ವಿಷಯ ನಿರ್ವಾಹಕರ ಜವಾಬ್ದಾರಿ ಹೆಚ್ಚಿದೆ
ಕ.ಪ್ರ.ವಾರ್ತೆ ಮೈಸೂರು ಜ. 20
ಮಾಹಿತಿ ಹಕ್ಕು ಅಧಿನಿಯಮದ ಅನುಷ್ಠಾನದಲ್ಲಿ ಅಧಿಕಾರಿಗಳು ಎಷ್ಟು ಜವಾಬ್ದಾರರಾಗಿರುತ್ತಾರೊ, ಅಷ್ಟೇ ಜವಾಬ್ದಾರಿ ವಿಷಯ ನಿರ್ವಾಹಕರದು (ಕೇಸ್ ವರ್ಕರ್) ಆಗಿರುತ್ತದೆ ಎಂದು ಕಾವೇರಿ ನೀರಾವರಿ ನಿಗಮದ ಮುಖ್ಯ ಆಡಳಿತಾಧಿಕಾರಿ ಕೆ.ಎಂ.ಗಾಯಿತ್ರಿ ಅಭಿಪ್ರಾಯಪಟ್ಟರು.
ಕಾಡಾ ಸಿಬ್ಬಂದಿಗೆ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮಾಹಿತಿ ಹಕ್ಕು ಅಧಿನಿಯಮ 2005 ಒಂದು ಕ್ರಾಂತಿಕಾರಕ ಅಧಿನಿಯಮವಾಗಿದೆ. ಈ ಅಧಿನಿಯಮದ ಬಗ್ಗೆ ಸರ್ಕಾರಿ ನೌಕರರು ಸಂಪೂರ್ಣ ಮಾಹಿತಿ ತಿಳಿದುಕೊಳ್ಳುವುದು ಅವಶ್ಯಕ ಎಂದರು.
ಕಾರ್ಯಾಗಾರದಲ್ಲಿ ನೀಡುವ ಜ್ಞಾನವನ್ನು ಪಡೆದುಕೊಂಡಲ್ಲಿ ಈ ಕಾಯ್ದೆಯ ಮಹತ್ವವನ್ನೂ ಸಹ ತಿಳಿಯಲು ಸಾಧ್ಯವಾಗುತ್ತದೆ. ಕಾಯ್ದೆಗೆ ಆಗಿಂದಾಗ್ಗೆ ಆಗುವ ತಿದ್ದುಪಡಿಗಳ ಬಗ್ಗೆಯೂ ಸಹಾ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಸಮರ್ಪಕವಾಗಿ ಮಾಹಿತಿ ನೀಡಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು.
ಜೆಎಸ್ಎಸ್ ಕಾನೂನು ವಿವಿ ಪ್ರಾಂಶುಪಾಲ ಪ್ರೊ.ಕೆ.ಎಸ್. ಸುರೇಶ್ ಮಾತನಾಡಿ, ಸಾರ್ವಜನಿಕರು ಮಾಹಿತಿ ಹಕ್ಕು ಅಧಿನಿಯಮದ ಬಗ್ಗೆ ತಿಳಿದುಕೊಳ್ಳುವುದು ಕಾಯ್ದೆಯ ಆಶೋತ್ತರಗಳ ಅನುಷ್ಠಾನಕ್ಕೆ ಅವಶ್ಯಕ. ಮಾಹಿತಿ ಹಕ್ಕು ಅಧಿನಿಯಮವು ಸಂವಿಧಾನ ಅನುಷ್ಠಾನಗೊಂಡ ನಂತರ ಸಂವಿಧಾನದಷ್ಟೇ ಮಹತ್ವ ಇರುವ ಕಾಯ್ದೆಯಾಗಿದೆ. ಇದರ ಬಗ್ಗೆ ಸೂಕ್ತ ತಿಳಿವಳಿಕೆ ಹೊಂದುವುದು ನೌಕರರ ಆದ್ಯ ಕರ್ತವ್ಯ ಎಂದರು. ಇಂದುಮತಿ ಸುರೇಶ್ ಪ್ರಾರ್ಥಿಸಿದರು. ರವಿಕುಮಾರ್ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

