ನಾಳೆಯಿಂದ ಗಂಗಾದೇವಿ ಅವರಿಂದ ಪ್ರವಚನ
ಮೈಸೂರು: ಧಾರವಾಡದ ಅಕ್ಕಮಹಾದೇವಿ ಪೀಠದ ಶ್ರೀ ಮಾತೆ ಗಂಗಾದೇವಿ ಅವರು ಕಾಡಾ ಕಚೇರಿ ಆವರಣದಲ್ಲಿ ಜ.30 ರಿಂದ ಐದು ವಾರಗಳ ಕಾಲ ವಿಶ್ವಧರ್ಮ ಪ್ರವಚನ ನೀಡುವರು ಎಂದು ಕೂಡಲಸಂಗಮದ ಬಸವ ಧರ್ಮಪೀಠದ ಶ್ರೀ ಸದ್ಗುರು ಮಹಾದೇಶ್ವರ ಸ್ವಾಮೀಜಿ ತಿಳಿಸಿದರು. ಜ.30ರ ಸಂಜೆ 6.30ಕ್ಕೆ ವಿಶ್ವಧರ್ಮ ಪ್ರವಚನ ಉದ್ಘಾಟನೆ ನೆರವೇರಲಿದ್ದು, ಹೊಸಮಠದ ಶ್ರೀ ಚಿದಾನಂದಸ್ವಾಮೀಜಿ, ಅನ್ನದಾನೇಶ್ವರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮತ್ತು ಸದ್ಗುರು ಮಹಾದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮೇಯರ್ ಎನ್.ಎಂ. ರಾಜೇಶ್ವರಿ ಧ್ವಜಾರೋಹಣ ನೆರವೇರಿಸುವರು. ಜಿಲ್ಲಾಧಿಕಾರಿ ಸಿ.ಶಿಖಾ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಉಪ ಮೇಯರ್ ಶಾರದಮ್ಮ, ಬಸವೇಶ್ವರ ಮೆಡಿಕಲ್ಸ್‌ನ ಮಧು, ವಿ.ಶಿವಶಂಕರ್, ವಕೀಲ ಗುರುಪ್ರಸಾದ್ ಮುಖ್ಯ ಅತಿಥಿಯಾಗಿ ಆಗಮಿಸುವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜ.30 ರಿಂದ ಐದು ವಾರಗಳ ಕಾಲ ಪ್ರತಿದಿನ ಸಂಜೆ 6.30 ರಿಂದ 8.30 ರವರೆಗೆ ಶ್ರೀ ಮಾತೆ ಗಂಗಾದೇವಿ ಪ್ರವಚನ ನೀಡುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

