ಚಿಲ್ಕುಂದ, ಹಿರಿಕ್ಯಾತನಹಳ್ಳಿಗೆ ಪಿಯು ಕಾಲೇಜು
ಹುಣಸೂರು: ತಾಲೂಕಿನ ಚಿಲ್ಕುಂದ ಹಾಗೂ ಹಿರಿಕ್ಯಾತನಹಳ್ಳಿಯಲ್ಲಿ ಪಿಯು ಕಾಲೇಜು ಸ್ಥಾಪನೆಗೆ ಅನುಮತಿ ದೊರೆತಿದೆ ಎಂದು ಶಾಸಕ ಎಚ್.ಪಿ. ಮಂಜುನಾಥ್ ತಿಳಿಸಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾಕೂಟದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿಗೆ ಇನ್ನೂ 9 ಪಿಯು ಕಾಲೇಜುಗಳ ಅವಶ್ಯಕತೆ ಇದೆ. ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚಿಲ್ಕುಂದ ಹಾಗೂ ಹಿರಿಕ್ಯಾತನಹಳ್ಳಿಗೆ ಪಿಯು ಕಾಲೇಜಿಗೆ ಅನುಮತಿ ದೊರೆತಿದೆ ಎಂದರು.
ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಉಂಗುರ ಹಾಗೂ ಶೇಕಡವಾರು ಹೆಚ್ಚು ಫಲಿತಾಂಶ ಪಡೆದ ಕಾಲೇಜಿಗೆ 1 ಲಕ್ಷ, ದ್ವಿತೀಯ ಸ್ಥಾನ ಪಡೆದ ಕಾಲೇಜಿಗೆ 50 ಸಾವಿರ ನಗದು ಬಹುಮಾನವನ್ನು ನನ್ನ ತಾಯಿ ರತ್ನಮ್ಮ ಹೆಸರಿನಲ್ಲಿ ನೀಡುತ್ತೇನೆ ಎಂದಿದ್ದೆ.
ಈ ಬಾರಿಯಿಂದ ಎಸ್ಸೆಸ್ಸೆಲ್ಸಿ, ಪದವಿ ವಿದ್ಯಾರ್ಥಿಗಳ ಜೊತೆಗೆ ವಿದ್ಯಾರ್ಥಿಗಳ ಸಾಧನಗೆ ಬೆನ್ನೆಲುಬಾಗಿ ನಿಂತ ಅಧ್ಯಾಪಕರಿಗೂ ರು. 25 ಸಾವಿರ ನೀಡುವುದಾಗಿ ತಿಳಿಸಿದರು.
ಹಿರಿಯರಾದ ಸೂ. ನಾರಾಯಣಮೂರ್ತಿ, ಪ್ರಾಂಶುಪಾಲ ಜವರಯ್ಯ, ಉಪಪ್ರಾಂಶುಪಾಲೆ ಗೀತಾ, ಕಸಾಪ ಅಧ್ಯಕ್ಷ ವಿ.ಪಿ. ಸಾಯಿನಾಥ್, ಸಿಡಿಸಿ ಸದಸ್ಯರಾದ ನಾಗರಾಜರಾವ್, ಅಣ್ಣಮ್ಮ, ಅಧ್ಯಾಪಕರಾದ ಎಸ್.ಕೆ. ರವೀಂದ್ರ, ಎ.ಸಿ. ಮಂಜೇಗೌಡ, ಕಾಂತರಾಜು, ರವಿಪ್ರಕಾಶ್, ಎಚ್.ಸಿ. ಜಗದೀಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

