ಮೈಸೂರು

ಡಬ್ಬಿಂಗ್ಗೆ ಹಲವು ಸಂಘಟನೆಗಳ ವಿರೋಧ

Published On :

ಕ.ಪ್ರ.ವಾರ್ತೆ     ಮೈಸೂರು     ಜ. 27
ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ವಿರೋಧಿಸಿ ವಿವಿಧ ಸಂಘಟನೆಯವರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟಿಸಿದರು.
ಕನ್ನಡ ಚಲನಚಿತ್ರ ಡಬ್ಬಿಂಗ್ ವಿರೋಧಿ ಚಳವಳಿ ಬೆಂಬಲಿಸಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಕನ್ನಡ ಚಳವಳಿ ಸಮಿತಿ, ಮೈಸೂರು ಕನ್ನಡ ವೇದಿಕೆಯವರು ಸಂಯುಕ್ತವಾಗಿ ಪ್ರತಿಭಟಿಸಿದರು. ಮೈಸೂರಿನಲ್ಲಿರುವ ಚಲನಚಿತ್ರ, ರಂಗಭೂಮಿ ಕಲಾವಿದರು, ಕನ್ನಡಪರ ಹೋರಾಟಗಾರರು ಒಕ್ಕೊರಲಿನಿಂದ ಡಬ್ಬಿಂಗ್ ವಿರೋಧಿಸಿದರು.
ಕೆಲವು ಸ್ವಾರ್ಥಿಗಳು ವ್ಯಾಪಾರ ಮನೋಭಾವದಿಂದ ಡಬ್ಬಿಂಗ್ ನೀತಿ ಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ. ಇದರಿಂದ ಕನ್ನಡ ಚಿತ್ರರಂಗ ಮಾರಕವಾಗಲಿದೆ. ಡಬ್ಬಿಂಗ್ ತುಂಬಾ ಅಪಾಯಕಾರಿ. ಕನ್ನಡ ಭಾಷೆ, ಸಂಸ್ಕೃತಿಗೆ ಧಕ್ಕೆ ತರುವ ಡಬ್ಬಿಂಗ್ ಬೇಡವೇ ಬೇಡ ಎಂದು ಅವರು ಒತ್ತಾಯಿಸಿದರು.
ಚಲನಚಿತ್ರ ನಟ ಶಂಕರ್ ಅಶ್ವತ್ಥ್, ರಂಗಕರ್ಮಿ ರಾಜಶೇಖರ ಕದಂಬ, ಕಸಾಪ ಜಿಲ್ಲಾಧ್ಯಕ್ಷ ಎಂ. ಚಂದ್ರಶೇಖರ್, ನಗರಪಾಲಿಕೆ ಸದಸ್ಯ ಮ.ವಿ. ರಾಮಪ್ರಸಾದ್, ವಿವಿಧ ಸಂಘಟನೆಗಳ ಮುಖಂಡರಾದ ಮೂಗೂರು ನಂಜುಂಡಸ್ವಾಮಿ, ಪ್ರಕಾಶ್ ಶಣೈ, ಪಿ.ಸಿ. ನಾಗರಾಜ್, ಎಸ್. ಬಾಲಕೃಷ್ಣ, ಸರೇಶ್ಬಾಬು, ವೆಂಕಟೇಶ್, ವಿಜಯಕುಮಾರ್, ಎಂ.ಬಿ. ವಿಶ್ವನಾಥ್, ಸಂಜಯ್, ಬಾಬು ಇದ್ದರು.
ಕರ್ನಾಟಕ ಸೇವಾ ಪಡೆ: ವಾಟಾಳ್ ನಾಗರಾಜ್ ಕರೆ ನೀಡಿರುವ ಚಿತ್ರೋದ್ಯಮ ಬಂದ್ ಬೆಂಬಲಿಸಿ ಕರ್ನಾಟಕ ಸೇವಾ ಪಡೆಯವರು ಸಹ ಪ್ರತಿಭಟಿಸಿದರು.
ಡಬ್ಬಿಂಗ್ ಬಂದರೆ ಕನ್ನಡದ ಕಲಾವಿದರಿಗೆ ಬಹಳ ಸಮಸ್ಯೆಯಾಗುತ್ತದೆ. ಸಾವಿರಾರು ತಂತ್ರಜ್ಞರು ಕೆಲಸ ಕಳೆದುಕೊಂಡು ಬೀದಿಪಾಲಾಗುತ್ತಾರೆ. ಕನ್ನಡ ಕಲಾವಿದರಿಗೆ ಕೆಲಸ ಇಲ್ಲದಂತಾಗುತ್ತದೆ. ಹೀಗಾಗಿ ಕನ್ನಡದಲ್ಲಿ ಡಬ್ಬಿಂಗ್ ಬೇಡವೇ ಬೇಡ ಎಂದು ಅವರು ಆಗ್ರಹಿಸಿದರು.
ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ಗೌಡ, ಮುಖಂಡರಾದ ಆರ್. ಮನಮೋಹನ್, ಜೆ.ಪಿ. ಗೌಡ, ರ. ನಾರಾಯಣಗೌಡ, ಪ್ರಭುಶಂಕರ್, ಪ್ರಜೀಶ್, ಜಗದೀಶ್, ಕೃಷ್ಣ, ದೇವರಾಜು, ರಘುರಾಮ್, ಭರತ್, ಪ್ರಶಾಂತ್, ಸುಬ್ಬೇಗೌಡ, ಗುರು, ರಮೇಶ್, ಅಜಿತ್, ವಿಜಯ್, ಮನು, ನಿಖಿಲ್, ರವಿ, ದೀಪಕ್ ಶೆಟ್ಟಿ, ತಿಲಕ್, ಮದನ್, ನವೀನ್, ನಟರಾಜು, ಶಶಾಂಕ್ ಇದ್ದರು.
ಸಿಂಹದಮರಿ, ಅಪ್ಪು ಅಭಿಮಾನಿಗಳು: ಕನ್ನಡ ಚಲನಚಿತ್ರ ರಂಗವು ಡಬ್ಬಿಂಗ್ ವಿರೋಧಿಸಿ ಹಮ್ಮಿಕೊಂಡಿರುವ ಬಂದ್ ಬೆಂಬಲಿಸಿ ಸಿಂಹದಮರಿ ಶಿವರಾಜ್ಕುಮಾರ್ ಮತ್ತು ಅಪ್ಪು ಅಭಿಮಾನಿಗಳ ಸಂಘದವರು ಸಹ ಪ್ರತಿಭಟಿಸಿದರು.
ಡಬ್ಬಿಂಗ್ಗೆ ಅನುಮತಿ ದೊರೆತರೆ ಕನ್ನಡ ಚಿತ್ರರಂಗಕ್ಕೆ ಮಾರಕವಾಗಲಿದೆ. ಪರಭಾಷೆ ಚಿತ್ರಗಳ ಹಾವಳಿ ಮಿತಿ ಮೀರುತ್ತದೆ. ಇದರಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಬಲವಾದ ಪೆಟ್ಟು ಬೀಳುವ ಅಪಾಯವಿದೆ. ಕನ್ನಡದಲ್ಲಿ ಡಬ್ಬಿಂಗ್ಗೆ ಅವಕಾಶ ನೀಡಬಾರದು ಎಂದು ಅವರು ಒತ್ತಾಯಿಸಿದರು. ಸಂಘದ ಗೌರವಾಧ್ಯಕ್ಷ ಕೆ.ದಿನೇಶ್, ಅಧ್ಯಕ್ಷ ನಂಜುಂಡಸ್ವಾಮಿ, ಮುಖಂಡರಾದ ರಘು, ಪುನಿತ್ಕುಮಾರ್, ಪುರುಷೋತ್ತಮ್, ಮಂಜು, ಕಿರಣ್ಕುಮಾರ್, ನವೀನ್, ದಿನೇಶ್, ಸುರೇಶ್, ದರ್ಶನ್, ಸುನಿಲ್, ಪ್ರೀತಮ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.