ಕಸ ತೆಗೆಯಲು ಸಾಹಸ
ಟಿ ಮಾ. ವೆಂಕಟೇಶ್
ಮೈಸೂರು: ಇದು ಮೈಸೂರು ನಗರದ ವಿವಿಧ ವಾರ್ಡ್ಗಳಿಗಿಂತ ಹೆಚ್ಚಿನ ದೊಡ್ಡಮೋರಿ ಹೊಂದಿರುವ ತಾಣ. ರಾಜ ಮಹಾರಾಜರ ಕಾಲದಲ್ಲಿ ಇಂತಹ ಮಳೆ ನೀರಿನ ಮೋರಿಗಳನ್ನು ಈ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಆದರೆ ಅದನ್ನು ಸಮರ್ಪಕವಾಗಿ ಸ್ವಚ್ಛ ಮಾಡಲು ಪರಿತಪಿಸುವಂತಾಗಿದೆ.
ರಾಮಚಂದ್ರ ಅಗ್ರಹಾರ ಹೆಸರಿನ ವಾರ್ಡ್ ಸಂಖ್ಯೆ 4ರಲ್ಲಿ ಇಂತಹ ದೊಡ್ಡ ಮೋರಿಗಳಿವೆ. ವಾರ್ಡ್ನ ಉತ್ತರ ಭಾಗದಲ್ಲಿ ಅಗ್ರಹಾರದ ಮಾಧವರಾವ್ ವೃತ್ತ, ಎಂ.ಜಿ.ರಸ್ತೆ, ಬಿ.ಎನ್ ರಸ್ತೆ ಮೇಲ್ಸೇತುವೆ, ಪೂರ್ವದಲ್ಲಿ ದೊಡ್ಡಕೆರೆ ಏರಿಯ ತಿರುವು, ಲಾರಿ ಟರ್ಮಿನಲ್ ವೃತ್ತ, ಹರಿಶ್ಚಂದ್ರ ಘಾಟ್, ಚಾಮುಂಡಿ ಬೆಟ್ಟದ ತಪ್ಪಲು, ದಕ್ಷಿಣ ಭಾಗದಲ್ಲಿ ನಂಜುಮಳಿಗೆ ರಸ್ತೆ, ಜೆಎಸ್ಎಸ್ ಕಾಲೇಜು ಹಾಗೂ ಜೆಎಲ್ಬಿ ರಸ್ತೆಯ ಮುಖಾಂತರ ಕಂಸಾಳೆ ವೃತ್ತದವರೆಗೆ ಒಳಗೊಂಡಿವೆ.
ಈ ಪ್ರದೇಶದಲ್ಲಿ ಹೊಸ ಬಂಡಿಕೇರಿ, ರಾಮಾನುಜ ರಸ್ತೆ, ಮಧುವನ ಬ್ಲಾಕ್ ಮುಂತಾದ ಭಾಗಗಳಲ್ಲಿ ದೊಡ್ಡ ಮೋರಿಗಳಿವೆ. ಇದರಲ್ಲಿರುವ ತ್ಯಾಜ್ಯವನ್ನು ಸ್ವಚ್ಛ ಮಾಡಬೇಕಾದರೆ ಪುರುಷ ಪೌರಕಾರ್ಮಿಕರು ಅಗತ್ಯ. ವಾರ್ಡ್ ವ್ಯಾಪ್ತಿಯಲ್ಲಿ ಪಾಲಿಕೆಯಿಂದ 21 ಮಂದಿ ಕಾಯಂ ಪೌರಕಾರ್ಮಿಕರು ಹಾಗೂ 11 ಮಂದಿ ಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಪಾಲಿಕೆಯಿಂದ 19 ಮಂದಿ ಹಾಗೂ ಗುತ್ತಿಗೆ ಕಡೆಯಿಂದ 7 ಮಂದಿ ಮಹಿಳಾ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ದೊಡ್ಡಮೋರಿಗಳಿಗೆ ಇಳಿದು ಕಸವನ್ನು ತೆಗೆಯಬೇಕಾದರೆ ಪುರುಷ ಪೌರಕಾರ್ಮಿಕರು ಅವಶ್ಯಕ. ಆದರೆ ಅವರ ಸಂಖ್ಯೆ ಕಡಿಮೆ ಇರುವುದರಿಂದ ಸ್ವಚ್ಛತೆಗೆ ಅಡ್ಡಿಯಾಗಿದೆ.
ಕಟ್ಟಿಕೊಂಡ ಕಸ: ಹೊಸದಾಗಿ ಪಾಲಿಕೆಯು ನಿರ್ಮಿಸಿರುವ ಮೋರಿಗಳ ಮೇಲ್ಭಾಗವನ್ನು ಕ್ರಾಂಕಿಟ್ನಿಂದ ಮುಚ್ಚಲಾಗಿದ್ದು, ಈಗಾಗಲೇ ಅದರೊಳಗೆ ಕಸ ಕಟ್ಟಿಕೊಂಡಿದ್ದು, ಅದನ್ನು ತಗೆಯಲು ದುಸ್ಸಾಹಸ ಪಡುವಂತಾಗಿದೆ. ವಿಧಿ ಇಲ್ಲದೆ ಈ ಹಿಂದೆ ಮಾಡಿರುವ ಕಾಮಗಾರಿಯನ್ನು ಒಡೆದು ಹಾಕಬೇಕಿದೆ. ಇಂತಹ ಮೋರಿಗಳಿಗೆ ಸಿಮೆಂಟ್ ಸ್ಲ್ಯಾಬ್ಗಳನ್ನು ಮುಚ್ಚಿದರೆ, ಕಸ ಕಟ್ಟಿಕೊಂಡಾಗ ಅದನ್ನು ತೆಗೆದು ಶುಚಿಗೊಳಿಸಲು ಸಾಧ್ಯವಾಗಲಿದೆ.
ಆಗಿನ ಕಾಲದಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಒಳಚರಂಡಿ ಮತ್ತು ಮಳೆ ನೀರಿನ ಮೋರಿ ನಿರ್ಮಿಸಲಾಗಿದೆ. ಆದರೆ ಇಂದು ಜನಸಂಖ್ಯೆ ಹೆಚ್ಚಾಗಿರುವ ಕಾಲಕ್ಕೆ ಅದನ್ನು ವಿಸ್ತರಣೆ ಆಗಬೇಕಿತ್ತು. ಆ ಕೆಲಸಕ್ಕೆ ನಗರ ಪಾಲಿಕೆ ಮುಂದಾಗಬೇಕು. ಅಲ್ಲದೆ ರಾಜ ಮಹಾರಾಜರ ಕಾಲದ ದೊಡ್ಡ ಮೋರಿಗಳ ನಿರ್ವಹಣೆಗೆ ಸೂಕ್ತ ಸಿಬ್ಬಂದಿಯನ್ನು ನೇಮಿಸಬೇಕು ಎಂಬುದು ನಿವಾಸಿಗಳ ಆಶಯ.
ಕಸದ ತೊಟ್ಟಿ
ಮನೆ ಮನೆಯಿಂದ ಸಂಗ್ರಹಿಸುವ ಕಸವನ್ನು ತಂದು ಹಾಕುವ ಸಲುವಾಗಿ ಈ ಭಾಗದ ರಾಮಾನುಜ ರಸ್ತೆಯ ಜೆಎಸ್ಎಸ್ ಆಸ್ಪತ್ರೆಯ ಬಳಿ ಹಾಗೂ ಬಿ.ಬಿ. ಗಾರ್ಡನ್ 2ನೇ ಮುಖ್ಯ ರಸ್ತೆಯ ಬಳಿ ಕಸ ತೊಟ್ಟಿಗಳನ್ನು ಕಲ್ಪಿಸಲಾಗಿದೆ. ವಾರ್ಡ್ನಲ್ಲಿ 2800ಕ್ಕೂ ಅಧಿಕ ಮನೆ, 14 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಹಾಗೂ 300ಕ್ಕೂ ಹೆಚ್ಚಿನ ವಾಣಿಜ್ಯ ಉದ್ದಿಮೆಗಳಿವೆ. ಇದಕ್ಕೆ ತಕ್ಕಂತೆ ತ್ಯಾಜ್ಯ ಸಂಗ್ರಹ ಹಾಗೂ ನಿರ್ವಹಣೆಗೆ ಅಧಿಕಾರಿಗಳು ಗಮನ ಹರಿಸಿದಾಗ ಉತ್ತಮ ಪರಿಸರ ನಿರ್ಮಾಣವಾಗಲಿದೆ.
ಈ ವಾರ್ಡ್ ವ್ಯಾಪ್ತಿಯಲ್ಲಿ ಪಾಲಿಕೆಯಿಂದ 21 ಮಂದಿ ಕಾಯಂ ಪೌರಕಾರ್ಮಿಕರು ಹಾಗೂ 11 ಮಂದಿ ಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಪಾಲಿಕೆಯಿಂದ 19 ಮಂದಿ ಹಾಗೂ ಗುತ್ತಿಗೆ ಕಡೆಯಿಂದ 7 ಮಂದಿ ಮಹಿಳಾ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ದೊಡ್ಡಮೋರಿಗಳಿಗೆ ಇಳಿದು ಕಸವನ್ನು ತೆಗೆಯಬೇಕಾದರೆ ಪುರುಷ ಪೌರಕಾರ್ಮಿಕರು ಅವಶ್ಯಕ. ಆದರೆ ಅವರ ಸಂಖ್ಯೆ ಕಡಿಮೆ ಇರುವುದರಿಂದ ಸ್ವಚ್ಛತೆಗೆ ಅಡ್ಡಿಯಾಗಿದೆ. ಈ ಬಗ್ಗೆ ಈಗಾಗಲೇ ಮೇಯರ್ ಹಾಗೂ ಆಯುಕ್ತರ ಗಮನ ಸೆಳೆಯಲಾಗಿದೆ.
ಟಿ ಸುನಿಲ್ ಕುಮಾರ್, ವಾರ್ಡ್ 4, ನಗರ ಪಾಲಿಕೆ ಸದಸ್ಯರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

