ಜಿಲ್ಲಾ ಗಮಕ ಕಲಾ ಪರಿಷತ್ತು ಸ್ಥಾಪನೆ
ಮೈಸೂರು: ಜಿಲ್ಲಾ ಗಮಕ ಕಲಾ ಪರಿಷತ್ತು ರಚನೆಯಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಭಾಷಾ ವಿದ್ವಾಂಸ ಟಿ.ವಿ.ವೆಂಕಟಾಚಲಶಾಸ್ತ್ರಿ ಹೇಳಿದರು.
ನಗರದ ನಮನ ಕಲಾಮಂಟಪದಲ್ಲಿ ಆಯೋಜಿಸಿದ್ದ ಗಮಕ ಕಲಾವಿದರ ಪೂರ್ವಭಾವಿ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಗಮಕ ಕ್ಷೇತ್ರಕ್ಕೆ ಮೈಸೂರಿನ ಕೊಡುಗೆ ಅನನ್ಯ. ಮೊದಲಿಂದಲೂ ನಗರದಲ್ಲಿ ಕಾವ್ಯರಂಜನಿ ಸಭಾ ಹಾಗೂ ಇನ್ನಿತರ ಸಂಘಟನೆಗಳಿಂದ ಗಮಕ ಸೇವೆ ನಡೆಯುತ್ತಿದೆ. ಈಗ ಗಮಕ ಕಲಾ ಪರಿಷತ್ ರಚನೆಯಾಗುತ್ತಿರುವುದು ಆಶಾದಾಯಕ ವಿಚಾರವಾಗಿದ್ದು, ಜಿಲ್ಲಾ ಪ್ರತಿನಿಧಿ ಕೃ.ಪಾ. ಮಂಜುನಾಥ್ ಅವರ ಸಮೂಹ ಪ್ರಯತ್ನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಗಮಕವನ್ನು ಓದುವ ದಾಟಿಯಲ್ಲಿಯೇ ಅರ್ಥವಾಗುವಂತಿರಬೇಕು. ವ್ಯಾಖ್ಯಾನವೂ ಗಮಕಕ್ಕೆ ಪೂರಕವಾಗಿ ಹಿನ್ನೆಲೆ ಸಂಗೀತದಂತೆ ಬರಬೇಕು. ಮಾತಿನ ಅರ್ಭಟವೇ ಆಗಬಾರದು. ಸತ್ವಯುತ ಭಾಷೆ ಬಳಸುವಂತೆ ಸಲಹೆ ನೀಡಿದರು.
ವಿದ್ವಾನ್ ಎಚ್.ಎಸ್.ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಗಮಕಿಗಳಾದ ಬಿ.ಎಚ್.ನಾಗರತ್ನಮ್ಮ, ಕೃ.ರಾಮಚಂದ್ರ, ವಿಜಯ್, ನಿರಂಜನ್, ಡಾ. ಜ್ಯೋತಿ ಶಂಕರ್, ವಸಂತ ವೆಂಕಟೇಶ್, ಡಾ. ಮಂಜುನಾಥ್, ವಿಮಲಶ್ರೀ, ಮಂಜುಳಾ ನಾಗರಾಜ್ ಉಪಯುಕ್ತ ಸಲಹೆಗಳನ್ನು ನೀಡಿದರು. ಪರಿಷತ್ತಿನ ಮೈಸೂರು ಜಿಲ್ಲಾ ಪ್ರತಿನಿಧಿ ಕೃ.ಪಾ. ಮಂಜುನಾಥ್ ಮಾತನಾಡಿದರು.ವಸಂತಾ ವೆಂಕಟೇಶ್ ಪ್ರಾರ್ಥಿಸಿದರು. ನಿರಂಜನ್ ನಿರಂಜನ್ ವಂದಿಸಿದರು.
ಕಲಾ ಪರಿಷತ್ತಿನ ಕಾರ್ಯಕಾರಿ ಮಂಡಳಿಯ ವಿವರ
ಡಾ.ಟಿ.ವಿ. ವೆಂಕಟಾಚಲ ಶಾಸ್ತ್ರಿ, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್(ಗೌರವ ಸಲಹೆಗಾರರು), ಎಚ್.ಎಸ್. ಸತ್ಯನಾರಾಯಣ(ಗೌರವಾಧ್ಯಕ್ಷರು), ಕೃ. ರಾಮಚಂದ್ರ (ಕಾರ್ಯಾಧ್ಯಕ್ಷರು), ಬಿ.ಎಚ್.ನಾಗರತ್ನಮ್ಮ (ಉಪಾಧ್ಯಕ್ಷರು), ಕೃ.ಪಾ. ಮಂಜುನಾಥ್(ಪ್ರಧಾನ ಕಾರ್ಯದರ್ಶಿ), ನಿರಂಜನ್, ವಿಮಲಶ್ರೀ (ಸಹ ಕಾರ್ಯದರ್ಶಿ), ವಿಜಯ್ (ಸಂಘಟನಾ ಕಾರ್ಯದರ್ಶಿ), ಪ್ರಭಾಕರ್ (ಕೋಶಾಧಿಕಾರಿ), ಡಾ. ಜ್ಯೋತಿ ಶಂಕರ್, ವಸಂತಾ ವೆಂಕಟೇಶ್, ಮಂಜುಳಾ ನಾಗರಾಜ್, ಶುಭಾ ರಾಘವೇಂದ್ರ, ಡಾ. ಮಂಜುನಾಥ್, ಕೇಶವಮೂರ್ತಿ (ಕಾರ್ಯಕಾರಿ ಮಂಡಳಿ ಸದಸ್ಯರು).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

