ಸುಭಾಷ್ಚಂದ್ರ ಬೋಸ್ ಜನ್ಮ ದಿನಾಚರಣೆ
ಕ.ಪ್ರ.ವಾರ್ತೆ ಮೈಸೂರು ಜ. 23
ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಸಾವಿನ ಸಂಗತಿ ಈವರೆಗೆ ಬಯಲಾಗದಿರುವುದು ದೇಶಕ್ಕೆ ಅವಮಾನದ ಸಂಗತಿ ಎಂದು ಮಾಜಿ ಸಚಿವ ಎಸ್.ಎ.ರಾಮದಾಸ್ ಹೇಳಿದರು.
ಸ್ಪಿರಿಟ್ ಇವೆಂಟ್ಸ್ ಸಂಸ್ಥೆಯು ರಾಮಸ್ವಾಮಿ ವೃತ್ತದಲ್ಲಿ ಗುರುವಾರ ಏರ್ಪಡಿಸಿದ್ದ ನೇತಾಜಿ ಸುಭಾಷ್ ಚಂದ್ರಬೋಸ್ ಅವರ 117ನೇ ಜನ್ಮದಿನೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಸಂಗ್ರಾಮಕ್ಕೆ ಭಾರತೀಯ ಭೂಸೇನೆ ಕಟ್ಟಿದ ಸುಭಾಷ್ಚಂದ್ರ ಬೋಸ್ ಅವರ ಸಾವಿನ ಸತ್ಯಾಂಶ ಈವರೆಗೆ ಹೊರಬಂದಿಲ್ಲ. ರಷ್ಯಾ ದೇಶವು ಈ ವಿಷಯ ಕುರಿತಂತೆ 2020 ರವರೆಗೆ ಕಾಲಾವಕಾಶ ಕೋರಿದೆ. ಆದರೆ ಸತ್ಯಸಂಗತಿಯನ್ನು ಬಯಲಿಗೆ ತರುವಲ್ಲಿ ಕೇಂದ್ರ ಸರ್ಕಾರ ಗಮನ ಹರಿಸದಿರುವುದು ದೇಶಕ್ಕೆ ಅವಮಾನದ ಸಂಗತಿ ಎಂದರು.
ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ನೇತಾಜಿ ಅವರ ಅಂದಿನ ಯುವಪಡೆಯ ಕ್ಯಾಪ್ಟನ್ ಆಗಿದ್ದರು. ಮಹಾತ್ಮಗಾಂಧಿ, ಶಾಂತಿಯ ಮೂಲಕ ಸ್ವಾತಂತ್ರ್ಯ ಬಯಸಿದ್ದರೆ, ನೇತಾಜಿ ಕ್ರಾಂತಿಯ ಮೂಲಕ ಭಾರತ ಮಾತೆ ಬಂಧಮುಕ್ತಕ್ಕೆ ಪಣ ತೊಟ್ಟಿದ್ದರು. ಅಂತಹ ದೇಶಪ್ರೇಮಿಯ ಆದರ್ಶಗಳು ಇಂದಿನ ಯುವಜನತೆಗೆ ಅನುಕರಣೀಯ ಎಂದು ತಿಳಿಸಿದರು.
ವಿಷಾದದ ಸಂಗತಿ: ಯುವಕರೆ ರಕ್ತಕೊಡಿ ನಾನು ನಿಮಗೆ ಸ್ವತಂತ್ರ ಕೊಡಿಸುತ್ತೇನೆ ಎಂಬ ಕರೆಯೊಂದಿಗೆ ಬಲಿಷ್ಠ ಯುವ ಸಮುದಾಯ ಸಂಘಟಿಸಿದ ಮಹಾನ್ ವ್ಯಕ್ತಿಯ ಜನ್ಮದಿನವನ್ನು ಇಂದಿನ ಸರ್ಕಾರಗಳು ಆಚರಿಸದಿರುವುದು ನೋವಿನ ಸಂಗತಿ. ಮುಂದಿನ ವರ್ಷದಿಂದ ಎಲ್ಲರೂ ಆಚರಿಸಬೇಕು ಎಂದರು.
ನಗರಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್, ಮುಖಂಡರಾದ ಜಗದೀಶ್, ಜೋಗಿ ಮಂಜುನಾಥ್, ಪಿ.ಎನ್. ಚೇತನ್, ಅಜಯ್ಶಾಸ್ತ್ರಿ, ಸಚಿನ್, ಕಿರಣ್, ವಿಕ್ರಂ, ರಾಜೇಶ್, ರಮೇಶ್, ಸಂತೋಷ್, ವಿನಯ್ ಇದ್ದರು.
ಪಥಸಂಚಲ: ಎಐಎಂಎಸ್, ಎಐಡಿವೈಒ ಹಾಗೂ ಎಐಡಿಎಸ್ಒ ಸಂಘಟನೆಗಳ ಸಂಯುಕ್ತವಾಗಿ ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಜನ್ಮದಿನದ ಅಂಗವಾಗಿ ಪಥಸಂಚಲನ ಹಮ್ಮಿಕೊಂಡಿತ್ತು. ಸುಬ್ಬರಾಯನಕೆರೆ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಎಐಡಿಎಸ್ಒ ರಾಜ್ಯ ಉಪಾಧ್ಯಕ್ಷ ಬಿ. ರವಿ ಅವರು ಪಥಸಂಚಲನಕ್ಕೆ ಚಾಲನೆ ನೀಡಿದರು. ಎಐಡಿವೈಒ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಎಐಎಂಎಸ್ಎಸ್ ಜಿಲ್ಲಾ ಉಪಾಧ್ಯಕ್ಷೆ ಸೀಮಾ, ಎಐಡಿಎಸ್ಒ ಜಿಲ್ಲಾ ಸಮಿತಿ ಸದಸ್ಯ ಬಸವರಾಜ್, ಮುಖಂಡರಾದ ರಂಜಿತಾ, ಅವಿನಾಶ್, ಸಿದ್ಧೇಶ್, ನಾಗೇಶ್ ಇದ್ದರು. ಪಥಸಂಚಲನವು ನಾರಾಯಣಶಾಸ್ತ್ರಿ ರಸ್ತೆ, ನಗರಪಾಲಿಕೆ, ಸಂಸ್ಕೃತ ಪಾಠಶಾಲೆ, ಚಾಮರಾಜ ಜೋಡಿರಸ್ತೆ ಮೂಲಕ ರಾಮಸ್ವಾಮಿ ವೃತ್ತದ ಬಳಿ ಅಂತ್ಯಗೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

