ಜಿಲ್ಲೆಯಲ್ಲಿ ವಿವಿಧೆಡೆ ನಡೆದ ಗಣರಾಜ್ಯೋತ್ಸವ
ಕಾವೇರಿ ನೀರಾವರಿ ನಿಗಮ
ಗೋಕುಲಂನಲ್ಲಿರುವ ಕಾವೇರಿ ನೀರಾವರಿ ನಿಗಮದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್ ಧ್ವಜಾರೋಹಣ ನೆರವೇರಿಸಿದರು. ಅಧೀಕ್ಷಕ ಎಂಜಿನಿಯರುಗಳಾದ ಕೆ. ಶಿವಮೂರ್ತಿ, ಹೇಮಗಿರಿ, ಆಡಳಿತಾಧಿಕಾರಿ ಕೆ.ಎಂ. ಗಾಯತ್ರಿ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸೆಸ್ಕ್ನಿಂದ ಆಚರಣೆ
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಕಾರ್ಪೊರೆಟ್ ಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ವ್ಯವಸ್ಥಾಪಕ ನಿರ್ದೇಶಕ ಡಿ.ಕಿರಣ ಧ್ವಜಾರೋಹಣ ನೆರವೇರಿಸಿದರು. ವ್ಯವಸ್ಥಾಪಕ ನಿರ್ದೇಶಕ ಭಾಗ್ಯನಾಯಕ್, ಆರಕ್ಷಕ ಅಧೀಕ್ಷಕ ಭೀಮಪ್ಪ ಇದ್ದರು.
ಈಶ್ವರ್ ವಿದ್ಯಾಲಯ
ವರುಣ ಹೋಬಳಿಯ ಚೋರನಹಳ್ಳಿಯಲ್ಲಿರುವ ಈಶ್ವರ್ ವಿದ್ಯಾಲಯದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಪ್ರಾಂಶುಪಾಲೆ ಎಚ್. ಜಮುನಾ ಧ್ವಜಾರೋಹಣ ನೆರವೇರಿಸಿದರು. ವಿದ್ಯಾರ್ಥಿಗಳು ವಾಯು, ಜಲ, ಪೃಥ್ವಿ, ಅಗ್ನಿ ಗುಂಪುಗಳಾಗಿ ಪಥ ಸಂಚಲನ ನಡೆಸಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಭಾರತ್ ಆಸ್ಪತ್ರೆ
ಮೈಸೂರು: ಹೆಬ್ಬಾಳಿನ ವರ್ತುಲ ರಸ್ತೆಯಲ್ಲಿರುವ ಭಾರತ್ ಆಸ್ಪತ್ರೆ ಮತ್ತು ಗಂಥಿ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ವೈದ್ಯಕೀಯ ಅಧೀಕ್ಷಕ ಡಾ.ಎಂ.ಎಸ್. ವಿಶ್ವೇಶ್ವರ ಧ್ವಜಾರೋಹಣ ನೆರವೇರಿಸಿದರು. ಭದ್ರತಾ ಅಧಿಕಾರಿ ಎಂ.ಸಿ.ಎಸ್. ಪ್ರಸಾದ್, ಪ್ರಧಾನ ವ್ಯವಸ್ಥಾಪಕ ಕೆ.ಪಿ. ಶಿವಪ್ರಸಾದ್, ಕೇಂದ್ರ ವ್ಯವಸ್ಥಾಪಕ ಎನ್. ಲೋಕೇಶ್ ಇದ್ದರು.
ಮೈಸೂರು ಜಿಪಂ
ಮೈಸೂರು ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ. ಮಹದೇವು ಧ್ವಜಾರೋಹಣ ನೆರವೇರಿಸಿದರು. ಸಿಇಒ ಪಿ.ಎ. ಗೋಪಾಲ್, ಪ್ರಕಾಶ್, ಪ್ರಭುಸ್ವಾಮಿ, ಮಾದಪ್ಪ ಇದ್ದರು.
ವಿದ್ಯಾನಿಕೇತನ ಶಾಲೆ
ರಾಮಕೃಷ್ಣನಗರದ ವಿಶ್ವಮಾನವ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ವಿಶ್ರಾಂತ ಪ್ರಾಂಶುಪಾಲ ಪ್ರೊ.ಮಲ್ಲಿಕಾರ್ಜುನಸ್ವಾಮಿ ಧ್ವಜಾರೋಹಣ ನೇರವೇರಿಸಿದರು. ಪ್ರೊ.ಚಂದ್ರಶೇಖರಗೌಡ, ಮಾರುತಿ, ವಸುಂಧರಾ ಸೇನ್, ಚಂದ್ರು ಇದ್ದರು.
ಎಸ್ಡಿಎಂ ಐಎಂಡಿ ಸಂಸ್ಥೆ
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಎಸ್ಡಿಎಂ ಐಎಂಡಿ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಹಿರಿಯ ಪ್ರಾಧ್ಯಾಪಕ ಮಾಲತಿ ಶ್ರೀರಾಂ, ಪ್ರೊ.ಗೋವಿಂದ ಶರ್ಮಾ, ತರಬೇತುದಾರ ಎ.ಆರ್. ದ್ವಾರಕನಾಥ, ನಿರ್ದೇಶಕ ಡಾ.ಎನ್.ಆರ್. ಪರಶುರಾಮನ್, ಉಪನಿರ್ದೇಶಕ ಡಾ.ಎಚ್. ಗಾಯತ್ರಿ ಇದ್ದರು.
ಎಂಜಿನಿಯರುಗಳ ಸಂಸ್ಥೆ
ನಗರದ ಎಂಜಿನಿಯರುಗಳ ಸಂಸ್ಥೆಯ ಆವರಣದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಟಿ. ಅನಂತಪದ್ಮನಾಭ ಧ್ವಜಾರೋಹಣ ನೆರವೇರಿಸಿದರು. ಪದಾಧಿಕಾರಿಗಳಾದ ಡಾ.ಸಿ.ಎನ್. ಬಾಬು, ಕೆ.ಎನ್. ಸುಬ್ಬರಾವ್, ಪಿ.ಜೆ. ಭಾರದ್ವಾಜ್, ಬಾಪು ಸತ್ಯನಾರಾಯಣ, ಎ.ಎಸ್. ಸತೀಶ್, ಪಿ. ಸಂಪತ್ತು, ಎಂ.ಡಿ. ವಿದ್ಯಾನಂದ ಭಾಗವಹಿಸಿದ್ದರು.
ವಿವಿಧೆಡೆ ಗಣರಾಜ್ಯೋತ್ಸವ
ಮೈಸೂರು: ಮಾನಸಗಂಗೋತ್ರಿಯಲ್ಲಿರುವ ಗಂಗೋತ್ರಿ ನರ್ಸರಿ, ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 65ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಶ್ರೀಕಂಠ ಶರ್ಮಾ, ಶಾಲೆಯ ಅಧ್ಯಕ್ಷ ಟಿ. ರಂಗಪ್ಪ, ಶಿಕ್ಷಕಿ ಕಾಂತಿನಾಯಕ್ ಅತಿಥಿಯಾಗಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

