ಮೈಸೂರು

ಕೆ.ಆರ್. ನಗರ:15 ರಂದು ಸಾಮೂಹಿಕ ವಿವಾಹ

Published On :

ಕೆ.ಆರ್. ನಗರ: ಪಟ್ಟಣದ ಜಾಮೀಯ ಮಸೀದಿ ಕಮಿಟಿ ವತಿಯಿಂದ ಈದ್ ಮಿಲಾದ್ ಹಬ್ಬದ ಅಂಗವಾಗಿ ಫೆ. 15ರಂದು 10 ಜೋಡಿ ಸಾಮೂಹಿಕ ವಿವಾಹ ಏರ್ಪಡಿಸಿದೆ ಎಂದು ಮೂಳೆತಜ್ಞ ಡಾ. ಮೆಹಬೂಬ್ ಖಾನ್ ಹೇಳಿದರು.
ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿ, ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲು ಸಮಿತಿ ನಿರ್ಧರಿಸಿರುವುದರಿಂದ ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ ಎಂದು  ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಮೂಹಿಕ ವಿವಾಹವಾಗುವ ವಧು-ವರರಿಗೆ ತಲಾ 5 ಜೊತೆ ಬಟ್ಟೆ, ಗೃಹಪಯೋಗಿ ವಸ್ತುಗಳು ಸೇರಿದಂತೆ ಉಡುಪು ಮತ್ತು ವಸ್ತ್ರಗಳನ್ನು ಉಚಿತವಾಗಿ ನೀಡಲಿದ್ದು, ಅಂದು ಸಾರ್ವಜನಿಕರಿಗೆ ಭೋಜನದ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಫೆ. 14 ರಂದು ಈದ್ ಮಿಲಾದ್ ಹಬ್ಬ, ಫೆ. 15 ರಂದು ಸಾಮೂಹಿಕ ವಿವಾಹ ಸಮಾರಂಭ ನಡೆಯಲಿರುವ ಹಿನ್ನಲೆ ಈಗಾಗಲೇ ಸಮಿತಿ ಸಿದ್ದತೆ ಕೈಗೊಂಡಿದ್ದು, 10 ಜೋಡಿ ವಧು-ವರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಜೊತೆಗೆ ಈದ್ ಮಿಲಾದ್ ಪ್ರಯುಕ್ತ 14ರ ಸಂಜೆ ಶುಭ ಶುಕ್ರವಾರದ ವಿಶೇಷ ಪ್ರಾರ್ಥನೆ ಹಾಗೂ ಪ್ರವಾದಿ ಮೊಹಮದ್ ಪೈಗಂಬರ್ ದಿವ್ಯ ವಸ್ತುಗಳ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು. ಶಾಸಕರಾದ ಸಾ.ರಾ. ಮಹೇಶ್, ತನ್ವೀರ್ಸೇಠ್, ಸಂಸದರಾದ ಎಚ್. ವಿಶ್ವನಾಥ್, ರಮ್ಯಾ, ಮಾಜಿ ಶಾಸಕ ಶಂಕರಲಿಂಗೇಗೌಡ, ಸಿ.ಎಂ. ಇಬ್ರಾಹಿಂ, ದೊಡ್ಡಸ್ವಾಮೇಗೌಡ, ತಹಸೀಲ್ದಾರ್ ವೀಣಾ, ಪುರಸಭಾ ಮುಖ್ಯಾಧಿಕಾರಿ ಚಿಕ್ಕನಂಜಯ್ಯ ಭಾಗವಹಿಸುವರು. ಮಾಹಿತಿಗಾಗಿ ಮೊ. 94480-21360, 97313-59599 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.