ಮೈಸೂರು

ಕುರುಬೂರಿನಲ್ಲಿ

Published On :

ಮೂಗೂರು: ಟಿ.ನರಸೀಪುರ ತಾಲೂಕಿನ ಕುರುಬೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ 65ನೇ ಗಣರಾಜ್ಯೋತ್ಸವದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಶಾಂತರಾಜು ಧ್ವಜಾರೋಹಣ ನೇರವೇರಿಸಿದರು. ನಂತರ ಕೊತ್ತೇಗಾಲ ಗ್ರಾಪಂ ಅಧ್ಯಕ್ಷರಾದ ಕೆ.ಸಿ. ವೀರೇಶ್ ಮಾತನಾಡಿ, ರಾಷ್ಟ್ರಮಟ್ಟದಲ್ಲಿ ಗುಣಾತ್ಮಕ ಆಡಳಿತದ ಜತೆಗೆ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಸಮಾನತೆಯ ಅಂಶಗಳು ಸಂವಿಧಾನ ಬದ್ಧವಾಗಿ ಜನ ಸಾಮಾನ್ಯರ ಪಾಲಿಗೆ ದೊರೆಯುವಂತಾಗಬೇಕು. ಆಗ ಭವ್ಯ ಭಾರತದ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಹೇಳಿದರು. ಶಾಲಾ ಸಹಶಿಕ್ಷಕಿ ಶೀಲಾ ಉಪನ್ಯಾಸ ನೀಡಿದರು. ಎಸ್ಡಿಎಂಸಿ ಉಪಾಧ್ಯಕ್ಷೆ ಬಂಗಾರಿ, ಮಖ್ಯಶಿಕ್ಷಕಿ ಪುಟ್ಟಮಾದಮ್ಮ, ಶಾಲಾ ಶಿಕ್ಷಕರಾದ ಆಶಾ, ಸಿದ್ದರಾಜು, ವರಲಕ್ಷ್ಮಿ ಹಾಗೂ ಪೋಷಕರು ಇದ್ದರು.


ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಗಣತಂತ್ರ
ಬನ್ನೂರು: ಸಂವಿಧಾನದಿಂದ ದೇಶ ಬಲಿಷ್ಠವಾಗಬೇಕಾದರೆ ಪ್ರತಿಯೊಬ್ಬರ ವಿಕಾಸ ಮುಖ್ಯ ಎಂದು ವಿವೇಕಾನಂದ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಎಂ. ಪ್ರಕಾಶ್ ಹೇಳಿದರು. ಪಟ್ಟಣದ ವಿವೇಕಾನಂದ ಶಿಕ್ಷಣ ಸಂಸ್ಥೆ ಆವರಣದಲ್ಲಿ ಆಯೋಜಿದ್ದ 65ನೇ ವರ್ಷದ ಗಣರಾಜೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ನಂತರ ಶಿಕ್ಷಕ ಎಂ.ಎಲ್. ಹನುಮಂತು ಗಣರಾಜೋತ್ಸವದ ಮಹತ್ವ ತಿಳಿಸಿದರು. ಸಂಸ್ಥೆಯ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಮಾರಂಭದಲ್ಲಿ ಪ್ರಾಂಶುಪಾಲ ಕಿ.ಆ. ರಂಗನಾಥ್, ಮುಖ್ಯ ಶಿಕ್ಷಕರಾದ ಎಂ.ಕೆ. ದೇವರಾಜೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.