ಮೈಸೂರು

ಕಂಬಾರರ ವಿರುದ್ಧ ನಟ ಪ್ರೇಮ್ ಹೇಳಿಕೆಗೆ ಖಂಡನೆ

Published On :

ಮೈಸೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರ ಬಗ್ಗೆ ನಟ ಪ್ರೇಮ್ ನೀಡಿರುವ ಹೇಳಿಕೆಯನ್ನು ಮೈಸೂರು ನಗರ ಜನ ಜಾಗೃತಿ ಸಮಿತಿ ಖಂಡಿಸಿದೆ.
ಚಂದ್ರಶೇಖರ ಕಂಬಾರ ಅವರಿಗೆ ನಾಚಿಕೆ ಆಗಬೇಕು ಎಂದಿರುವ ಪ್ರೇಮ್ ಹೇಳಿಕೆ ಸರಿಯಲ್ಲ. ಕನ್ನಡ ನಾಡು- ನುಡಿಯ ರಕ್ಷಣೆಯನ್ನು ಯಾರಿಗೂ ಗುತ್ತಿಗೆಗೆ ಕೊಟ್ಟಿಲ್ಲ. ಕನ್ನಡ ಭಾಷೆ ಚಲನಚಿತ್ರದವರ ಆಸ್ತಿಯಲ್ಲ. ಡಬ್ಬಿಂಗ್ ವಿಷಯ ನ್ಯಾಯಾಲಯದಲ್ಲಿದೆ. ಪ್ರಜಾಪ್ರಭುತ್ವದ ಈ ದೇಶದಲ್ಲಿ ನ್ಯಾಯಾಂಗದ ಬಗ್ಗೆ ನಂಬಿಕೆ ಇರಬೇಕು ಎಂದು ಸಮಿತಿ ಅಧ್ಯಕ್ಷ ಎಂ.ಎಲ್. ರಾಜು ಕಿವಿಮಾತು ಹೇಳಿದ್ದಾರೆ.
ಕಂಬಾರರ ಅಭಿಪ್ರಾಯಕ್ಕೆ ಗೂಂಡಾಗಿರಿ ಪ್ರದರ್ಶಿಸುವುದು ಸರಿಯಲ್ಲ. ಒಳ್ಳೆಯ ಕತೆ ಇರುವ ಸಿನಿಮಾವನ್ನು ಜನ ಇಷ್ಟಪಡುತ್ತಾರೆ. ಆದ್ದರಿಂದ ಮೊದಲು ಸಾಹಿತಿಗಳಿಗೆ ಉತ್ತೇಜನ ನೀಡಬೇಕು. ತಮ್ಮ ನಿರ್ಧಾರವೆ ಸರಿ ಎನ್ನುವುದು ಮೂರ್ಖತನ ಎಂದು ಅವರು ಟೀಕಿಸಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.