ಮೈಸೂರು

'ಐಟಿ ಕೆಲಸ ಗಳಿಸಲು ಪಂಚತಂತ್ರ ಕಲಿಯಿರಿ'

Published On :

ಕ.ಪ್ರ. ವಾರ್ತೆ, ಮೈಸೂರು, ಜ. 30
ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಪಡೆಯಲು ಮಹಾಭಾರತದ ಪಂಚತಂತ್ರ ಕಲಿಯಿರಿ ಎಂದು ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿ  ಅಧಿಕಾರಿ ಡಾ.ಯು.ಬಿ. ಪವನಜ ಕಿವಿಮಾತು ಹೇಳಿದರು.
ಮೈಸೂರು ವಿವಿಯ ಸಾಮರ್ಥ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೇವಾ ಕೇಂದ್ರ (ಸಿಪಿಡಿಪಿಎಸ್) ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ 'ಐಟಿ ಕ್ಷೇತ್ರದಲ್ಲಿ ಕೆಲಸ ಗಿಟ್ಟಿಸುವುದು ಹೇಗೆ?' ವಿಷಯ ಕುರಿತು ಅವರು ಮಾತನಾಡಿದರು.
ಐಟಿ ಕ್ಷೇತ್ರಕ್ಕೆ ಬೇಕಾಗಿರುವುದು ಬುದ್ಧಿವಂತಿಕೆ ಹೊರತು ಭಾಷೆ ಹಾಗೂ ಸಂವಹನ ಕಲೆಯಲ್ಲ. ಕೇವಲ ಉತ್ತಮ ಅಂಕ ಗಳಿಸಿದರೂ ಸಹ ಅಲ್ಲಿ ಕೆಲಸ ಸಿಗುವುದು ಸುಲಭವಲ್ಲ. ಬದಲಾಗಿ ಉದ್ಯಮದ ಸಮಸ್ಯೆಯನ್ನು ಹಾಗೂ ಪ್ರಸ್ತುತ ಸವಾಲುಗಳನ್ನು ಎದುರಿಸುವ ಚತುರತೆ ಹಾಗೂ ತಾರ್ಕಿಕ ಆಲೋಚನೆಯ ಸಾಮರ್ಥ್ಯ ಹೊಂದಿದಾಗ ಮಾತ್ರ ಯಶಸ್ಸಾಗಬಹುದು ಎಂದರು.  ಮಹಾಭಾರತವನ್ನು ಓದುವ ಮೂಲಕ ಅದರಲ್ಲಿ ಬರುವ ಸುಧನ್ವ, ಹಿರಣ್ಯಕಶ್ಯಪ, ಪ್ರಹ್ಲಾದ ಮುಂತಾದ ಪಾತ್ರಗಳಲ್ಲಿನ ಮಹತ್ವವನ್ನು ಹಾಗೂ ಅವರ ತಂತ್ರಗಾರಿಕೆಯನ್ನು ಅರಿಯಬೇಕು. ಅದನ್ನು ಬಿಟ್ಟು ಫೇಸ್ ಬುಕ್, ಟ್ವಿಟರ್ ಮುಂತಾದವುಗಳಲ್ಲಿ ಕಾಲಹರಣ ಮಾಡಬಾರದು. ತಂತ್ರಜ್ಞಾನವನ್ನು ಒಳ್ಳೆಯದಕ್ಕೆ ಮಾತ್ರ ಉಪಯೋಗಿಸಿಕೊಳ್ಳುವಲ್ಲಿ ಯುವಜನತೆ ಮುಂದಾಗಬೇಕು ಎಂದು ಸಲಹೆ ನೀಡಿದರು.     
ಸಂಸ್ಥೆ ನಿರ್ದೇಶಕ ಡಾ. ನಿರಂಜನ ವಾನಳ್ಳಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.